- Kannada News Photo gallery These beautiful destinations of India are no less than any foreign destination! Must visit at least once
Travel Tips: ಭಾರತದ ಈ ಸುಂದರ ತಾಣಗಳು ಯಾವ ವಿದೇಶಿ ತಾಣಗಳಿಗಿಂತ ಕಡಿಮೆ ಇಲ್ಲ! ಒಮ್ಮೆಯಾದರೂ ಭೇಟಿ ನೀಡಲೇಬೇಕು
ಪ್ರಯಾಣವನ್ನು ಇಷ್ಟಪಡುವ ಜನರು ಯಾವಾಗಲೂ ಹೊಸ ಸ್ಥಳಗಳನ್ನು ಹುಡುಕುತ್ತಾರೆ. ನಾವು ನಿಮ್ಮೊಂದಿಗೆ ಭಾರತದ ಅಂತಹ ಸ್ಥಳಗಳ ಬಗ್ಗೆ ಹಂಚಿಕೊಳ್ಳುತ್ತಿದ್ದೇವೆ ಅವು ವಿದೇಶ ತಾಣಗಳಿಗಿಂತ ಕಡಿಮೆ ಇಲ್ಲ.
Updated on: Sep 30, 2022 | 7:00 AM

ಪ್ರಯಾಣವನ್ನು ಇಷ್ಟಪಡುವ ಜನರು ಯಾವಾಗಲೂ ಹೊಸ ಸ್ಥಳಗಳನ್ನು ಹುಡುಕುತ್ತಾರೆ. ಜಗತ್ತಿನಲ್ಲಿ ಇಂತಹ ಹಲವಾರು ದೇಶಗಳಿವೆ, ಅಲ್ಲಿ ನಾವು ಹೋಗಲು ಲಕ್ಷಗಳಷ್ಟು ಖರ್ಚು ಮಾಡಬೇಕಾಗುತ್ತದೆ. ಆದರೆ ಇಂದು ನಾವು ನಿಮ್ಮೊಂದಿಗೆ ಭಾರತದ ಅಂತಹ ಸ್ಥಳಗಳ ಬಗ್ಗೆ ಹಂಚಿಕೊಳ್ಳುತ್ತಿದ್ದೇವೆ ಅವು ವಿದೇಶ ತಾಣಗಳಿಗಿಂತ ಕಡಿಮೆ ಇಲ್ಲ.

ನಿಮಗೆ ಮಲೇಷಿಯಾಕ್ಕೆ ಹೋಗಿ ಅಲ್ಲಿನ ತೋಟಗಳಲ್ಲಿ ಚಹಾ ಸವಿಯುವ ಆಸೆ ಇದೇಯಾ? ಹಾಗಾದರೆ ಕೇರಳದ ಮುನ್ನಾರ್‌ಗೆ ಹೋಗುವ ಮೂಲಕ ನೀವು ನಿಮ್ಮ ಆಸೆಯನ್ನು ನನಸಾಗಿಸಿಕೊಳ್ಳಬಹುದು. ಇಲ್ಲಿನ ಸೌಂದರ್ಯ ಮಲೇಷ್ಯಾಕ್ಕಿಂತ ಕಡಿಮೆಯಿಲ್ಲ.

ಅಂಡಮಾನ್ ಭಾರತದ ಅತ್ಯಂತ ಸುಂದರವಾದ ಸ್ಥಳವಾಗಿದೆ. ಇಲ್ಲಿಯೂ ಸಹ ನೀವು ಕಡಿಮೆ ಹಣದಲ್ಲಿ ಸಮುದ್ರದ ಆಳದಲ್ಲಿನ ಜೀವ ಸಂಕುಲವನ್ನು ಆನಂದಿಸಬಹುದು.

ನೀವು ಆಸ್ಟ್ರೇಲಿಯಾದ ಎತ್ತರದ ಪರ್ವತಗಳನ್ನು ನೋಡಲು ಬಯಸಿದ್ದರೆ, ಭಾರತದ ಲಡಾಖ್‌ಗೆ ಹೋಗಬಹುದು. ಭಾರತದ ಲಡಾಖ್‌ನಲ್ಲಿ ಆಸ್ಟ್ರೇಲಿಯಾದಂತೆಯೇ ಎತ್ತರದ ಪರ್ವತಗಳ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳಬಹುದು.

ಸ್ವಿಟ್ಜರ್ಲೆಂಡ್‌ಗೆ ಹೋಗಬೇಕೆಂಬುದು ಅನೇಕರ ಕನಸಾಗಿರುತ್ತದೆ. ಆದರೆ, ದುಬಾರಿ ಟಿಕೆಟ್‌ಗಳಿಂದ ಅದು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಕಡಿಮೆ ಬಜೆಟ್‌ನಲ್ಲಿ ಕಾಶ್ಮೀರದ ಗುಲ್ಮಾರ್ಗ್‌ಗೆ ಹೋಗಬಹುದು. ಇದು ಯಾವ ಸ್ವಿಟ್ಜರ್ಲೆಂಡ್ಗಿಂತ ಕಡಿಮೆ ಇಲ್ಲ.














