- Kannada News Photo gallery In Bengaluru Rejection of love from family, Distressed young woman tried to commit suicide, died in hospital without treatment Kannada News
ಮನೆಯವರಿಂದ ಪ್ರೀತಿಗೆ ನಿರಾಕರಣೆ; ನೊಂದ ಯುವತಿ ಆತ್ಮಹತ್ಯೆಗೆ ಯತ್ನ, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವು
ಮೂಲತಃ ದಾವಣಗೆರೆ ಮೂಲದ 22ವರ್ಷದ ಶ್ರಾವಣಿ, 8 ನೇ ಮೈಲಿ ಸಮೀಪದ ಹೆಸರಘಟ್ಟ ರಸ್ತೆಯ ಗೋಲ್ಡ್ ಜಿಮ್ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಇತ್ತ ಶ್ರಾವಣಿ ಪೋಷಕರು ಮದುವೆಗೆ ಸ್ವಜಾತಿಯ ಹುಡುಗನನ್ನ ನೋಡಿದ್ರು, ಈಕೆ ಅಂತರ್ಜಾತಿ ಯುವಕ ನೋರ್ವನನ್ನ ಪ್ರೀತಿಸಿದ್ದಳು. ನಿನ್ನೆ ತಂದೆ-ತಾಯಿ ನೋಡಿದ ಹುಡುಗನನ್ನು ಮದುವೆಯಾಗಲು ನಿರಾಕರಿಸಿ, ಜಿಮ್ ಟಾಯ್ಲೆಟ್ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
Updated on: Jul 03, 2024 | 10:09 PM

ಪ್ರೀತಿ ಮಾಯೆ ಹುಷಾರು. ಕಣ್ಣೀರು ಮಾರೋ ಬಜಾರು ಅಂತಾರೆ. ಅದು ಅಕ್ಷರಶಃ ಸತ್ಯ. ಪ್ರೀತಿ ಮಾಡಿದ ತಪ್ಪಿಗೆ ಇಲ್ಲಿ ಯುವತಿ ಸಾವಿನ ಮನೆ ಸೇರಿದ್ದಾಳೆ. ಮಗಳನ್ನ ಹಸೆಮಣೆ ಮೇಲೆ ನೋಡಿ ಕಣ್ತುಂಬಿಕೊಳ್ಬೇಕು. ಸಂಭ್ರಮದಿಂದ ಗಂಡನ ಮನೆಗೆ ಕಳಿಸಿಕೊಡ್ಬೇಕು ಅಂತಿದ್ದ ಪೋಷಕರು ಗೋಳಾಡ್ತಿದ್ದಾರೆ. ಮದುವೆ ಖುಷಿಯಲ್ಲಿ ತೇಲಬೇಕಿದ್ದ ಮನೆ ಈಗ ಮಸಣವಾಗಿದೆ.

ಹೀಗೆ ಸಿನಿಮಾಗಳ ರೊಮ್ಯಾಂಟಿಕ್ ಹಾಡುಗಳಿಗೆ ನಾಚುತ್ತಾ, ಬಳುಕುತ್ತಾ ರೀಲ್ಸ್ನಲ್ಲಿ ಕಾಣ್ತೀರೋ ಯುವತಿ ಹೆಸರು 22ವರ್ಷದ ಶ್ರಾವಣಿ ಅಂತ, 8 ನೇ ಮೈಲಿ ಸಮೀಪದ ಹೆಸರಘಟ್ಟ ರಸ್ತೆಯ ಗೋಲ್ಡ್ ಜಿಮ್ಲ್ಲಿ ರಿಸೆಪ್ಪನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು.

ಶ್ರಾವಣಿ ಪೋಷಕರು ಸ್ವಜಾತಿಯ ಹುಡುಗನನ್ನ ನೋಡಿದ್ರು, ಈಕೆ ಅಂತರ್ಜಾತಿ ಯುವಕ ನೋರ್ವನನ್ನ ಪ್ರೀತಿಸಿದ್ದಳು. ಹಾಗಾಗಿ ಮದುವೆಯಾಗಲು ನಿರಾಕರಿಸಿ ಜಿಮ್ ಟಾಯ್ಲೆಟ್ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

ಹೌದು, ಮಲ್ಲನಗೌಡ ಮತ್ತು ಜ್ಯೋತಿ ದಂಪತಿಗಳ ಪುತ್ರಿ ಶ್ರಾವಣಿ, ಮದುವೆ ವಿಚಾರವಾಗಿ ಮಗಳಿಗೆ ಮನವೊಲಿಸಲು ದಾವಣಗೆರೆಯಿಂದ ದಾಸರಹಳ್ಳಿಯ ಮಗಳ ಮನೆಗೆ ತಾಯಿ ಜ್ಯೋತಿ ಬಂದಿದ್ರು. ಮದುವೆಗೆ ನಿರಾಕರಿಸಿದ ಶ್ರಾವಣಿ ನಿನ್ನೆ ಬೆಳಿಗ್ಗೆ 10:30ಗೆ ಗೋಲ್ಡ್ ಜಿಮ್ಗೆ ಕೆಲಸಕ್ಕೆ ತೆರಳಿದ್ದಳು.

ಮದುವೆಯ ಒತ್ತಾಯಕ್ಕೆ ನೊಂದ ಶ್ರಾವಣಿ, ಮಧ್ಯಾಹ್ನ 2ಗಂಟೆ ವೇಳೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬಳಿಕ ಲವ್ವರ್ ಶಂಕರ್ಗೆ ಕರೆ ಮಾಡಿ ಜಿಮ್ಗೆ ಕರೆಸ್ಕೊಂಡು ವಿಷ ಕುಡಿದ ವಿಷಯ ತಿಳಿಸುತ್ತಿದ್ದಂತೆ ಖಾಸಗಿ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದ್ರೆ ಅತಿಯಾದ ವಾಂತಿಯಿಂದ ಚಿಕಿತ್ಸೆ ಫಲಿಸದೆ ಶ್ರಾವಣಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

ಇನ್ನು ವಿಕ್ಟೋರಿಯಾ ಅಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನೆಡೆಸಿದ ಪೊಲೀಸರು ಮೃತದೇಹವನ್ನ ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮತ್ತೇನಾದರೂ ವಿಷಯ ಇದ್ಯಾ ಸಾವಿಗೆ ಎನ್ನುವುದನ್ನು ಕಲೆ ಹಾಕುತ್ತಿದ್ದಾರೆ.



