Manobala: ನಗಿಸುತ್ತಿದ್ದ ಮನೋಬಾಲ ಈಗ ಕಣ್ಣೀರು ಹಾಕಿಸಿದ್ರು; ಹಾಸ್ಯ ಕಲಾವಿದನ ನಿಧನಕ್ಕೆ ಅಭಿಮಾನಿಗಳ ಕಂಬನಿ

|

Updated on: May 03, 2023 | 7:05 PM

Manobala Death: ಮನೋಬಾಲ ಅವರು ಹಾಸ್ಯ ಪಾತ್ರಗಳ ಮೂಲಕ ಎಲ್ಲರನ್ನೂ ನಗಿಸಿದ್ದರು. ಆದರೆ ಈಗ ಅವರ ನಿಧನದ ಸುದ್ದಿ ಕೇಳಿ ಆಪ್ತರೆಲ್ಲ ಕಣ್ಣೀರು ಹಾಕುವಂತಾಗಿದೆ.

1 / 5
ನಟನಾಗಿ, ನಿರ್ದೇಶಕನಾಗಿ ಸಕ್ರಿಯರಾಗಿದ್ದ ಮನೋಬಾಲ ಅವರು ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನದ ಸುದ್ದಿ ಕೇಳಿ ಅಭಿಮಾನಿಗಳು, ಆಪ್ತರು, ಕುಟುಂಬದವರು ಕಂಬನಿ ಮಿಡಿದಿದ್ದಾರೆ.

2 / 5
ತಮಿಳು ಚಿತ್ರರಂಗದಲ್ಲಿ ಮನೋಬಾಲ ಅವರು ತುಂಬ ಜನಪ್ರಿಯತೆ ಪಡೆದುಕೊಂಡಿದ್ದರು. ಹಾಸ್ಯ ಪಾತ್ರಗಳ ಮೂಲಕ ಎಲ್ಲರನ್ನೂ ನಗಿಸಿದ್ದರು. ಆದರೆ ಈಗ ಅವರ ನಿಧನದ ಸುದ್ದಿ ಕೇಳಿ ಆಪ್ತರೆಲ್ಲ ಕಣ್ಣೀರು ಹಾಕುವಂತಾಗಿದೆ.

3 / 5
ಕಾಲಿವುಡ್​ನ ಬಹುತೇಕ ಎಲ್ಲ ಸೆಲೆಬ್ರಿಟಿಗಳ ಜೊತೆಗೂ ಮನೋಬಾಲ ನಟಿಸಿದ್ದರು. ಅವರ ನಿಧನದ ನಂತರ ಹಳೇ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡು ಸಂತಾಪ ಸೂಚಿಸಲಾಗುತ್ತಿದೆ.

4 / 5
ಚಿತ್ರರಂಗದಲ್ಲಿ ಮನೋಬಾಲ ಅವರಿಗೆ ಅಪಾರ ಅನುಭವ ಇತ್ತು. 35 ವರ್ಷಗಳ ವೃತ್ತಿಜೀವನದಲ್ಲಿ ಅವರು 450ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಆ ಮೂಲಕ ತಮಿಳುನಾಡಿನಲ್ಲಿ ಮನೆಮಾತಾಗಿದ್ದರು.

5 / 5
ನಟನೆಯ ಜೊತೆಗೆ ನಿರ್ದೇಶನದಲ್ಲೂ ಮನೋಬಾಲ ಅವರಿಗೆ ಆಸಕ್ತಿ ಇತ್ತು. 25ಕ್ಕೂ ಅಧಿಕ ಸಿನಿಮಾಗಳಿಗೆ ಅವರು ನಿರ್ದೇಶನ ಮಾಡಿದರು. ಕಿರುತೆರೆ ಸೀರಿಯಲ್​ಗಳಲ್ಲೂ ನಟಿಸಿ ಅವರು ಅಭಿಮಾನಿಗಳನ್ನು ರಂಜಿಸಿದ್ದರು.