
ಭಾರತದ ಖ್ಯಾತ ವಾಹನ ತಯಾರಿಕಾ ಕಂಪೆನಿ ಟಾಟಾ ಮೋಟರ್ಸ್ ಶೀಘ್ರದಲ್ಲೇ ಸಿಎನ್ಜಿ (Compressed natural gas) ಕಾರುಗಳನ್ನು ಪರಿಚಯಿಸಲಿದೆ. ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿರುವ ಕಾರುಗಳ ಮಾಡೆಲ್ನಲ್ಲೇ ಗ್ಯಾಸ್ (CNG) ಚಾಲಿತ ಕಾರುಗಳನ್ನು ಪರಿಚಯಿಸಲು ಟಾಟಾ ನಿರ್ಧರಿಸಿದೆ. ಅದರಂತೆ ಟಾಟಾ ಟಿಯೊಗೊ ಸಿಎನ್ಜಿ ಮಾಡೆಲ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈಗಾಗಲೇ ಟಿಯೊಗೊ ಸಿಎನ್ಜಿ ಟೆಸ್ಟ್ ಡ್ರೈವ್ ನಡೆಸಲಾಗಿದ್ದು, ಈ ಮಾಡೆಲ್ ಈ ಹಿಂದಿನ ಪೆಟ್ರೋಲ್ ಟಿಯೊಗೊ ಕಾರನ್ನೇ ಹೋಲುತ್ತಿದೆ. ಹೀಗಾಗಿ ಟಾಟಾ ಪರಿಚಯಿಸಲಿರುವ CNG ವಾಹನಗಳು ಈ ಹಿಂದಿನ ವಾಹನಗಳ ಅಪ್ಗ್ರೇಡ್ ಮಾಡೆಲ್ ಆಗಿರಲಿದೆ.

ಟಾಟಾ ಟಿಯಾಗೊ ಸಿಎನ್‌ಜಿಯ ವೈಶಿಷ್ಟ್ಯಗಳು: ಟೆಸ್ಟ್ ಡ್ರೈವ್ ಮಾಡಲಾದ ಟಾಟಾ ಸಿಎನ್ಜಿ ಕಾರನ್ನು ಗಮನಿಸಿದರೆ ಇದಕ್ಕೆ ಟ್ರೈ-ಆ್ಯರೊ ಥೀಮ್ ಫ್ರಂಟ್ ಗ್ರಿಲ್ ನೀಡಲಾಗಿದೆ. ಇದರೊಂದಿಗೆ, ಎಲ್ಇಡಿ ಹೈ ಮೌಂಟ್ ಸ್ಟಾಪ್ ಲ್ಯಾಂಪ್, ಎಲ್ಇಡಿ ಟೇಲ್ ಲೈಟ್ಸ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಸ್, ಎಲ್ಇಡಿ ಡಿಆರ್ ಎಲ್ ಗಳು, ಫಾಗ್ ಲ್ಯಾಂಪ್ಸ್, ಶಾರ್ಕ್ ಫಿನ್ ಆಂಟೆನಾ ಮತ್ತು ಇತರ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ. ಇನ್ನು ಕಾರ್ ಎಕ್ಸ್ಪ್ರರ್ಟ್ಗಳ ಪ್ರಕಾರ ಹೊಸ ಟಿಯಾಗೊ ಸಿಎನ್‌ಜಿಯ ಒಳಾಂಗಣ ವಿನ್ಯಾಸ ಪೆಟ್ರೋಲ್ ಮಾದರಿ ಕಾರಿನ ಒಳಭಾಗದಂತೆ ಇರಲಿದೆ.

ಹೊಸ ಸಿಎನ್ಜಿ ಕಾರಿನಲ್ಲಿ ಟಾಟಾ 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಬಳಸಿರುವ ಸಾಧ್ಯತೆಯಿದ್ದು, ಇದು ಗರಿಷ್ಠ 85 ಬಿಹೆಚ್ ಪಿ ಪವರ್ ಮತ್ತು 113 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ. CNG ಚಾಲಿತ ಘಟಕವು ಪೆಟ್ರೋಲ್ ಘಟಕಕ್ಕಿಂತ ಕಡಿಮೆ ಶಕ್ತಿಯನ್ನು ಉತ್ಪಾದಿಸಲಿದೆ.

ಟಾಟಾ ಟಿಯಾಗೊ ಕಂಪನಿಯ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಕಂಪನಿಯು ಪ್ರತಿ ತಿಂಗಳು 6,000 ರಿಂದ 8,000 ಯೂನಿಟ್‌ಗಳನ್ನು ಮಾರಾಟ ಮಾಡುತ್ತದೆ. ಇದೀಗ ಟಾಟಾ ಟಿಯಾಗೊ ಸಿಎನ್ ಜಿ ರೂಪಾಂತರವನ್ನು ಬಿಡುಗಡೆ ಮಾಡಿ ಮಾರಾಟವನ್ನು ಹೆಚ್ಚಿಸುವ ಗುರಿ ಇಟ್ಟುಕೊಂಡಿದೆ. ಆ ಬಳಿಕ ಟಿಗೋರ್, ಆಲ್ಟ್ರೋಜ್ ಮತ್ತು ನೆಕ್ಸಾನ್ ಎಸ್‌ಯುವಿಗಳನ್ನು ಸಿಎನ್ಜಿ ಮಾಡೆಲ್ಗಳಲ್ಲಿ ಪರಿಚಯಿಸುವ ಪ್ಲ್ಯಾನ್ನಲ್ಲಿದೆ ಟಾಟಾ ಕಂಪೆನಿ.

ಸದ್ಯ ಟಾಟಾ ಟಿಯಾಗೊ XE, XT, XZ ಮತ್ತು XZ+ ನ ನಾಲ್ಕು ಮಾಡೆಲ್ಗಳಲ್ಲಿ ಲಭ್ಯವಿದ್ದು, ಈ ಮಾಡೆಲ್ಗಳಲ್ಲೇ ಸಿಎನ್ಜಿ ಕೂಡ ಖರೀದಿಗೆ ಸಿಗಲಿದೆ. ಅದರಂತೆ ಹೊಸ ಗ್ಯಾಸ್ ಚಾಲಿತ ಕಾರು 5 ಲಕ್ಷದಿಂದ 7 ಲಕ್ಷದೊಳಗೆ ಖರೀದಿಗೆ ಲಭ್ಯವಿರಲಿದೆ ಎಂದು ವರದಿಯಾಗಿದೆ.