JioPhone Next: ಸ್ಮಾರ್ಟ್​ಫೋನ್​ ಕ್ಷೇತ್ರದಲ್ಲಿ ಹೊಸ ಕ್ರಾಂತಿ: ಕೇವಲ 500 ರೂ.ಗೆ ಜಿಯೋ ನೆಕ್ಸ್ಟ್​

jiophone next Price: ಈ ಯೋಜನೆಯಡಿಯಲ್ಲಿ ರಿಲಯನ್ಸ್ ಜಿಯೋ ತನ್ನ ನೂತನ ಜಿಯೋ ಫೋನ್ ನೆಕ್ಸ್ಟ್​ ಅನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು, ಅದರಂತೆ ಕೇವಲ 500 ರೂ.ಗೆ ಸ್ಮಾರ್ಟ್​ಫೋನ್ ಖರೀದಿಸುವ ಅವಕಾಶ ಗ್ರಾಹಕರದ್ದಾಗಲಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Sep 04, 2021 | 7:08 PM

ರಿಲಯನ್ಸ್ ಜಿಯೋ-ಗೂಗಲ್ ಸಹಯೋಗದಲ್ಲಿ ಹೊರ ತರುತ್ತಿರುವ ಬಹು ನಿರೀಕ್ಷಿತ ಜಿಯೋ ಫೋನ್ ನೆಕ್ಸ್ಟ್ (JioPhone Next)​ ಸೆಪ್ಟೆಂಬರ್ 10 ರಂದು ಬಿಡುಗಡೆಯಾಗಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸ್ಮಾರ್ಟ್​ಫೋನ್​ಗಳಿಗಿಂತ ಕೈಗೆಟುಕುವ ಬೆಲೆಯಲ್ಲಿ ಹೊಸ ಮೊಬೈಲ್​ನ್ನು ಪರಿಚಯಿಸುವುದಾಗಿ ಈ ಹಿಂದೆಯೇ ಜಿಯೋ ಘೋಷಿಸಿತ್ತು.

1 / 6
ಇದೀಗ ಅದರ ಮೊದಲ ಹೆಜ್ಜೆ ಎಂಬಂತೆ ನೂತನ ಸ್ಮಾರ್ಟ್​ಫೋನ್ ಜಿಯೋ ನೆಕ್ಸ್ಟ್​ (JioPhone Next) ಅನ್ನು ಕೇವಲ 500 ರೂ.ಗೆ ಗ್ರಾಹಕರ ಮುಂದಿಡಲು ಜಿಯೋ ಕಂಪೆನಿ ನಿರ್ಧರಿಸಿದೆ ಎಂದು ವರದಿಯಾಗಿದೆ. ಅಂದರೆ ಜಿಯೋ ಫೋನನ್ನು ಖರೀದಿಸಲು ಒಂದೇ ಬಾರಿಗೆ ಪೂರ್ತಿ ಹಣ ನೀಡುವ ಅಗತ್ಯವಿಲ್ಲ. ಬದಲಾಗಿ​​ ಫೋನಿನ ಒಟ್ಟು ಮೊತ್ತದ ಶೇ.10ರಷ್ಟು ಹಣವನ್ನು ನೀಡಿ ಜಿಯೋ ನೆಕ್ಸ್ಟ್​ ಅನ್ನು ಖರೀದಿಸಬಹುದು.

2 / 6
ಇದಕ್ಕಾಗಿ ರಿಲಯನ್ಸ್ ಜಿಯೋ ಹಲವಾರು ಭಾರತೀಯ ಬ್ಯಾಂಕುಗಳೊಂದಿಗೆ ಪಾಲುದಾರಿಕೆಗೆ ಮುಂದಾಗಿದೆ. ಅದರಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಿರಮಲ್ ಕ್ಯಾಪಿಟಲ್, ಐಡಿಎಫ್‌ಸಿ ಫಸ್ಟ್ ಅಶೂರ್ ಮತ್ತು ಡಿಎಂಐ ಫೈನಾನ್ಸ್‌ನ ಸಹಭಾಗಿತ್ವದಲ್ಲಿ ಮುಂದಿನ 6 ತಿಂಗಳಲ್ಲಿ 50 ದಶಲಕ್ಷ ಜಿಯೋ ಫೋನ್ ನೆಕ್ಟ್ಸ್​ ಅನ್ನು ಮಾರಾಟ ಮಾಡುವ ಗುರಿ ಇಟ್ಟುಕೊಂಡಿದೆ ಎಂದು ಇಟಿ ನೌ​ ವರದಿ ಮಾಡಿದೆ.

