AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಸ್​ನಲ್ಲಿದೆ ನಾನಾ ಅರ್ಥ, ಸಂಗಾತಿಗೆ ಮುತ್ತು ನೀಡುವ ಮುನ್ನ ಈ ಬಗ್ಗೆ ತಿಳಿದಿದ್ದರೆ ಉತ್ತಮ

ಫೆಬ್ರವರಿ ತಿಂಗಳಲ್ಲಿ ಬರುವ ಪ್ರೇಮಿಗಳ ವಾರ ಪ್ರೇಮಿಗಳ ಪಾಲಿಗೆ ಸಂಭ್ರಮದ ವಾರ. ಒಂದೊಂದು ದಿನ ವಿಶೇಷತೆಗಳಿಂದ ಕೂಡಿರುವ ಕಾರಣ ಪ್ರೇಮಿಗಳು ತಮ್ಮ ಪ್ರೀತಿ ಪಾತ್ರರಿಗೆ ವಿಶೇಷ ಉಡುಗೊರೆಗಳನ್ನು ನೀಡಿ ಖುಷಿ ಪಡಿಸುತ್ತಾರೆ. ಇದೀಗ ಫೆಬ್ರವರಿ 13 ರಂದು ಚುಂಬನ ದಿನ (ಕಿಸ್ ಡೇ ). ಈ ದಿನ ಚುಂಬನದ ಮೂಲಕ ತಮ್ಮ ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸಬಹುದಾಗಿದೆ. ಮುತ್ತು ನೀಡುವ ಮೂಲಕ ಪ್ರೀತಿಯ ಭಾವನೆ ಜೊತೆಗೆ ಕಾಳಜಿ, ಆರೈಕೆ, ಆಸರೆ ಹಾಗೂ ಭರವಸೆಯನ್ನು ತೋರಿಸಬಹುದಾಗಿದೆ. ಮತ್ತೇರಿಸುವ ಮುತ್ತಿನಲ್ಲಿಯು ನಾನಾ ರೀತಿಯ ವಿಧಗಳಿದ್ದು, ವಿವಿಧ ರೀತಿಯ ಅರ್ಥವನ್ನು ನೀಡುತ್ತದೆ.

ಸಾಯಿನಂದಾ
| Edited By: |

Updated on: Feb 12, 2024 | 6:03 PM

Share
ಮುತ್ತು ಎಂದ ಕೂಡಲೇ ಎಲ್ಲರಿಗೂ ಒಂದು ತೆರೆನಾದ ಮುಜುಗರ. ಆದರೆ ಪ್ರೀತಿಯನ್ನು ವ್ಯಕ್ತಪಡಿಸುವ ವಿಧಾನದಲ್ಲಿ ಒಂದು ಈ ಚುಂಬನ. ದಾಂಪತ್ಯ ಜೀವನವು ಸುಖಕರವಾಗಿ ಸಾಗಬೇಕಾದರೆ ಬಿಸಿ ಅಪ್ಪುಗೆಯ ಜೊತೆಗೆ ಸಿಹಿ ಮುತ್ತು ಸುರಕ್ಷತೆಯ ಭಾವವನ್ನು ಕಟ್ಟಿಕೊಡುತ್ತದೆ. ಕಿಸ್ ಮಾಡುವುದರಿಂದ ಮನಸ್ಸು ನಿರಾಳವಾಗುವುದಲ್ಲದೆ ದೈಹಿಕವಾಗಿ ಗಟ್ಟಿಯಾಗಿಸುತ್ತದೆ.

1 / 8
ಕೆನ್ನೆಯ ಮೇಲಿನ ಚುಂಬನ : ಸಂಗಾತಿಗಳು ಅಥವಾ ಪ್ರೇಮಿಗಳು ಪ್ರೀತಿಯನ್ನು ವ್ಯಕ್ತಪಡಿಸುವ ಮೂಲಕ ಕೆನ್ನೆಯ ಮೇಲೆ ಮುತ್ತನ್ನಿಕ್ಕುತ್ತಾರೆ.  ಈ ಕೆನ್ನೆಯ ಮೇಲಿನ ಚುಂಬನವು ಸಂಗಾತಿಗಳಿಗೆ ಮಾತ್ರ ಸೀಮಿತವಾಗಿಲ್ಲ. ತಾಯಿ ಮಕ್ಕಳಿಗೆ ಪ್ರೀತಿಯಭಾವನೆ ವ್ಯಕ್ತ ಪಡಿಸುವ ಮೂಲಕ ಕೆನ್ನೆಯ ಮೇಲೆ ಮುತ್ತಿಕ್ಕುತ್ತಾರೆ. ಕೆನ್ನೆಯ ಮೇಲಿನ ಚುಂಬನವು ಆತ್ಮೀಯತೆ, ವಾತ್ಸಾಲ್ಯವನ್ನು ತೋರಿಸುತ್ತದೆ.

