ಮಂಜುಗಡ್ಡೆಯಲ್ಲಿ ಮೂಡಿಬಂದ ಕಲಾಕೃತಿಗಳು; ಬೇಸಿಗೆಯ ಬೇಗೆಯ ನಡುವೆ ತಂಪನ್ನೆರೆಯುತ್ತಿದೆ ಸ್ನೋ ಸಿಟಿ

| Updated By: ಆಯೇಷಾ ಬಾನು

Updated on: Mar 28, 2024 | 10:13 AM

ಬೆಂಗಳೂರಿನಲ್ಲಿರುವ ಸ್ನೋ ಸಿಟಿಯಲ್ಲಿ ಮಂಜುಗಡ್ಡೆಗಳ ಸಹಾಯದಿಂದ ಕಲಾಕೃತಿಗಳನ್ನು ನಿರ್ಮಿಸಲಾಗಿದ್ದು ಜನರು ಫಿದಾ ಆಗಿದ್ದಾರೆ. ಸ್ನೋ ಸಿಟಿಗೆ ಬರುವವರ ಸಂಖ್ಯೆ ಕೂಡ ಹೆಚ್ಚಾಗಿದ್ದು ನಗರದ ಬಿಸಿಲಿನ ಬೇಗೆಗೆ ತಂಪಾಗಿ ಎಂಜಾಯ್ ಮಾಡ್ತಿದ್ದಾರೆ. 5 ರಿಂದ 8 ಡಿಗ್ರಿ ಉಷ್ಣಾಂಶವಿರುವ ಮಂಜುಗಡ್ಡೆಯಲ್ಲಿ ಕೆತ್ತನೆ ಕೆಲಸ‌ ಮಾಡಿ ಮಾಯಾ ಲೋಕವನ್ನೇ ಸೃಷ್ಟಿಸಲಾಗಿದೆ.

1 / 7
ಇಷ್ಟು ದಿನ ಕಲ್ಲಿನ ಕೆತ್ತನೆ, ಮರದ ಕೆತ್ತನೆ, ಬಿದರಿನ ಕೆತ್ತನೆ‌ ನೋಡುತಿದ್ವಿ. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಮಂಜುಗಡ್ಡೆಯಿಂದ ವಿಶೇಷ ಕೆತ್ತನೆಗಳನ್ನ ಮಾಡಲಾಗಿದೆ. ಸುಡುಬಿಸಿಲಿನಲ್ಲಿ ಮಂಜುಗಡ್ಡೆಯಲ್ಲಿ ಅರಳಿದ ಕಲಾಕೃತಿಗೆ ಜನ ಫಿದಾ ಆಗಿದ್ದಾರೆ.

2 / 7
ಸಿಲಿಕಾನ್‌‌‌ ಸಿಟಿಯಲ್ಲಿ ಬಿಸಿಲಿನಿಂದಾಗಿ ಜನರು ಮೊದಲೇ‌ ರೋಸಿ ಹೋಗ್ತಿದ್ದಾರೆ.‌ ಮತ್ತೊಂದೆಡೆ ಮಂಜುಗಡ್ಡೆಯಲ್ಲಿ ವಿವಿಧ ಕಲಾಕೃತಿಗಳು ಮೂಡಿ ಬಂದಿದ್ದು ಜನ ಫಿದಾ ಆಗಿದ್ದಾರೆ. ಕೈ ಮರಗಟ್ಟುವ ಮಂಜಿನ ಗಡ್ಡೆಯಲ್ಲಿ ಸುಂದರವಾದ ಹಿಮದ ಶಿಲೆಗಳು ಅರಳಿದ್ದು, 5 ರಿಂದ 8 ಡಿಗ್ರಿ ಉಷ್ಣಾಂಶವಿರುವ ಮಂಜುಗಡ್ಡೆಯಲ್ಲಿ ಕೆತ್ತನೆ ಕೆಲಸ‌ ಮಾಡಿ ಮಾಯಾ ಲೋಕವನ್ನೇ  ಸೃಷ್ಟಿಸಲಾಗಿದೆ.

