40 ವರ್ಷದ ನಂತರ ಸಾಮಾನ್ಯವಾಗಿ ಕಾಡುವ ಕಣ್ಣಿನ ಸಮಸ್ಯೆಗಳಿವು
TV9 Web | Updated By: Pavitra Bhat Jigalemane
Updated on:
Feb 10, 2022 | 3:16 PM
ವಯಸ್ಸಾದಂತೆ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳು ಕಾಡಲಾರಂಭಿಸುತ್ತವೆ. ಅದರಲ್ಲೂ 40 ವರ್ಷದ ಬಳಿಕವೇ ಕಣ್ಣಿನ ಸಮಸ್ಯೆ ಕಾಡುತ್ತದೆ ಹೀಗಾಗಿ ಯಾವೆಲ್ಲಾ ಸಮಸ್ಯೆಗಳು ಕಾಡಬಹುದು ಎನ್ನುವ ಮಾಹಿತಿ ಇಲ್ಲಿದೆ.
1 / 7
ಕಣ್ಣಿನ ಮಸ್ಯೆ ಎದುರಾಗಲು ವಯಸ್ಸಿನ ಹಂಗಿಲ್ಲ. ಆದರೆ ಎಷ್ಟೇ ಆರೋಗ್ಯವಾಗಿದ್ದರೂ ಕೂಡ 40ರ ಆಸುಪಾಸಿನಲ್ಲೊಮ್ಮೆ ಕಣ್ಣಿನ ತೊಂದರೆ ಎದುರಾಗುತ್ತದೆ. ಹೀಗಾಗಿ ಪ್ರತೀ 6 ತಿಂಗಳಿಗಾದರೂ ಕಣ್ಣಿನ ಪರೀಕ್ಷೆ ಮಾಡಿಸಿ ಎನ್ನುತ್ತಾರೆ ವೈದ್ಯರು. ಹಾಗಾದರೆ 40 ನೇ ವಯಸ್ಸಿನಲ್ಲಿ ಯಾವೆಲ್ಲಾ ಕಣ್ಣಿನ ಸಮಸ್ಯೆಗಳು ಕಾಡಲಿದೆ ಎನ್ನುವ ಮಾಹಿತಿ ಇಲ್ಲಿದೆ.
2 / 7
ಸಾಂದರ್ಭಿಕ ಚಿತ್ರ
3 / 7
ಸ್ಪಷ್ಟತೆ ಇಲ್ಲದಿರುವುದು: ವಯಸ್ಸಾದಂತೆ ಕಣ್ಣಿನ ದೃಷ್ಟಿ ಕಳೆದುಕೊಳ್ಳುವಂತಾಗಿ, ನೋಡುತ್ತಿರುವಾಗಲೇ ಮಂಜಿನಂತಾಗುತ್ತದೆ.
4 / 7
ಎರಡು ರೀತಿಯ ದೃಷ್ಟಿ: ಎರಡೂ ಕಣ್ಣುಗಳ ದೃಷ್ಟಿ ಬೇರೆ ಬೇರೆ ಕಾಣವುದು. ಒಂದೇ ಕಣ್ಣಿನಲ್ಲಿ ದೂರದಲ್ಲಿರುವುದು ಸ್ಪಷ್ಟವಾಗಿ ಕಾಣಿಸಿದರೆ, ಇನ್ನೊಂದು ಕಣ್ಣಿನಲ್ಲಿ ಕಾಣಿಸಿದೆ ವಸ್ತು ಅಸ್ಪಷ್ಟವಾಗಿ ಗೋಚರವಾಗುವ ಸಮಸ್ಯೆ ಉಲ್ಬಣವಾಗಬಹುದು.
5 / 7
ನೀವು ಮಧುಮೇಹಿಗಳಾಗಿದ್ದರೆ ಅವಶ್ಯವಾಗಿ ಕೆಲವು ತಿಂಗಳಿಗೊಮ್ಮೆ ಕಣ್ಣಿನ ತಪಾಸಣೆ ಮಾಡಿಕೊಳ್ಳಿ. ಇಲ್ಲವಾದರೆ ದೃಷ್ಟಿಯ ಸಮಸ್ಯೆ ಕ್ರಮೇಣ ಉಲ್ಬಣಿಸಬಹುದು.
6 / 7
ಕಣ್ಣಿನ ತುರಿಸುವಿಕೆ, ಅಲರ್ಜಿಯಿಂದ ಕಣ್ಣು ಕೆಂಪಗಾಗುವ ಸಮಸ್ಯೆ ಇದ್ದರೆ ಅದು 40ರ ಬಳಿಕ ಹೆಚ್ಚಾಗಬಹುದು. ಹೀಗಾಗಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ.
7 / 7
40 ವರ್ಷದ ನಂತರ ಮುಪ್ಪಿನಲ್ಲಿ ಸಹಜವಾಗಿ ಕಾಡುವ ದೃಷ್ಟಿದೋಷ ಉಂಟಾಗಬಹುದು. ಹೀಗಾಗಿ ಕಣ್ಣಿನ ಸಮಸ್ಯೆ ಆರಂಭದಲ್ಲೇ ವೈದ್ಯರನ್ನು ಸಂಪರ್ಕಿಸಿ ಕನ್ನಡಕವನ್ನು ಪಡೆದುಕೊಳ್ಳಿ.