
ಕಾಲಿವುಡ್ ನಟ ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಜೈ ಭೀಮ್’ನಲ್ಲಿ. ನೇರವಾಗಿ ಓಟಿಟಿಯಲ್ಲಿ ಚಿತ್ರ ರಿಲೀಸ್ ಆಗಿತ್ತು.

ಸೂರ್ಯ ನಟನೆಯ ಚಿತ್ರಗಳು ಥಿಯೇಟರ್ನಲ್ಲಿ ತೆರೆಕಾಣದೇ ಬರೋಬ್ಬರಿ 2 ವರ್ಷಗಳು ಕಳೆದೇ ಹೋಗಿವೆ.

ಇದೀಗ ಸೂರ್ಯ ನಟನೆಯ ಚಿತ್ರ ‘ಎದರ್ಕುಂ ತುನಿಂಧವನ್’ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಮಾರ್ಚ್ 10ರಂದು ವಿಶ್ವಾದ್ಯಂತ ಚಿತ್ರ ತೆರೆಕಾಣಲಿದೆ.

ಸೂರ್ಯ ಹಾಗೂ ಪ್ರಿಯಾಂಕಾ ಅರುಲ್ ಮೋಹನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವಿನಯ್ ರೈ, ಸತ್ಯರಾಜ್, ಶರಣ್ಯಾ ಪೊನ್ವಣ್ಣನ್ ಮೊದಲಾದವರು ಸೇರಿದಂತೆ ಖ್ಯಾತ ತಾರೆಯರ ದಂಡೇ ಚಿತ್ರದಲ್ಲಿದೆ.

‘ಎದರ್ಕುಂ ತುನಿಂಧವನ್’ ಚಿತ್ರದ ಸ್ಟಿಲ್ಗಳನ್ನು ನಿರ್ಮಾಣ ಸಂಸ್ಥೆ ಸನ್ ಪಿಚ್ಚರ್ಸ್ ಹಂಚಿಕೊಂಡಿದೆ.

ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ರೂಪದಲ್ಲಿ ಚಿತ್ರ ಇರಲಿದೆ ಎಂಬುದಕ್ಕೆ ಚಿತ್ರಗಳು ಸಾಕ್ಷಿ ಒದಗಿಸಿವೆ.