3 / 6
ವರದಿಯ ಪ್ರಕಾರ, ಕಂಪನಿಯು ಎರಡು ಮಾಡೆಲ್​ನ ಜಿಯೋಫೋನ್ ನೆಕ್ಸ್ಟ್ ಅನ್ನು ಪರಿಚಯಿಸಲಿದೆ. ಒಂದು ಬೇಸಿಕ್ ಜಿಯೋಫೋನ್ ನೆಕ್ಸ್ಟ್ ಆಗಿದ್ದು ಅದರ ಬೆಲೆ 5000 ರೂ. ಇರಲಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ಎರಡನೇ ಮಾಡೆಲ್​ ಜಿಯೋಫೋನ್ ನೆಕ್ಸ್ಟ್ ಅಡ್ವಾನ್ಸ್ ಎಂಬ ಹೆಸರಿನಲ್ಲಿ ಬರಲಿದ್ದು, ಇದರ ಬೆಲೆ 7000. ರೂ. ಎಂದು ಹೇಳಲಾಗಿದೆ. ಇದಾಗ್ಯೂ ಜಿಯೋ ಕಂಪೆನಿ ಇನ್ನೂ ಕೂಡ ನೂತನ ಮೊಬೈಲ್​ ಬೆಲೆಯನ್ನು ಬಹಿರಂಗಪಡಿಸಿಲ್ಲ.

4 / 6
 ಗ್ರಾಹಕರು ಈ ಫೋನ್​ಗಳ ಖರೀದಿ ಮೇಲೆ ವಿಶೇಷ ಇಎಂಐ ಆಯ್ಕೆಗಳು ದೊರೆಯಲಿದೆ. ಅದರಂತೆ ಸಂಪೂರ್ಣ ಮೊತ್ತದ ಅಂದರೆ ಶೇಕಡಾ 10 ರಷ್ಟು ಮಾತ್ರ ಪಾವತಿಸುವ ಮೂಲಕ ಮೊಬೈಲ್​ ಅನ್ನು ಖರೀದಿಸಬಹುದು. ಆ ಬಳಿಕ ಉಳಿದ ಹಣವನ್ನು ಬ್ಯಾಂಕ್ ಮತ್ತು ಸಾಲ ನೀಡಿದ ಪಾಲುದಾರರಿಗೆ ತಿಂಗಳ ಕಂತುಗಳಂತೆ ನೀಡಬೇಕಾಗುತ್ತದೆ.

5 / 6
EMI ಯೋಜನೆಯಡಿಯಲ್ಲಿ ರಿಲಯನ್ಸ್ ಜಿಯೋ ತನ್ನ ನೂತನ ಜಿಯೋ ಫೋನ್ ನೆಕ್ಸ್ಟ್​ ಅನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು, ಅದರಂತೆ ಕೇವಲ 500 ರೂ.ಗೆ ಸ್ಮಾರ್ಟ್​ಫೋನ್ ಖರೀದಿಸುವ ಅವಕಾಶ ಗ್ರಾಹಕರದ್ದಾಗಲಿದೆ. ಈ ಮೂಲಕ ಈ ಹಿಂದೆ ಜಿಯೋ ಸಿಮ್​ ಮೂಲಕ ಸಂಚಲನ ಸೃಷ್ಟಿಸಿದ್ದ ರಿಲಯನ್ಸ್ ಸ್ಮಾರ್ಟ್​ಫೋನ್​ ಕ್ಷೇತ್ರದಲ್ಲೂ ಹೊಸ ಮಾರುಕಟ್ಟೆ ಸೃಷ್ಟಿಸುವ ಇರಾದೆಯಲ್ಲಿದೆ.

6 / 6
Follow us