ಧಾರವಾಡದಲ್ಲಿ ರಾಷ್ಟ್ರೀಯ ಮಟ್ಟದ ಬೈಕ್ ಡರ್ಟ್ ಟ್ರ್ಯಾಕ್ ಚಾಂಪಿಯನ್ ಶಿಪ್; ಇಲ್ಲಿವೆ ರೋಮಾಂಚನಕಾರಿ ರೇಸ್​ನ ಫೋಟೋಗಳು

ಅಲ್ಲಿ ಜಿದ್ದಿಗೆ ಬಿದ್ದು ಬೈಕ್ ಓಡಿಸುತ್ತಿದ್ದರು. ಹೀಗೆ ಓಡಿಸುವಾಗ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಮೇಲೆದ್ದು ಮತ್ತೆ ಫೀನಿಕ್ಸ್ ಹಕ್ಕಿಯಂತೆ ಎದ್ದು ನಿಂತು, ಬೈಕ್ ಮೇಲೆ ಹತ್ತಿ ಸ್ಪರ್ಧೆಯಲ್ಲಿ ಮುಂದುವರೆಯುತ್ತಿದ್ದರು. ಇಂಥ ರೋಮಾಂಚನವಾದ ಸ್ಪರ್ಧೆಗೆ ಸಾಕ್ಷಿಯಾಗಿದ್ದು ವಿದ್ಯಾಕಾಶಿ ಧಾರವಾಡ. ಹೌದು, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಬಳಿ ರಾಷ್ಟ್ರೀಯ ಮಟ್ಟದ ಬೈಕ್ ಡರ್ಟ್ ಟ್ರ್ಯಾಕ್ ಚಾಂಪಿಯನ್ ಶಿಪ್ ಆಯೋಜನೆ ಮಾಡಲಾಗಿತ್ತು.

ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 27, 2023 | 4:12 PM

ಸ್ಪರ್ಧೆಗೆ ಸಿದ್ಧರಾಗಿ ನಿಂತ ಬೈಕ್ ಸವಾರರು, ವಿಭಿನ್ನವಾದ ಮತ್ತು ಪವರ್​ ಫುಲ್ ಆಗಿರುವ ಬೈಕ್​ಗಳ ಎಕ್ಸ್​ಲೇಟರ್ ನೀಡಿ ರೇಸ್​ಗೆ ಸಿದ್ಧರಾಗಿ ನಿಂತ ಸ್ಪರ್ಧಾಳುಗಳು. ಅವರಿಗೆ ಹುರಿದುಂಬಿಸುತ್ತಿರುವ ರೇಸ್ ಪ್ರೀಯರು. ಬೈಕ್ ರೇಸ್ ಸ್ಪರ್ಧೆಯ ರೋಮಾಂಚನ ಘಳಿಗೆಗೆ ಸಾಕ್ಷಿಯಾಗಿ ನಿಲ್ಲಲು ಸಿದ್ಧಗೊಂಡಿರುವ ಹಾವಿನಂತೆ ಅಂಕುಡೊಂಕಾಗಿರುವ ರೇಸ್ ಟ್ರ್ಯಾಕ್. ಇದೆಲ್ಲ ಕಂಡು ಬಂದಿದ್ದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಳಿಯ ಮೈದಾನದಲ್ಲಿ.

1 / 8
ಹೀಗೆ ಬೈಕ್​ಗಳು ಒಂದರ ಹಿಂದೆ ಒಂದು ಜಿದ್ದಿಗೆ ಬಿದ್ದು ಮುನ್ನುಗ್ಗುತ್ತಿದ್ದರೆ, ನೆರೆದವರ ಎದೆ ಒಂದು ಕ್ಷಣ ಝಲ್ ಎನ್ನುತ್ತಿತ್ತು. ಬೈಕ್​ಗಳು ಸದ್ದು ಮಾಡುತ್ತಾ ರೇಸ್​ನಲ್ಲಿ ಭಾಗಿಯಾಗಿದ್ದ ಈ ದೃಶ್ಯಗಳನ್ನು ಕಣ್ತುಂಬಿಕೊಳ್ಳುವುದೇ ಒಂದು ರೀತಿಯ ರೋಮಾಂಚನ!

2 / 8
ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ರಾಷ್ಟ್ರೀಯ ಮಟ್ಟದ ಬೈಕ್ ಡರ್ಟ್ ಟ್ರ್ಯಾಕ್ ಚಾಂಪಿಯನ್ ಶಿಪ್ ಆಯೋಜನೆ ಮಾಡಲಾಗಿತ್ತು. ಈ ಸ್ಪರ್ಧೆಯಲ್ಲಿ ಯುವಕ-ಯುವತಿಯರು ಸೇರಿದಂತೆ ಚಿಕ್ಕ ಚಿಕ್ಕ ಪುಟಾಣಿ ಮಕ್ಕಳು ಕೂಡ ರೇಸ್​ನಲ್ಲಿ ಭಾಗವಹಿಸಿದ್ದರು.

