- Kannada News Photo gallery The fame of Ooty in Chitradurga heaven on earth Jogimatti tourist destination
ಕೋಟೆನಾಡಿನ ಊಟಿ, ಚುಮುಚುಮು ಚಳಿ, ಕೈಗೆಟುಕುವ ಮೋಡ ಮಂಜು, ಭೂಲೋಕದ ಸ್ವರ್ಗ -ಈ ಜೋಗಿಮಟ್ಟಿ ಪ್ರವಾಸಿ ತಾಣ! ಒಮ್ಮೆ ನೋಡಿ ಬನ್ನಿ
Jogimatti -Tourist destination in Chitradurga: ಚಿತ್ರದುರ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಬಹುತೇಕ ಕೈಕೊಟ್ಟಂತಾಗಿದೆ. ಆದ್ರೆ, ಕಳೆದ ಒಂದು ವಾರದಿಂದ ಮೋಡ ಮುಚ್ಚಿಕೊಂಡಿದ್ದು ಆಗಾಗ ತುಂತುರು ಮಳೆ ಸುರಿಯುತ್ತಿದೆ. ಹೀಗಾಗಿ, ಕೋಟೆನಾಡಿನ ಊಟಿ ಖ್ಯಾತಿಯ ಜೋಗಿಮಟ್ಟಿ ಅರಣ್ಯ ಹಸಿರು ಹೊದ್ದು ಕಂಗೊಳಿಸುತ್ತಿದೆ.
Updated on: Jul 11, 2023 | 11:32 AM

ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಬಹುತೇಕ ಕೈಕೊಟ್ಟಂತಾಗಿದೆ. ಆದ್ರೆ, ಕಳೆದೊಂದು ವಾರದಿಂದ ಮೋಡ ಕಟ್ಟಿದ ವಾತಾವರಣವಿದ್ದು ಮಲೆನಾಡ ಸೊಬಗು ನಿರ್ಮಾಣ ಆಗಿದೆ. ಹೀಗಾಗಿ, ಕೋಟೆನಾಡಿನ ಊಟಿ ಖ್ಯಾತಿಯ ಜೋಗಿಮಟ್ಟಿ ಪ್ರವಾಸಿ ತಾಣವು ಪರಿಸರ ಪ್ರಿಯರನ್ನು ಬರ ಸೆಳೆಯುತ್ತಿದೆ. ಈ ಕುರಿತು ವರದಿ ಇಲ್ಲಿದೆ.

ಚುಮುಚುಮು ಚಳಿ, ತಣ್ಣನೆ ಗಾಳಿ, ಕೈಗೆಟುಕುವ ಮೋಡ-ಮಂಜು. ಭೂಲೋಕದ ಸ್ವರ್ಗದಂಥ ಪರಿಸರದಲ್ಲಿ ಫುಲ್ ಏಂಜಾಯ್. ಅಪರೂಪದ ಪ್ರಕೃತಿಯ ಸೊಬಗು ಕಣ್ತುಂಬಿಕೊಳ್ಳಲು ಮುಗಿಬಿದ್ದ ಜನ.

ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ (Chitradurga) ನಗರ ಬಳಿಯ ಜೋಗಿಮಟ್ಟಿ (Jogimatti) ವನ್ಯಧಾಮ ಪ್ರದೇಶದಲ್ಲಿ.


ಹೌದು, ಚಿತ್ರದುರ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಬಹುತೇಕ ಕೈಕೊಟ್ಟಂತಾಗಿದೆ. ಆದ್ರೆ, ಕಳೆದ ಒಂದು ವಾರದಿಂದ ಮೋಡ ಮುಚ್ಚಿಕೊಂಡಿದ್ದು ಆಗಾಗ ತುಂತುರು ಮಳೆ ಸುರಿಯುತ್ತಿದೆ. ಹೀಗಾಗಿ, ಕೋಟೆನಾಡಿನ ಊಟಿ (Ooty) ಖ್ಯಾತಿಯ ಜೋಗಿಮಟ್ಟಿ ಅರಣ್ಯ ಹಸಿರು ಹೊದ್ದು ಕಂಗೊಳಿಸುತ್ತಿದೆ.

ಹೀಗಾಗಿ, ಅನೇಕ ಪರಿಸರ ಪ್ರಿಯರು ಜೋಗಿಮಟ್ಟಿಗೆ ಆಗಮಿಸಿ ಸಖತ್ ಏಂಜಾಯ್ ಮಾಡುತ್ತಿದ್ದಾರೆ.

ಮುದ್ರ ಮಟ್ಟದಿಂದ ಮೂರುವರೆ ಸಾವಿರ ಅಡಿ ಎತ್ತರದಲ್ಲಿರುವ ಪ್ರದೇಶವಿದು. ಹೀಗಾಗಿ, ಸದಾಕಾಲ ಭರ್ತಿ ಗಾಳಿ ಇರುತ್ತದೆ. ಮೋಡವೇ ಕೈಗೆಟಕುವ ಅನೂಭೂತಿ ಇಲ್ಲಿ ದಕ್ಕುತ್ತದೆ. ಮಳೆಗಾಲದಲ್ಲಂತೂ ಹಸಿರು ಹೊದ್ದು ಮಿನುಗುವ ಜೋಗಿಮಟ್ಟಿ ಭೂಲೋಕದ ಸ್ವರ್ಗ ಅಂದರೆ ಅತಿಶಯೋಕ್ತಿ ಅಲ್ಲ.

ಇನ್ನು ಚಿತ್ರದುರ್ಗ ಜಿಲ್ಲೆಯ ಜನ ಮಾತ್ರವಲ್ಲದೆ ದೂರದ ಊರುಗಳಿಂದಲೂ ಅನೇಕ ಪ್ರವಾಸಿಗರು ಜೋಗಿಮಟ್ಟಿ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಮಳೆಗಾಲದಲ್ಲಂತೂ ಜೋಗಿಮಟ್ಟಿಗೆ ಆಗಮಿಸುವವರ ಸಂಖ್ಯೆ ಭಾರೀ ಹೆಚ್ಚಿರುತ್ತದೆ.


ಬಯಲುಸೀಮೆಯ ಈ ಅಪರೂಪದ ತಾಣವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿ ಪ್ರವಾಸಿಗರ ಸ್ವರ್ಗವನ್ನಾಗಿಸಬೇಕಿದೆ.

ಬೆಳಗಿನ ಜಾವದಲ್ಲಂತೂ ಜೋಗಿಮಟ್ಟಿ ಜಾತ್ರೆ ಎಂಬಷ್ಟರ ಮಟ್ಟಿಗೆ ಜನ ಸಂದಣಿ ತುಂಬಿರುತ್ತದೆ. ಬೇರೆ ಯಾವ ತಾಣಕ್ಕೂ ಜೋಗಿಮಟ್ಟಿ ಏನೂ ಕಡಿಮೆ ಇಲ್ಲ ಅಂತಾರೆ ಪ್ರವಾಸಿಗರು.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರ ಬಳಿಯ ಜೋಗಿಮಟ್ಟಿ ಅರಣ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಹೀಗಾಗಿ, ನಿತ್ಯ ಸಾವಿರಾರು ಪರಿಸರ ಪ್ರಿಯರು ಜೋಗಿಮಟ್ಟಿಗೆ ಭೇಟಿ ನೀಡಿ ಸಖತ್ ಏಂಜಾಯ್ ಮಾಡುತ್ತಿದ್ದಾರೆ.



