2 / 8
ಕೈಗೆ ನೀಡುವ ಸಿಹಿ ಮುತ್ತು : ಸಾಮಾನ್ಯವಾಗಿ ಪ್ರೇಮಿಗಳು ತಮ್ಮ ಪ್ರೇಯಸಿಯ ಕೈಗೆ ಮುತ್ತು ನೀಡುವುದನ್ನು ನೋಡಿರಬಹುದು. ಈ ರೀತಿಯ ಮುತ್ತು ಯುರೋಪಿನಿಯನ್ ರಾಷ್ಟ್ರಗಳಲ್ಲಿ ಪ್ರಾರಂಭವಾಯಿತು. ಸಂಗಾತಿಯು ತನ್ನ ಜೊತೆಗಾತಿಯ ಕೈ ಮೇಲೆ ಚುಂಬಿಸಿದರೆ ಆತ್ಮೀಯತೆ, ಕಾಳಜಿ ಹಾಗೂ ಗೌರವವನ್ನು ಸೂಚಿಸುತ್ತದೆ.

3 / 8
ಹಣೆಗೆ ನೀಡುವ ಮುತ್ತು : ಈ ವಿಧದ ಮುತ್ತು ಕೆಲವೇ ಸಂಗಾತಿ ಅಥವಾ ಪ್ರೇಮಿಗೆ ಮಾತ್ರವಲ್ಲ. ತಂದೆ ತಾಯಿಯಂದಿರು ಕೂಡ ತಮ್ಮ ಮಕ್ಕಳಿಗೆ ಹಣೆಗೆ ಮುತ್ತನ್ನು ನೀಡಿ  ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಈ ರೀತಿಯಾಗಿ ಹಣೆಯ ಮೇಲೆ ಮುತ್ತಿಕ್ಕಿದರೆ ಸುರಕ್ಷತೆಯ ಭಾವವನ್ನು ತೋರಿಸುತ್ತದೆ.

4 / 8
ದಿ ಫ್ರೆಂಚ್‌ ಕಿಸ್‌ : ಇದು ಪ್ರೇಮಿಗಳಿಬ್ಬರೂ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಕಿಸ್ ಗಳಲ್ಲಿ ಒಂದು. ತುಟಿಗೆ ತುಟಿ ಸೇರಿಸಿ ಮುತ್ತು ನೀಡುವುದು ಲೈಂಗಿಕ ಆಸಕ್ತಿಯನ್ನು ಉದ್ರೇಕಿಸುತ್ತದೆ. ಈ ಮುತ್ತಿನಲ್ಲಿ ಪ್ರೀತಿ, ಕಾಮ ಮಿಶ್ರಿತವಾಗಿದ್ದು, ಪ್ರಯಣಕ್ಕೆ ನಾಂದಿಯಾಗುತ್ತದೆ.

5 / 8
 ಇಯರ್‌ಲೋಬ್‌ ಕಿಸ್ : ಕಿವಿಯ ಸಮೀಪ ಬಂದು ಕಿವಿಗೆ ಚುಂಬಿಸುವುದಾಗಿದೆ. ಈ ರೀತಿಯ ಮುತ್ತು ಲೈಂಗಿಕ ಭಾವನೆಯನ್ನು ಉದ್ರೇಕಿಸಿ ರೋಮ್ಯಾಂಟಿಕ್ ಕ್ಷಣಗಳು ಸೃಷ್ಟಿಯಾಗಲು ಕಾರಣವಾಗುತ್ತದೆ.

6 / 8
ನೆಕ್‌ ಕಿಸ್ :  ಸಂಗಾತಿಗಳಿಬ್ಬರೂ ಕೂಡ ರೋಮ್ಯಾಂಟಿಕ್ ಆಗಿ ಇದ್ದಂತಹ ಸಂದರ್ಭದಲ್ಲಿ ಕೊಡುವ ಮುತ್ತಿದು. ಮೊದಲಿಗೆ ಸಂಗಾತಿಗೆ ನೆಕ್‌ಗೆ ಮುತ್ತನ್ನು ನೀಡಿ ಆಕೆಗೆ ನಿಮ್ಮ ದೈಹಿಕ ಆಸೆಯನ್ನು ತೋರಿಸುವುದಾಗಿದೆ.

7 / 8
ಶೋಲ್ಡರ್ ಕಿಸ್ : ಭುಜಕ್ಕೆ ಮುತ್ತನ್ನು ನೀಡುವುದು ಲೈಂಗಿಕ ಭಾವನೆಯನ್ನು ಉತ್ತೇಜಿಸುವ ಒಂದು ವಿಧಾನವಾಗಿದೆ. ಈ ರೀತಿಯಾಗಿ ಭುಜಕ್ಕೆ ಮುತ್ತಿಕ್ಕಿದ್ದಾಗ ನಿಮಗೆ ಅವರ ಮೇಲೆ ಆಸಕ್ತಿ ಇದೆ ಎಂದು ಹೇಳುತ್ತದೆ. ಇದರಿಂದ ಜೊತೆಗಾತಿಯು ನಿಮ್ಮೊಂದಿಗೆ ರೋಮ್ಯಾನ್ಸ್ ನಲ್ಲಿ ತೊಡಗಿಕೊಳ್ಳುತ್ತಾರೆ.

8 / 8