3 / 8
ಮೊದಲ ಬಾರಿಗೆ ಧಾರವಾಡದಲ್ಲಿ ಈ ರೀತಿಯ ಬೈಕ್ ಚಾಂಪಿಯನ್ ಆಯೋಜನೆಗೊಂಡಿತ್ತು. ಈ ಬೈಕ್ ರೇಸ್​ಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಆಯೋಜಕರಿಗೆ ಸಂತಸ ತಂದಿತ್ತು.

4 / 8
ಒಟ್ಟು 120 ಬೈಕ್ ರೈಡರ್ಸ್ ಈ ರೇಸ್​ನಲ್ಲಿ ಭಾಗಿಯಾಗಿದ್ದರು. ಈ ಸ್ಪರ್ಧೆಯು ಒಟ್ಟು 5 ಹಂತಗಳಲ್ಲಿ ನಡೆಯುತ್ತದೆ. ಮೂರನೇ ಹಂತದ ಸ್ಪರ್ಧೆಯನ್ನು ಧಾರವಾಡದಲ್ಲಿ ಆಯೋಜಿಸಲಾಗಿತ್ತು. ಈಗಾಗಲೇ ಕೊಯಿಮತ್ತೂರ್, ಕೊಲ್ಲಾಪುರದಲ್ಲಿ ಎರಡು ಹಂತಗಳಲ್ಲಿ ಸ್ಪರ್ಧೆ ಮುಗಿದಿದ್ದು, ಇದೀಗ ಧಾರವಾಡದಲ್ಲಿ ಮೂರನೇ ಹಂತದ ಸ್ಪರ್ಧೆ ಮುಗಿಸಿ ಪುಣೆ ಹಾಗೂ ಬೆಂಗಳೂರಿನಲ್ಲಿ ಫೈನಲ್ ಸ್ಪರ್ಧೆಯನ್ನು ಆಯೋಜಿಸಲು ಆಯೋಜಕರು ನಿರ್ಧರಿಸಿದ್ದಾರೆ.

5 / 8
ಐದು ಹಂತಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸ್ಪರ್ಧಾಳುಗಳಿಗೆ ರೂ. 2.50 ಲಕ್ಷ ನಗದು ಬಹುಮಾನವನ್ನು ನೀಡಲಾಗುತ್ತೆ. 60 ಸಿಸಿ ಬೈಕ್​ಗಳಿಂದ 350 ಸಿಸಿ ವರೆಗಿನ ಬೈಕ್​ಗಳು ಸ್ಪರ್ಧೆಯಲ್ಲಿ ಭಾಗಿಯಾದ್ದವು. ಬೈಕ್ ರೇಸ್ ಕಣ್ತುಂಬಿಕೊಳ್ಳಲು ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.

6 / 8
ಮೊದಲ ಬಾರಿಗೆ ಧಾರವಾಡಕ್ಕೆ ಇಂತಹ ರೇಸ್ ಬಂದಿದ್ದು ಖುಷಿ ತಂದಿದೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡರು. ಬೈಕ್ ರೈಡರ್ಸ್ ಬೈಕ್ ವೇಗವನ್ನು ಹೆಚ್ಚಿಸಿ, ಬ್ಯಾಲೆನ್ಸ್ ನಿಭಾಯಿಸಿಕೊಂಡು ಬೈಕ್ ಚಲಾಯಿಸುತ್ತಿದ್ದರೆ ನೆರೆದಿದ್ದ ಬೈಕ್ ರೇಸ್ ಪ್ರಿಯರು ಚಪ್ಪಾಳೆ ತಟ್ಟಿ, ಶಿಳ್ಳೆ ಹಾಕಿ ಸಂಭ್ರಮಿಸುತ್ತಿದ್ದರು.

7 / 8
ದೈತ್ಯ ಶಕ್ತಿಯ ಬೈಕ್​ಗಳು ಕುದುರೆಯಂತೆ ಹಾರುತ್ತಾ ಸಾಗುತ್ತಿದ್ದರೆ, ಅಲ್ಲಿ ನೆರೆದಿದ್ದ ಎಲ್ಲರಿಗೂ ರೋಮಾಂಚನಕಾರಿ ಅನುಭವ ಉಂಟಾಗುತ್ತಿತ್ತು. ಬೈಕ್​ಗಳ ಸದ್ದಿನೊಂದಿಗೆ ಜನರ ಹರ್ಷೋದ್ಗಾರವೂ ಮುಗಿಲು ಮುಟ್ಟುತ್ತಿತ್ತು. ಒಟ್ಟಿನಲ್ಲಿ ರವಿವಾರ ರಜೆ ಇದ್ದಿದ್ದಕ್ಕೆ ಎಲ್ಲರೂ ಇಲ್ಲಿಗೆ ಬಂದು ರೋಮಾಂಚನಕಾರಿ ಬೈಕ್ ರೇಸ್ ನೋಡಿ ಖುಷಿಪಟ್ಟಿದ್ದಂತೂ ಸತ್ಯ.

8 / 8
Follow us
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