ಮೊಬೈಲ್ ಚಾರ್ಜ್ ಮಾಡಲು ನೀವು ಪವರ್ ಬ್ಯಾಂಕ್ ಯೂಸ್ ಮಾಡುತ್ತೀರಾ?: ಹಾಗಿದ್ರೆ ಇಲ್ಲೊಮ್ಮೆ ಗಮನಿಸಿ
ಮಾಲಾಶ್ರೀ ಅಂಚನ್ | Updated By: ಅಕ್ಷಯ್ ಪಲ್ಲಮಜಲು
Updated on:
Oct 09, 2024 | 10:23 AM
ದುಬಾರಿ ಅಥವಾ ಉತ್ತಮವಾದ ಪವರ್ ಬ್ಯಾಂಕ್‌ಗಳು ಕಟ್ಆಫ್ ತಂತ್ರಜ್ಞಾನದೊಂದಿಗೆ ಬರುತ್ತವೆ. ಅದು ಸಂಪೂರ್ಣವಾಗಿ ಚಾರ್ಜ್ ಆದ ತಕ್ಷಣ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸುತ್ತದೆ. ಇದು ಬಹಳ ಉಪಯುಕ್ತವಾದ ಪವರ್ ಬ್ಯಾಂಕ್
1 / 8
ದೊಡ್ಡ ಮಟ್ಟದ ಬ್ಯಾಟರಿ ಇದ್ದರೂ ನಿರಂತರವಾಗಿ ಗೇಮಿಂಗ್ ಆಡುತ್ತಿದ್ದರೆ ಅಥವಾ ವಿಡಿಯೋ, ಹಾಡುಗಳನ್ನು ಕೇಳುತ್ತುದ್ದರೆ, ಬ್ಯಾಟರಿ ಬೇಗನೆ ಖಾಲಿಯಾಗಬಹುದು. ಹೀಗಾಗಿ ಬ್ಯಾಟರಿ ಬೇಗ ಖಾಲಿ ಆಗುತ್ತದೆ ಎಂದು ಕೆಲವರು ಬ್ಯಾಟರಿ ಚಾರ್ಜ್ ಮಾಡಲು ಪವರ್ ಬ್ಯಾಂಕ್ ಬಳಸುತ್ತಾರೆ.
2 / 8
ಪವರ್ ಬ್ಯಾಂಕ್ ಬಗ್ಗೆ ಅನೇಕರಿಗೆ ಇರುವ ಪ್ರಶ್ನೆಯೆಂದರೆ, ಇದನ್ನು ಬಳಸುವುದರಿಂದ ಬ್ಯಾಟರಿಗೆ ಹಾನಿಯಾಗುತ್ತದೆಯೇ?. ದಿನಕ್ಕೆ ಒಂದು ಅಥವಾ ಎರಡು ಬಾರಿ ಪವರ್ ಬ್ಯಾಂಕ್ನಲ್ಲಿ ಬ್ಯಾಟರಿಯನ್ನು ಚಾರ್ಜ್ ಮಾಡಿದರೆ ಅದು ಫೋನ್ ಮೇಲೆ ಪರಿಣಾಮ ಬೀರುತ್ತದೆಯೇ? ಎಂಬುದು. ನಿಮ್ಮ ಗೊಂದಲಗಳಿಗೆ ಇಲ್ಲಿದೆ ನೋಡಿ ಉತ್ತರ.
3 / 8
ಪವರ್ ಬ್ಯಾಂಕ್ ಮೂಲಕ ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಚಾರ್ಜ್ ಮಾಡುವುದು ಸಂಪೂರ್ಣ ಸುರಕ್ಷಿತ. ಇದರಿಂದ ಯಾವುದೇ ತೊಂದರೆ ಇಲ್ಲ. ಫೋನ್ ಮತ್ತು ಬ್ಯಾಟರಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಒಂದೇ ಒಂದು ಷರತ್ತು ಎಂದರೆ ನೀವು ಉತ್ತಮ ಗುಣಮಟ್ಟದ ಪವರ್ ಬ್ಯಾಂಕ್ ಅನ್ನು ಬಳಸಬೇಕು ಮತ್ತು ಅದರ ವಿದ್ಯುತ್ ಉತ್ಪಾದನೆಯು ಮೊಬೈಲ್ ಚಾರ್ಜರ್‌ಗೆ ಸಮಾನವಾಗಿರಬೇಕು
4 / 8
ಹೆಚ್ಚಿನವರು ಕಡಿಮೆ ಬೆಲೆಗೆ ಪವರ್ ಬ್ಯಾಂಕ್ ಸಿಗುತ್ತದೆ ಎಂದು ಅದನ್ನು ಖರೀದಿಸಿ ಮೊಬೈಲ್ ಚಾರ್ಜ್ ಮಾಡುತ್ತಾರೆ. ಆದರೆ, ಅಗ್ಗದ ಪವರ್ ಬ್ಯಾಂಕ್‌ಗಳು ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಹಾನಿಗೊಳಿಸಬಹುದು. ಓವರ್‌ಚಾರ್ಜ್ ಮಾಡಿದರೆ, ಅವು ಹೆಚ್ಚು ವಿದ್ಯುತ್ ಉತ್ಪಾದನೆಯನ್ನು ಬಿಡುಗಡೆ ಮಾಡುತ್ತವೆ, ಇದರಿಂದ ಮೊಬೈಲ್‌ಗೆ ಹಾನಿ ಆಗುತ್ತದೆ.
