ನಟಿ, ಸಂಸದೆ ಸುಮಲತಾ ಅಂಬರೀಶ್ ನಿನ್ನೆ (ಆಗಸ್ಟ್ 26) ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.
ಸುಮಲತಾ ಅಂಬರೀಶ್ ತಮ್ಮ 60ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಂಡಿದ್ದಾರೆ.
ಚಿತ್ರರಂಗದ ಹಲವು ಗಣ್ಯರನ್ನು ಕರೆದು, ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ನಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಸುಮಲತಾ ಆಚರಿಸಿಕೊಂಡಿದ್ದಾರೆ.
ಸುಮಲತಾರ ಹುಟ್ಟುಹಬ್ಬ ಸಂಭ್ರಮದ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.
ಪುತ್ರ ಅಭಿಷೇಕ್ ಅಂಬರೀಶ್, ಸೊಸೆ ಅವಿವಾ ಬಿದಪ್ಪ ಸೇರಿದಂತೆ ಇನ್ನೂ ಹಲವು ಚಿತ್ರರಂಗದ ಗಣ್ಯರು, ಆಪ್ತೇಷ್ಟರು ಸುಮಲತಾ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದರು.
ಕಪ್ಪು ಮತ್ತು ಬಂಗಾರದ ಬಣ್ಣದ ಬಟ್ಟೆಯ ಥೀಮ್ನಲ್ಲಿ ಬಟ್ಟೆಗಳನ್ನು ಧರಿಸಿ ಅತಿಥಿಗಳು ಹುಟ್ಟುಹಬ್ಬಕ್ಕೆ ಹಾಜರಾಗಿದ್ದರು.
ಸೊಸೆ ಅವಿವಾ, ಅತ್ತೆಯೊಟ್ಟಿಗಿನ ಚಿತ್ರಗಳನ್ನು ಹಂಚಿಕೊಂಡು ವಿಶೇಷವಾಗಿ ಶುಭ ಕೋರಿದ್ದಾರೆ.
ಸೊಸೆ ಅವಿವಾ ಬಿದಪ್ಪ ಜೊತೆಗೆ ಸಂಸದೆ, ನಟಿ ಸುಮಲತಾ