‘ಸು ಫ್ರಮ್ ಸೋ’ ಚಿತ್ರದಲ್ಲಿ ಈ ಪಾತ್ರಗಳೇ ಹೈಲೈಟ್; ಮಿಸ್ ಮಾಡಲೇಬಾರದು

Updated on: Jul 25, 2025 | 12:55 PM

‘ಸು ಫ್ರಮ್ ಸೋ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಮೂಡಿತ್ತು. ಆ ನೀರೀಕ್ಷೆಯನ್ನು ಮೀರಿ ಸಿನಿಮಾ ಮೆಚ್ಚುಗೆ ಪಡೆಯುತ್ತಿದೆ. ಈ ಚಿತ್ರದ ಪಾತ್ರವರ್ಗ ಹಾಗೂ ಪಾತ್ರಗಳ ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ. ಈ ಸಿನಿಮಾ ಹೇಗಿದೆ ಎಂಬುದರ ವಿವರ ಕೂಡ ಇಲ್ಲಿದೆ.

1 / 8
‘ಸು ಫ್ರಮ್ ಸೋ’ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಜನರ ಮನ ಗೆದ್ದಿದೆ. ಈ ಚಿತ್ರವನ್ನು ಅವರು ನಿರ್ಮಾಣ ಮಾಡುವಂಥ ಬೋಲ್ಡ್ ನಿರ್ಧಾರ ತೆಗೆದುಕೊಂಡಿದ್ದಾರೆ ಅನ್ನೋದು ವಿಶೇಷ.

2 / 8
ಜೆಪಿ ತುಮಿನಾಡ್ ಅವರು ‘ಸು ಫ್ರಮ್ ಸೋ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಜೊತೆಗೆ ಅಶೋಕ್ ಹೆಸರಿನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅವರು ಇಡೀ ಚಿತ್ರವನ್ನು ಒಳ್ಳೆಯ ರೀತಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

3 / 8
ಶನೀಲ್ ಗೌತಮ್ ಅವರು ರವಿ ಆಗಿ ಮಿಂಚಿದ್ದಾರೆ. ಈ ಪಾತ್ರ ಸಿನಿಮಾ ಉದ್ದಕ್ಕೂ ಹೈಲೈಟ್ ಆಗಿದೆ. ‘ರವಿ ಅಣ್ಣ, ರವಿ ಅಣ್ಣ’ ಎಂಬುದೇ ಸಿನಿಮಾ ಪಾತ್ರದ ಹೆಸರು. ಈ ಪಾತ್ರಕ್ಕೆ ಸಾಕಷ್ಟು ತೂಕ ಇದೆ.

4 / 8
ಪ್ರಕಾಶ್ ತುಮಿನಾಡ್ ಅವರು ಈ ಮೊದಲು ಕೂಡ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ರಂಗಭೂಮಿ ಹಿನ್ನೆಲೆ ಹೊಂದಿರುವ ಅವರು ಸಿನಿಮಾಗಳ ಮೂಲಕ ಮಿಂಚುತ್ತಿದ್ದಾರೆ. ಸಿನಿಮಾದಲ್ಲಿ ಚಂದ್ರ ಹೆಸರಿನ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ.

5 / 8
ದೀಪಕ್ ರೈ ಪಣಜೆ ಅವರು ಸತೀಶ ಹೆಸರಿನ ಪಾತ್ರ ಮಾಡಿದ್ದಾರೆ. ಅವರು 13 ಸಾವಿರಕ್ಕೂ ಅಧಿಕ ನಾಟಕ ಮಾಡಿದ್ದಾರೆ. ಅವರು ಇಡೀ ದಿನ ಕುಡಿಯುತ್ತಾ ಸಮಯ ಕಳೆಯುವ ವ್ಯಕ್ತಿಯಾಗಿ ಅವರು ಮಿಂಚಿ ಗಮನ ಸೆಳೆದಿದ್ದಾರೆ.

6 / 8
ಮೈಮ್ ರಾಮ್ ದಾಸ್ ಅವರು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ರವಿಗೆ ವಿರೋಧಿ ಗ್ಯಾಂಗ್ ಆಗಿ ಕಾಣಿಸಿಕೊಂಡಿದ್ದಾರೆ ಅವರು. ಮೈಮ್ ರಾಮ್ ದಾಸ್ ಈ ಮೊದಲು ‘ಒಂದು ಮೊಟ್ಟೆಯ ಕಥೆ’ಯ ಭಾಗ ಕೂಡ ಆಗಿದ್ದರು.

7 / 8
‘ಸು ಫ್ರಮ್ ಸೋ’ ಚಿತ್ರದಲ್ಲಿ ಭಾನು ಹೆಸರಿನ ಪಾತ್ರ ಬರುತ್ತದೆ. ಈ ಪಾತ್ರವು ಮಾಡಿದ್ದು ಸಂಧ್ಯ ಅರೆಕೆರೆ ಅವರು. ಮಧ್ಯಂತರದ ನಂತರ ಬಂದರೂ ಚಿತ್ರಕ್ಕೆ ಸಾಕಷ್ಟು ಬೇಡಿಕೆ ಇದೆ.

8 / 8
ಈ ಚಿತ್ರದಲ್ಲಿ ಬರೋ ಭಾವ ಹೆಸರಿನ ಪಾತ್ರ ಕೂಡ ಗಮನ ಸೆಳೆದಿದೆ. ಪಾತ್ರದ ಉದ್ದಕ್ಕೂ ಆ ಪಾತ್ರ ನಗಿಸುತ್ತದೆ. ಈ ಪಾತ್ರಕ್ಕಾಗಿ ವಿಶೇಷ ಹಾಡು ಕೂಡ ಇದೆ.