3 / 7
ಈ ಮಂಜುಗಡ್ಡೆಯ ಮಾಯಾನಗರಿ ನಗರದ ಸ್ನೋ ಸಿಟಿಯಲ್ಲಿ ನಿರ್ಮಾಣವಾಗಿದೆ. ಕಲ್ಲಿನಲ್ಲಿ ಕೆತ್ತುವುದಕ್ಕಿಂತ ಸೂಕ್ಷ್ಮವಾಗಿರುವ ಮಂಜುಗಡ್ಡೆಯ ಕೆತ್ತನೆಯನ್ನ ಮಾಡಿದ್ದಾರೆ. ಇನ್ನು, ಈ ಮಂಜುಗಡ್ಡೆಯಿಂದ ಸುಂದರವಾದ ಏಳು ಅದ್ಭುತಗಳು ನಿರ್ಮಾಣವಾಗಿದ್ದು ಈ ಕೆತ್ತನೆಗೆ ಸಿಲಿಕಾನ್ ಸಿಟಿ ಮಂದಿ ಖುಷ್ ಆಗಿದ್ದಾರೆ.

4 / 7
ಇನ್ನು ಈ ಕಲಾಕೃತಿಗಳನ್ನ ಮಾಡಲು 22 ದಿನಗಳ ಸಮಯ ತೆಗೆದುಕೊಂಡಿದ್ದು, ಇವು ಎಂತವರನ್ನೂ ಬೆರಗಾಗಿಸುವಂತಿವೆ. ತಮ್ಮ ಕಲಾಕೃತಿಗಳು ಅದ್ಭುತವಾಗಿ ಮೂಡಿ ಬಂದಿದ್ದು ಜನರನ್ನು ಸೆಳೆಯುತ್ತಿರುವ ಬಗ್ಗೆ ಕಲಾಕಾರರು ಸಂತೋಷ ವ್ಯಕ್ತಪಡಿಸಿದ್ದಾರೆ.

5 / 7
ಕಲ್ಲಿನಲ್ಲಿ,‌ ಮರದಲ್ಲಿ ಕೆತ್ತನೆ ಮಾಡುವುದೇ ಕಷ್ಟ. ‌ಅದರಲ್ಲೂ ಕರಗಿ ನೀರಾಗುವ ಮಂಜುಗಡ್ಡೆಯಲ್ಲಿ ಮೈನಸ್ 5 ಡಿಗ್ರಿಯಲ್ಲಿ ಕಲಾಕೃತಿಗಳನ್ನ ಮಾಡಿರುವುದು ತುಂಬ ಖುಷಿ ಕೊಡುತ್ತಿದೆ. ಈ ಬೇಸಿಗೆಗೆ ಸ್ನೋ ಸಿಟಿ ಹೇಳಿ ಮಾಡಿಸಿದಂಗಿದೆ ಎಂದು ಜನರು ಖುಷಿ ವ್ಯಕ್ತಪಡಿಸಿದ್ರು.

6 / 7
ಒಟ್ನಲ್ಲಿ, ಹಿಮದಿಂದ ಏಳು ಅದ್ಭುತಗಳು ಅರಳಿದ್ದು, ಇವುಗಳನ್ನ ನೋಡಲು ಸಿಲಿಕಾನ್ ಮಂದಿ ಫ್ಯಾಮಿಲಿ ಸಮೇತ ಬರುತ್ತಿದ್ದಾರೆ. ಕೆತ್ತನೆಯ ವಿಶೇಷತೆಯ ಬಗ್ಗೆ ಎಂಜಾಯ್ ಮಾಡ್ತಿದ್ದಾರೆ. ‌

7 / 7
ಸುಡುವ ಬಿಸಿಲಿಗೆ ಬೇಸತ್ತವರಿಗೆ ಸ್ನೋ ಸಿಟಿ ತೆಂಪನೆರಿಯುತ್ತಿದೆ. ಅದರಲ್ಲೂ ಮಂಜುಗಡ್ಡೆಯಲ್ಲಿ ಮೂಡಿಬಂದ ಕಲಾಕೃತಿಗಳು ಮನಸ್ಸಿಗೆ ಮತ್ತಷ್ಟು ಆನಂದವನ್ನೀಡುತ್ತಿದೆ. ಸದ್ಯ ಸ್ನೋ ಸಿಟಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ.