AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯವರಿಂದ ಪ್ರೀತಿಗೆ ನಿರಾಕರಣೆ; ನೊಂದ ಯುವತಿ ಆತ್ಮಹತ್ಯೆಗೆ ಯತ್ನ, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವು

ಮೂಲತಃ ದಾವಣಗೆರೆ ಮೂಲದ 22ವರ್ಷದ ಶ್ರಾವಣಿ, 8 ನೇ ಮೈಲಿ ಸಮೀಪದ ಹೆಸರಘಟ್ಟ ರಸ್ತೆಯ ಗೋಲ್ಡ್ ಜಿಮ್​ನ​ಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಇತ್ತ ಶ್ರಾವಣಿ ಪೋಷಕರು ಮದುವೆಗೆ ಸ್ವಜಾತಿಯ ಹುಡುಗನನ್ನ ನೋಡಿದ್ರು, ಈಕೆ ಅಂತರ್ಜಾತಿ ಯುವಕ ನೋರ್ವನನ್ನ ಪ್ರೀತಿಸಿದ್ದಳು. ನಿನ್ನೆ ತಂದೆ-ತಾಯಿ ನೋಡಿದ ಹುಡುಗನನ್ನು ಮದುವೆಯಾಗಲು ನಿರಾಕರಿಸಿ, ಜಿಮ್​ ಟಾಯ್ಲೆಟ್​ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

ಬಿ ಮೂರ್ತಿ, ನೆಲಮಂಗಲ
| Edited By: |

Updated on: Jul 03, 2024 | 10:09 PM

Share
ಪ್ರೀತಿ ಮಾಯೆ ಹುಷಾರು. ಕಣ್ಣೀರು ಮಾರೋ ಬಜಾರು ಅಂತಾರೆ. ಅದು ಅಕ್ಷರಶಃ ಸತ್ಯ. ಪ್ರೀತಿ ಮಾಡಿದ ತಪ್ಪಿಗೆ ಇಲ್ಲಿ ಯುವತಿ ಸಾವಿನ ಮನೆ ಸೇರಿದ್ದಾಳೆ. ಮಗಳನ್ನ ಹಸೆಮಣೆ ಮೇಲೆ ನೋಡಿ ಕಣ್ತುಂಬಿಕೊಳ್ಬೇಕು. ಸಂಭ್ರಮದಿಂದ ಗಂಡನ ಮನೆಗೆ ಕಳಿಸಿಕೊಡ್ಬೇಕು ಅಂತಿದ್ದ ಪೋಷಕರು ಗೋಳಾಡ್ತಿದ್ದಾರೆ. ಮದುವೆ ಖುಷಿಯಲ್ಲಿ ತೇಲಬೇಕಿದ್ದ ಮನೆ ಈಗ ಮಸಣವಾಗಿದೆ. 

1 / 6
ಹೀಗೆ ಸಿನಿಮಾಗಳ ರೊಮ್ಯಾಂಟಿಕ್ ಹಾಡುಗಳಿಗೆ ನಾಚುತ್ತಾ, ಬಳುಕುತ್ತಾ ರೀಲ್ಸ್ನಲ್ಲಿ ಕಾಣ್ತೀರೋ ಯುವತಿ ಹೆಸರು 22ವರ್ಷದ ಶ್ರಾವಣಿ ಅಂತ, 8 ನೇ ಮೈಲಿ ಸಮೀಪದ ಹೆಸರಘಟ್ಟ ರಸ್ತೆಯ ಗೋಲ್ಡ್ ಜಿಮ್​ಲ್ಲಿ ರಿಸೆಪ್ಪನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು.

2 / 6
ಶ್ರಾವಣಿ ಪೋಷಕರು ಸ್ವಜಾತಿಯ ಹುಡುಗನನ್ನ ನೋಡಿದ್ರು, ಈಕೆ ಅಂತರ್ಜಾತಿ ಯುವಕ ನೋರ್ವನನ್ನ ಪ್ರೀತಿಸಿದ್ದಳು. ಹಾಗಾಗಿ ಮದುವೆಯಾಗಲು ನಿರಾಕರಿಸಿ ಜಿಮ್​ ಟಾಯ್ಲೆಟ್​ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

3 / 6
ಹೌದು, ಮಲ್ಲನಗೌಡ ಮತ್ತು ಜ್ಯೋತಿ ದಂಪತಿಗಳ ಪುತ್ರಿ ಶ್ರಾವಣಿ, ಮದುವೆ ವಿಚಾರವಾಗಿ ಮಗಳಿಗೆ ಮನವೊಲಿಸಲು ದಾವಣಗೆರೆಯಿಂದ ದಾಸರಹಳ್ಳಿಯ ಮಗಳ ಮನೆಗೆ ತಾಯಿ ಜ್ಯೋತಿ ಬಂದಿದ್ರು. ಮದುವೆಗೆ ನಿರಾಕರಿಸಿದ ಶ್ರಾವಣಿ ನಿನ್ನೆ ಬೆಳಿಗ್ಗೆ 10:30ಗೆ ಗೋಲ್ಡ್ ಜಿಮ್​ಗೆ ಕೆಲಸಕ್ಕೆ ತೆರಳಿದ್ದಳು.

4 / 6
ಮದುವೆಯ ಒತ್ತಾಯಕ್ಕೆ ನೊಂದ ಶ್ರಾವಣಿ, ಮಧ್ಯಾಹ್ನ 2ಗಂಟೆ ವೇಳೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬಳಿಕ ಲವ್ವರ್ ಶಂಕರ್​ಗೆ ಕರೆ ಮಾಡಿ ಜಿಮ್​ಗೆ ಕರೆಸ್ಕೊಂಡು ವಿಷ ಕುಡಿದ ವಿಷಯ ತಿಳಿಸುತ್ತಿದ್ದಂತೆ ಖಾಸಗಿ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದ್ರೆ ಅತಿಯಾದ ವಾಂತಿಯಿಂದ ಚಿಕಿತ್ಸೆ ಫಲಿಸದೆ ಶ್ರಾವಣಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

5 / 6
ಇನ್ನು ವಿಕ್ಟೋರಿಯಾ ಅಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನೆಡೆಸಿದ ಪೊಲೀಸರು ಮೃತದೇಹವನ್ನ ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮತ್ತೇನಾದರೂ ವಿಷಯ ಇದ್ಯಾ ಸಾವಿಗೆ ಎನ್ನುವುದನ್ನು ಕಲೆ ಹಾಕುತ್ತಿದ್ದಾರೆ.

6 / 6
ಬಿ ಮೂರ್ತಿ, ನೆಲಮಂಗಲ
ಬಿ ಮೂರ್ತಿ, ನೆಲಮಂಗಲ

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,

Read More
Follow Us
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು

34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್

9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!

ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ

ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ

ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ

ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ

ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ

ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ

ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