
ದೇವಸ್ಥಾನದಲ್ಲಿ ಕ್ರಿಯೇಟಿವ್ ಪ್ರೀ ವೆಡ್ಡಿಂಗ್ ಶೂಟ್ : ಮದುವೆ ಫೋಟೋ ಶೂಟ್ ಗಾಗಿ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ಆಯ್ಕೆಯೇ ದೇವಸ್ಥಾನವಾಗಿರುತ್ತದೆ. ಈ ಹಿಂದೆ ಶಿವಾರ್ಚಕ ಮಧು ದೀಕ್ಷಿತ್ ಎಂಬುವವರು ಪ್ರೀವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಚನ್ನಪಟ್ಟಣದವರಾಗಿದ್ದ ದೀಕ್ಷಿತ್ ಅವರ ಪ್ರೀವೆಡ್ಡಿಂಗ್ ಫೋಟೋಶೂಟ್ ವಿಡಿಯೋ ಎಲ್ಲರ ಗಮನ ಸೆಳೆದಿತ್ತು.

ಪೊಲೀಸ್ ಸ್ಟೇಷನ್ ನಲ್ಲಿ ಪ್ರೀ ವೆಡ್ಡಿಂಗ್ ಶೂಟ್ : ಹೈದರಾಬಾದ್ ಪೊಲೀಸ್ ಜೋಡಿಯ ಪ್ರೀ ವೆಡ್ಡಿಂಗ್ ವಿಡಿಯೋ ಶೂಟಿಂಗ್ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಮುದ್ದಾದ ಜೋಡಿಯು ಪೊಲೀಸ್ ಸ್ಟೇಷನ್ ನಲ್ಲಿ ಪೊಲೀಸ್ ಕಾರು, ಪೊಲೀಸ್ ಉಡುಗೆ ಬಳಸಿ ವಿಭಿನ್ನವಾಗಿ ಫೋಟೋ ಶೂಟ್ ಮಾಡಿಸಿದ್ದರು. ಈ ಕ್ರಿಯೇಟಿವ್ ಫೋಟೋ ಶೂಟ್ ಗೆ ಮೆಚ್ಚುಗೆ ವ್ಯಕ್ತವಾಗಿತ್ತು

ಚರಂಡಿಯಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ : ಹೊಸ ಜೀವನಕ್ಕೆ ಕಾಲಿಡಲಿರುವ ಜೋಡಿಗಳಿಬ್ಬರೂ ಬಹಳ ಕ್ರಿಯೇಟಿವ್ ಆಗಿ ಫೋಟೋಶೂಟ್ ಗಲೀಜು ಎನಿಸುವಂತಹ ಚರಂಡಿಯಲ್ಲಿ ಫೋಟೊ ಶೂಟ್ ಮಾಡಿಸಿಕೊಂಡಿದ್ದರು. ಕಸ, ಪ್ಲಾಸ್ಟಿಕ್ , ತ್ಯಾಜ್ಯಗಳು ರಾಶಿ ತುಂಬಿದ ಚರಂಡಿಯ ಮಧ್ಯಭಾಗದಲ್ಲಿ ನಿಂತು ಕೊಂಡು ಕ್ಯಾಮೆರಾಗೆ ವಿಭಿನ್ನ ಭಂಗಿಯಲ್ಲಿ ಪೋಸ್ ನೀಡಿದ್ದರು. ಈ ಜೋಡಿಯ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಹಳ್ಳಿಯ ಸೊಗಡಿನಲ್ಲಿ ಜೋಡಿಯ ಫೋಟೋಶೂಟ್ : ಹಳ್ಳಿ ಶೈಲಿಯಲ್ಲಿ ಫೋಟೋ ಶೂಟ್ ಮಾಡಿಸುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಈ ಹಿಂದೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹೊಸಮಾಲಂಗಿ ಗ್ರಾಮದ ಯುವ ರೈತ ಅಭಿಲಾಷ್ ಚನ್ನಪಟ್ಟಣದ ಕೃತಿಕಾ ಎಂಬುವವರು ಹಳ್ಳಿಯ ಸೊಗಡಿನಲ್ಲಿ ಫೋಟೋಶೂಟ್ ಮಾಡಿಸಿಕೊಂಡ ಈ ಪ್ರೀ ವೆಡ್ಡಿಂಗ್ ಶೂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಅಪ್ಪಟ ಮಣ್ಣಿನ ಮಕ್ಕಳಂತೆ ನವಜೋಡಿಯ ಫೋಟೋಶೂಟ್ : ಅಪ್ಪಟ ಮಣ್ಣಿನ ಮಕ್ಕಳಂತೆ ಹಳ್ಳಿಯ ಸೊಗಡಿನಲ್ಲಿ ನವ ಜೋಡಿಗಳು ಸಾಂಪ್ರದಾಯಿಕವಾಗಿ ಹೊಲದಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಹೊಸ ಜೀವನಕ್ಕೆ ಕಾಲಿಡುತ್ತಿದ್ದ ಈ ಜೋಡಿಯು ಸಾಂಪ್ರದಾಯಿಕವಾಗಿ ಹೊಲಗದ್ದೆಗಳಲ್ಲಿ ಉಳುಮೆ ಮಾಡುತ್ತ, ವಧು ಕೃಷಿಕನ ಪತ್ನಿಯಾಗಿ ಬುತ್ತಿ ಹಿಡಿದು ಬರುವ ಈ ಎಲ್ಲಾ ದೃಶ್ಯದಿಂದಾಗಿ ಈ ಫೋಟೋ ಶೂಟ್ ಆತ್ಯಾರ್ಕಷವಾಗಿ ಮೂಡಿ ಬಂದಿತ್ತು. ಜೋಡಿಯ ಈ ಫೋಟೋ ಶೂಟ್ ಗೆ ನೋಡುಗರಿಂದ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು.

ಆಪರೇಷನ್ ಥಿಯೇಟರ್‌ನಲ್ಲಿ ಪ್ರೀ-ವೆಡ್ಡಿಂಗ್ ಶೂಟ್: ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದಲ್ಲಿನ ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಪ್ರೀ-ವೆಡ್ಡಿಂಗ್ ವಿಡಿಯೋ ಶೂಟ್ ಮಾಡಿಸಿಕೊಂಡಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಗುತ್ತಿಗೆ ಆಧಾರಿತ ವೈದ್ಯರಾಗಿರುವ ಡಾ. ಅಭಿಷೇಕ್ ಎನ್ನುವವರು ವೆಡ್ಡಿಂಗ್ ಶೂಟ್ ಮಾಡಿಸಿದವರಾಗಿದ್ದು, ಸಾರ್ವಜನಿಕರ ಅಸಮಾಧಾನಕ್ಕೂ ಕಾರಣವಾಗಿದೆ.