Tata Motors: ಐಷಾರಾಮಿ ಫೀಚರ್ಸ್ ಹೊಂದಿರುವ ಟಾಟಾ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ರೆಡ್ ಡಾರ್ಕ್ ಎಡಿಷನ್ ಬಿಡುಗಡೆ

ಹೊಸ ಕಾರುಗಳ ಮೂಲಕ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿರುವ ಟಾಟಾ ಮೋಟಾರ್ಸ್ ಕಂಪನಿ ಇದೀಗ ಮತ್ತಷ್ಟು ಹೊಸ ಆವೃತ್ತಿಗಳನ್ನ ಬಿಡುಗಡೆ ಮಾಡಿದೆ. ಸಫಾರಿ, ಹ್ಯಾರಿಯರ್ ಮತ್ತು ನೆಕ್ಸಾನ್ ಕಾರುಗಳಲ್ಲಿ ಐಷಾರಾಮಿ ಸೌಲಭ್ಯಗಳನ್ನ ಒಳಗೊಂಡ ರೆಡ್ ಡಾರ್ಕ್ ಎಡಿಷನ್ ಪರಿಚಯಿಸಿದೆ.

Praveen Sannamani
|

Updated on:Feb 23, 2023 | 4:42 PM

ಟಾಟಾ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ರೆಡ್ ಡಾರ್ಕ್ ಎಡಿಷನ್ ಬಿಡುಗಡೆ

1 / 8
ಎಸ್ ಯುವಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ರೆಡ್ ಡಾರ್ಕ್ ಎಡಿಷನ್ ಗಳನ್ನ ಬಿಡುಗಡೆ ಮಾಡಿದೆ. ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಕಾರುಗಳಲ್ಲಿ ಹೊಸ ಎಡಿಷನ್ ಬಿಡುಗಡೆ ಮಾಡಲಾಗಿದ್ದು, ಐಷಾರಾಮಿ ಲುಕ್ ಹೊಂದಿರುವ ಹೊಸ ಆವೃತ್ತಿಗಳು ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿವೆ.

2 / 8
ಹೊಸ ಕಾರುಗಳ ಮಾರಾಟದಲ್ಲಿ ನಿರಂತರ ಬದಲಾವಣೆ ಪರಿಚಯಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಪ್ರಮುಖ ಎಸ್ ಯುವಿ ಮಾದರಿಗಳಲ್ಲಿ ಇದೀಗ ರೆಡ್ ಡಾರ್ಕ್ ಎಡಿಷನ್ ಪರಿಚಯಿಸಿದೆ. ಹೊಸ ಆವೃತ್ತಿಗಳು ಸಾಮಾನ್ಯ ಆವೃತ್ತಿಗಳಿಂತಲೂ ದುಬಾರಿ ಬೆಲೆಯಲ್ಲಿ ಮಾರಾಟಗೊಳ್ಳಲಿದ್ದು, ದುಬಾರಿ ಬೆಲೆಗೆ ತಕ್ಕಂತೆ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಮತ್ತು ಸೇಫ್ಟಿ ಫೀಚರ್ಸ್ ಪಡೆದುಕೊಂಡಿವೆ.

3 / 8
ಹೊಸ ದರ ಪಟ್ಟಿಯಲ್ಲಿ ನೆಕ್ಸಾನ್ ಡಾರ್ಕ್ ಎಡಿಷನ್ ಎಕ್ಸ್ ಶೋರೂಂ ಪ್ರಕಾರ ರೂ. 12.35 ಲಕ್ಷದಿಂದ ರೂ. 14.35 ಲಕ್ಷ ಬೆಲೆ ಹೊಂದಿದೆ. ಹಾಗೆಯೇ ಹ್ಯಾರಿಯರ್ ರೆಡ್ ಡಾರ್ಕ್ ಎಡಿಷನ್ ಎಕ್ಸ್ ಶೋರೂಂ ಪ್ರಕಾರ ರೂ. 21.77 ಲಕ್ಷದಿಂದ ರೂ. 24. 07 ಲಕ್ಷ ಬೆಲೆ ಹೊಂದಿದೆ. ಕೊನೆಯದಾಗಿ ಸಫಾರಿ ಡಾರ್ಕ್ ಎಡಿಷನ್ ಎಕ್ಸ್ ಶೋರೂಂ ಪ್ರಕಾರ ರೂ. 22.61 ಲಕ್ಷದಿಂದ ರೂ. ರೂ.25.01 ಲಕ್ಷ ಬೆಲೆ ಹೊಂದಿದೆ.

