
ದಳಪತಿ ವಿಜಯ್ ಹಾಗೂ ಲೋಕೇಶ್ ಕನಗರಾಜ್ ಅವರು ‘ದಳಪತಿ 67’ ಚಿತ್ರಕ್ಕಾಗಿ ಒಂದಾಗಿದ್ದಾರೆ. ‘ವಾರಿಸು’ ಗೆದ್ದ ಖುಷಿಯಲ್ಲಿರುವ ವಿಜಯ್ ಅವರು ಹೊಸ ಸಿನಿಮಾ ಕೆಲಸಗಳಲ್ಲಿ ತೊಡಗಿದ್ದಾರೆ.

ಈ ಚಿತ್ರದ ಮುಹೂರ್ತ ನೆರವೇರಿದೆ. ವಿಜಯ್ ಚಿತ್ರಕ್ಕೆ ನಾಯಕಿ ಯಾರು ಅನ್ನೋದು ಈವರೆಗೆ ಘೋಷಣೆ ಆಗಿರಲಿಲ್ಲ. ಮುಹೂರ್ತದಲ್ಲಿ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನಾಯಕಿಯ ಹೆಸರು ತಿಳಿದ ಫ್ಯಾನ್ಸ್ ಖುಷಿಯಾಗಿದ್ದಾರೆ.

ದಳಪತಿ ವಿಜಯ್ ಅವರ 67ನೇ ಚಿತ್ರಕ್ಕೆ ತ್ರಿಷಾ ನಾಯಕಿ ಆಗಿದ್ದಾರೆ. ಮುಹೂರ್ತದ ಸಂದರ್ಭದಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.

ದಳಪತಿ ವಿಜಯ್ ನಟನೆಯ ‘ಗಿಲ್ಲಿ’, ‘ಕುರುವಿ’ ಮೊದಲಾದ ಸಿನಿಮಾಗಳಲ್ಲಿ ಈ ಜೋಡಿ ಒಟ್ಟಾಗಿ ನಟಿಸಿದೆ. ಇದು ಹಿಟ್ ಜೋಡಿ ಕೂಡ ಹೌದು. ಈ ಕಾರಣಕ್ಕೆ ಇಬ್ಬರೂ ಮತ್ತೆ ಒಂದಾಗಿದ್ದಾರೆ.

ಈ ಹಿಂದೆ ವಿಜಯ್ ನಟನೆಯ ‘ಮಾಸ್ಟರ್’ ಚಿತ್ರಕ್ಕೆ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದರು. ಇದು ವಿಜಯ್ ಜತೆ ಅವರ ಎರಡನೇ ಪ್ರಾಜೆಕ್ಟ್. ಮತ್ತೊಮ್ಮೆ ಮೋಡಿ ಮಾಡಲು ‘ಮಾಸ್ಟರ್’ ಜೋಡಿ ಸಿದ್ಧವಾಗಿದೆ.