ಚಳಿಗಾಲದಲ್ಲಿ ದೇಹವನ್ನು ಒಳಗಿನಿಂದ ಆರೋಗ್ಯವಾಗಿಟ್ಟುಕೊಳ್ಳುವುದು ಬಹಳ ಮುಖ್ಯ ಮತ್ತು ಇದಕ್ಕಾಗಿ ವರ್ಕ್ ಔಟ್ ಅಥವಾ ವಾಕಿಂಗ್ ಅತ್ಯುತ್ತಮ ಆಯ್ಕೆಯಾಗಿದೆ. ದೇಹವನ್ನು ಕ್ರಿಯಾಶೀಲವಾಗಿರಿಸಿಕೊಳ್ಳುವುದು ಬಹಳ ಮುಖ್ಯ.
ಕಡಿಮೆ ನೀರು ಕುಡಿಯುವುದರಿಂದ ರಕ್ತ ಸಂಚಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜನರು ಸಾಮಾನ್ಯವಾಗಿ ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುತ್ತಾರೆ. ಇದು ಉತ್ತಮ ಅಭ್ಯಾಸ ಅಲ್ಲ. ಹೆಚ್ಚು ಹೆಚ್ಚು ನೀರು ಕುಡಿಯಿರಿ ಮತ್ತು ದೇಹವನ್ನು ಚೆನ್ನಾಗಿ ನೋಡಿಕೊಳ್ಳಿ.
ಉಗುರು ಸುತ್ತು ಜತೆಗೆ ಈ ಋತುವಿನಲ್ಲಿ ಬೆರಳುಗಳ ಮಧ್ಯೆ ತುರಿಕೆ ಉಂಟಾಗುತ್ತದೆ. ತುರಿಕೆ ಹುಣ್ಣುಗಳನ್ನು ಉಂಟುಮಾಡುತ್ತದೆ. ಹೀಗಾಗಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಹುಣ್ಣುಗಳು ಬೆಳೆಯುವ ಮೊದಲು ವೈದ್ಯರನ್ನು ಭೇಟಿ ಮಾಡಲು ಮರೆಯದಿರಿ.
ತಪ್ಪಾದ ಪಾದರಕ್ಷೆಗಳಿಂದಲೂ ಉಗುರು ಸುತ್ತು ಉಂಟಾಗುತ್ತದೆ. ಚಳಿಯಲ್ಲಿ ಬಿಗಿಯಾದ ಬೂಟುಗಳು ಅಥವಾ ಚಪ್ಪಲಿಗಳನ್ನು ಧರಿಸುವುದನ್ನು ತಪ್ಪಿಸಿ ಮತ್ತು ಆರಾಮದಾಯಕ ಪಾದರಕ್ಷೆಗಳನ್ನು ಧರಿಸಲು ಪ್ರಯತ್ನಿಸಿ.
ಕೈಕಾಲುಗಳನ್ನು ತೊಳೆದ ನಂತರ ಅಥವಾ ತಣ್ಣೀರಿನಲ್ಲಿ ಕೆಲಸ ