
ಅಕ್ಷಯ್ ಕುಮಾರ್: ವಾಸ್ತವವಾಗಿ ಅಕ್ಷಯ್ ಕುಮಾರ್ ಅವರಿಗೆ ವಿಗ್ ಅಥವಾ ಶಸ್ತ್ರಚಿಕಿತ್ಸೆ ಇಷ್ಟವಿಲ್ಲವಂತೆ. ಅದನ್ನು ಅವರೇ ಹೇಳಿಕೊಂಡಿದ್ದಾರೆ. ಕೇವಲ ಚಿತ್ರೀಕರಣಕ್ಕಾಗಿ ಕೃತಕ ಕೂದಲನ್ನು ಬಳಸುತ್ತಿದ್ದರು. ಆದರೆ ಕೆಲವು ಮೂಲಗಳ ಪ್ರಕಾರ ಅವರು ಕೂದಲಿನ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಅಮಿತಾಭ್ ಬಚ್ಚನ್: ಚಿತ್ರರಂಗದ ಹಿರಿಯ ನಟರಲ್ಲೊಬ್ಬರಾದ ಬಿಗ್ಬಿ ಅಮಿತಾಭ್ ಬಚ್ಚನ್, ವಯಸ್ಸಿನ ಕಾರಣದಿಂದಾಗಿ ಕಡಿಮೆ ಕೂದಲನ್ನು ಹೊಂದಿದ್ದರು. ಅವರು ಚಿತ್ರಗಳ ಪಾತ್ರದ ಅನುಸಾರವಾಗಿ ಕೃತಕ ಕೂದಲನ್ನೂ ಬಳಸುತ್ತಾರಂತೆ. ಮೂಲಗಳ ಪ್ರಕಾರ 2000ದಲ್ಲಿ ಅಮಿತಾಭ್ ಕೂದಲಿನ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಸಲ್ಮಾನ್ ಖಾನ್: ಒಂದು ಮೂಲದ ಪ್ರಕಾರ ಭಾರತದಲ್ಲಿ ನಡೆಸಿದ ಶಸ್ತ್ರಚಿಕಿತ್ಸೆ ಫಲಪ್ರದವಾಗದ ಕಾರಣ, ಸಲ್ಮಾನ್ ಖಾನ್ 2007ರಲ್ಲಿ ದುಬೈಗೆ ತೆರಳಿ ಅಮೇರಿಕಾ ಮೂಲದ ವೈದ್ಯರಿಂದ ಸರ್ಜರಿ ಮಾಡಿಸಿಕೊಂಡಿದ್ದಾರೆ.

ಸಂಜಯ್ ದತ್: ನಟ ಸಂಜಯ್ ದತ್ ಕೂಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಕೂದಲಿನ ಕಸಿ ಮಾಡಿಸಿಕೊಂಡಿದ್ದಾರೆ.

ಗೋವಿಂದ: ಸದ್ಯ ಚಿತ್ರರಂಗದಿಂದ ದೂರ ಉಳಿದಿರುವ ನಟ ಗೋವಿಂದ, ಸಲ್ಮಾನ್ ಖಾನ್ ಮಾರ್ಗದರ್ಶನದಲ್ಲಿ ಕೂದಲಿನ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎನ್ನುತ್ತವೆ ಮೂಲಗಳು.

ಕಪಿಲ್ ಶರ್ಮಾ: ಕಿರುತೆರೆಯ ಖ್ಯಾತ ನಿರೂಪಕ ಕಪಿಲ್ ಶರ್ಮಾ ಕೂಡ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರಂತೆ.