
ಏಳಿ ಏದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ..' ಎನ್ನುವ ಮಾತಿನಿಂದಲೇ ಮನುಕುಲವನ್ನು ಬಡಿದ್ದೇಬಿಸಿದವರು ಸ್ವಾಮಿ ವಿವೇಕಾನಂದರು. ಭಾರತೀಯ ಸಂಸ್ಕೃತಿಯ ಹರಿಕಾರರಾಗಿದ್ದು, ಸರ್ವಶ್ರೇಷ್ಠ ವಾಗ್ನಿಯಾಗಿ ಎಲ್ಲರಿಗೂ ಚಿರಪರಿಚಿತರಾದ ಮಹಾನ್ ವ್ಯಕ್ತಿ. ತಮ್ಮ ಜೀವಿತಾವಧಿಯಲ್ಲಿ ಜಗತ್ತಿನ ಕಲ್ಯಾಣ ಮತ್ತು ಶಾಂತಿಯ ಮಾರ್ಗವನ್ನು ತೋರಿಸಿದವರು ಸ್ವಾಮಿ ವಿವೇಕಾನಂದ. ಮಹಾಸಂತನಾಗಿ ಗುರುತಿಸಿಕೊಂಡ ವಿವೇಕಾನಂದರು ಜುಲೈ 4, 1902 ರಂದು ನಿಧನರಾದರು. ಇಂದಿಗೆ ನಮ್ಮ ದೇಶದ ಈ ಮಹಾನ್ ಸಂತ ಕೊನೆಯುಸಿರೆಳೆದು 122 ವರ್ಷಗಳು ಸಂದಿವೆ.

ಗುರು ಎಂದರೆ ವ್ಯಕ್ತಿಯಲ್ಲ, ಅದು ಒಂದು ಶಕ್ತಿ. ಅಜ್ಞಾನದ ಕತ್ತಲೆ ಕಳೆದು ಜ್ಞಾನದ ಬೆಳಕನ್ನು ನೀಡುವವರೇ ಗುರುಗಳು. ಹೋರಾಟ ದೊಡ್ಡದಿದ್ದಷ್ಟೂ ಗೆಲುವು ಹೆಚ್ಚುತ್ತದೆ.

ಶಕ್ತಿಯೇ ಜೀವನ, ದೌರ್ಬಲ್ಯವೇ ಸಾವು. ವಿಸ್ತರಣೆಯೇ ಜೀವನ, ಸಂಕೋಚನವೇ ಸಾವು. ಪ್ರೀತಿಯೇ ಜೀವನ, ದ್ವೇಷವೇ ಸಾವು, ಅನುಭವವು ವಿಶ್ವದ ಅತ್ಯುತ್ತಮ ಶಿಕ್ಷಕ.

ಜ್ಞಾನದ ಬೆಳಕು ಎಲ್ಲ ಅಂಧಕಾರಗಳನ್ನು ಹೋಗಲಾಡಿಸುತ್ತದೆ, ನಮ್ಮ ದು:ಖಗಳಿಗೆ ನಾವೇ ಜವಾಬ್ದಾರರು ಬೇರಾರೂ ಅಲ್ಲ. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ.

ಯಾವುದಾದರೂ ನಿಮ್ಮನ್ನು ದೈಹಿಕವಾಗಿ, ಬೌದ್ಧಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ದುರ್ಬಲಗೊಳಿಸಿದರೆ, ಅದನ್ನು ವಿಷದಂತೆ ತಿರಸ್ಕರಿಸಿ, ನೀವು ಬಲಶಾಲಿ ಎಂದು ಭಾವಿಸಿದರೆ, ನೀವು ಬಲಶಾಲಿಯಾಗುತ್ತೀರಿ.

ಸಾಧ್ಯವೇ ಇಲ್ಲ ಅಂದುಕೊಂಡರೆ ಏನನ್ನೂ ಸಾಧಿಸಲಾಗದು. ತನ್ನಿಂದ ಸಾಧ್ಯ ಎಂದು ಪ್ರಯತ್ನಿಸುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ, ಸೋತರೆ ಅನುಭವ.
Published On - 10:06 am, Thu, 4 July 24