4 / 8
ಹೊಸ ರೆಡ್ ಡಾರ್ಕ್ ಎಡಿಷನ್ ಕಾರುಗಳು ಸಾಮಾನ್ಯ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಹೊಂದಿದ್ದು, ಹೊರಭಾಗದಲ್ಲಿ ಸಂಪೂರ್ಣವಾಗಿ ಬ್ಲ್ಯಾಕ್ ಬಣ್ಣದ ಆಯ್ಕೆಯೊಂದಿಗೆ ರೆಡ್ ಆಕ್ಸೆಂಟ್ ಹೊಂದಿವೆ. ಜೊತೆಗೆ ಹೊಸ ಕಾರಿನ ಒಳಭಾಗದಲ್ಲಿ ಬ್ಲ್ಯಾಕ್ ಡ್ಯಾಶ್ ಬೋರ್ಡ್ ನೊಂದಿಗೆ ಕಾರ್ನೆಲಿಯನ್ ರೆಡ್ ಆಸನಗಳನ್ನು ಜೋಡಿಸಲಾಗಿದೆ.

5 / 8
ಇದರೊಂದಿಗೆ ಟಾಟಾ ಕಂಪನಿಯು ಹ್ಯಾರಿಯರ್ ಮತ್ತು ಸಫಾರಿ ಹೊಸ ಆವೃತ್ತಿಗಳಲ್ಲಿ ಗರಿಷ್ಠ ಸೌಲಭ್ಯಗಳನ್ನ ಒಳಗೊಂಡ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಜೋಡಣೆ ಮಾಡಿದೆ. ಇತ್ತೀಚೆಗೆ ಹೊಸ ಕಾರುಗಳಲ್ಲಿ ಗರಿಷ್ಠ ಸುರಕ್ಷತೆಗಾಗಿ ಪ್ರಮುಖ ಕಂಪನಿಗಳು  ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಜೋಡಣೆ ಮಾಡುತ್ತಿದ್ದು, ಇದೀಗ ಟಾಟಾ ಕಂಪನಿಯು ಸಹ ಮೊದಲ ಬಾರಿಗೆ ಹೊಸ ಸುರಕ್ಷಾ ಫೀಚರ್ಸ್ ನೀಡಿದೆ.

6 / 8
ಹೊಸ ಎಡಿಎಎಸ್ ನಲ್ಲಿ ಹಲವಾರು ಆಕ್ಟಿವ್ ಸೇಫ್ಟಿ ಫೀಚರ್ಸ್ ಗಳಿದ್ದು, ಇವುಗಳಲ್ಲಿ ಆಟೋನಮಸ್ ಎಮರ್ಜೆನ್ಸಿ ಬ್ರೇಕಿಂಗ್, ಫಾರ್ವರ್ಡ್ ಕೂಲಿಷನ್ ಅಲರ್ಟ್,  ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಲೇನ್ ಡಿಪಾರ್ಚರ್ ವಾರ್ನಿಂಗ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಪ್ರಮುಖವಾಗಿವೆ.

7 / 8
ಆದರೆ ಹೊಸ ಆವೃತ್ತಿಗಳ ಎಂಜಿನ್ ಆಯ್ಕೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ನೆಕ್ಸಾನ್ ಮಾದರಿಯಲ್ಲಿ 1.2 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಲಭ್ಯವಿದೆ. ಹಾಗೆಯೇ ಹ್ಯಾರಿಯರ್ ಮತ್ತು ಸಫಾರಿ ಕಾರುಗಳಲ್ಲಿ 2.0 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಲಭ್ಯವಿದ್ದು, ಶೀಘ್ರದಲ್ಲಿಯೇ ಪೆಟ್ರೋಲ್ ಮಾದರಿಗಳು ಸಹ ಬಿಡುಗಡೆಯಾಗುವ ನೀರಿಕ್ಷೆಗಳಿವೆ.

8 / 8

Published On - 4:36 pm, Thu, 23 February 23

Follow us
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