ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್‌ಗೆ ಹೆಚ್ಚು ಒತ್ತು ನೀಡಿದ ಅಶುತೋಷ್ ಶರ್ಮಾ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಒಂದೆಡೆ ವಿಕೆಟ್ಗಳ ಪತನದ ನಡುವೆಯೂ ಪಂಜಾಬ್ ಗೆಲುವಿಗಾಗಿ ಏಕಾಂಗಿ ಹೋರಾಟ ನೀಡಿದ ಆಶುತೋಷ್, ಅಂತಿಮವಾಗಿ 28 ಎಸೆತಗಳಲ್ಲಿ 2 ಬೌಂಡರಿ ಹಾಗೂ ಬರೋಬ್ಬರಿ 7 ಸಿಕ್ಸರ್ ಸಹಿತ 61 ರನ್ ಕಲೆಹಾಕಿದರು.