
ರಜನಿಕಾಂತ್ ಅವರು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಅವರು ಬ್ರೇಕ್ ಪಡೆದು ಚೆನ್ನೈನಲ್ಲಿ ಮತದಾನ ಮಾಡಿದ್ದಾರೆ. ಈ ಮೂಲಕ ಹಕ್ಕು ಚಲಾಯಿಸಿದ್ದಾರೆ.

ತಮಿಳಿನ ಹಾಸ್ಯ ನಟ ಯೋಗಿ ಬಾಬು ಕೂಡ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತದಾನದ ಬಳಿಕ ಅವರು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ನಟ ವಿಜಯ್ ಸೇತುಪತಿ ಕೂಡ ಮತಗಟ್ಟೆಗೆ ಆಗಮಿಸಿದ್ದರು. ಅವರು ಮತ ಹಾಕಿದ ಬಳಿಕ ಜನರ ಬಳಿ ವೋಟ್ ಮಾಡುವಂತೆ ಕೋರಿದ್ದಾರೆ.

ನಟ ಶರತ್ ಕುಮಾರ್ ಅವರು ಕುಟುಂಬದ ಜೊತೆ ಬಂದು ವೋಟ್ ಮಾಡಿದ್ದಾರೆ. ಈ ಫೋಟೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಟ ಶಿವಕಾರ್ತಿಕೇಯ ಅವರು ಜನಸಾಮಾನ್ಯರಂತೆ ಸಾಲಿನಲ್ಲಿ ನಿಂತು ವೋಟ್ ಮಾಡಿದ್ದಾರೆ. ಅವರು ಸಾಲಿನಲ್ಲಿ ನಿಂತಿರೋ ಫೋಟೋ ವೈರಲ್ ಆಗಿದೆ.

ಅಜಿತ್ ಕುಮಾರ್ ಅವರಿಗೆ ಇತ್ತೀಚೆಗೆ ಅನಾರೋಗ್ಯ ಕಾಡಿತ್ತು. ಹೀಗಾಗಿ, ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿದ್ದರು. ಅವರು ಮತ ಹಾಕುವುದನ್ನು ತಪ್ಪಿಸಿಲ್ಲ.

ನಟಿ ತ್ರಿಷಾ ಕೂಡ ಮತ ಹಾಕಿದ್ದಾರೆ. ಚೆನ್ನೈನಲ್ಲಿ ಅವರು ಮತ ಹಾಕಿದ್ದಾರೆ. ಕನ್ನಡದಲ್ಲೂ ತ್ರಿಷಾ ನಟಿಸಿ ಗಮನ ಸೆಳೆದಿದ್ದಾರೆ.

ಧನುಷ್ ಕೂಡ ಬಂದು ವೋಟ್ ಹಾಕಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಮತ ಹಾಕಿದ್ದಾರೆ. ಅವರನ್ನು ನೋಡಲು ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ನೆರೆದಿದ್ದರು.
Published On - 12:31 pm, Fri, 19 April 24