5 / 8
ದುಬಾರಿ ಅಥವಾ ಉತ್ತಮವಾದ ಪವರ್ ಬ್ಯಾಂಕ್‌ಗಳು ಕಟ್ಆಫ್ ತಂತ್ರಜ್ಞಾನದೊಂದಿಗೆ ಬರುತ್ತವೆ. ಅದು ಸಂಪೂರ್ಣವಾಗಿ ಚಾರ್ಜ್ ಆದ ತಕ್ಷಣ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸುತ್ತದೆ. ಇದು ಬಹಳ ಉಪಯುಕ್ತವಾದ ಪವರ್ ಬ್ಯಾಂಕ್ ಆಗಿದ್ದು, ಸ್ಮಾರ್ಟ್‌ಫೋನ್ ಬ್ಯಾಟರಿ ಕೂಡ ಬಾಳಿಕೆ ಬರುತ್ತದೆ.
6 / 8
ನಿಮ್ಮ ಬಜೆಟ್ ಎಷ್ಟಿದೆ ಎಂಬುದರ ಮೇಲೆ ಪವರ್ ಬ್ಯಾಂಕ್ ಖರೀದಿಸಲು ಮುಂದಾಗಿ. ನಿಮ್ಮ ಲ್ಯಾಪ್‌ಟಾಪ್ ಮತ್ತು ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಲು ನಿಮಗೆ ಪವರ್ ಬ್ಯಾಂಕ್ ಅಗತ್ಯವಿದ್ದರೆ, ನೀವು ಅದಕ್ಕೆ ತಕ್ಕಂತ ಪವರ್ ಬ್ಯಾಂಕ್ ಅನ್ನು ಖರೀದಿಸಬೇಕು.
7 / 8
ನಿಮ್ಮ ಬಜೆಟ್ ಎಷ್ಟಿದೆ ಎಂಬುದರ ಮೇಲೆ ಪವರ್ ಬ್ಯಾಂಕ್ ಖರೀದಿಸಲು ಮುಂದಾಗಿ. ನಿಮ್ಮ ಲ್ಯಾಪ್‌ಟಾಪ್ ಮತ್ತು ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಲು ನಿಮಗೆ ಪವರ್ ಬ್ಯಾಂಕ್ ಅಗತ್ಯವಿದ್ದರೆ, ನೀವು ಅದಕ್ಕೆ ತಕ್ಕಂತ ಪವರ್ ಬ್ಯಾಂಕ್ ಅನ್ನು ಖರೀದಿಸಬೇಕು.
8 / 8
ನೀವು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಮಾತ್ರ ಚಾರ್ಜ್ ಮಾಡಲು ಬಯಸಿದರೆ, ಈ ರೀತಿಯ ಪವರ್ ಬ್ಯಾಂಕ್ ಅನ್ನು ಖರೀದಿಸಿ. ಇತ್ತೀಚಿನ ದಿನಗಳಲ್ಲಿ ಎರಡೂ ರೀತಿಯ ಪವರ್ ಬ್ಯಾಂಕ್‌ಗಳು ಮಾರುಕಟ್ಟೆಯಲ್ಲಿ ವಿವಿಧ ವೋಲ್ಟೇಜ್‌ಗಳಲ್ಲಿ ಲಭ್ಯವಿದೆ. 5v/3a, 9v/3a, 10v/5a ಮತ್ತು 12v/3a ಪವರ್ ಔಟ್‌ಪುಟ್ ನೀಡುವ ಪವರ್ ಬ್ಯಾಂಕ್ 2 ರಿಂದ 3 ಸಾವಿರ ಬಜೆಟ್‌ನಲ್ಲಿ ಮಾರುಕಟ್ಟೆಯಲ್ಲಿದೆ.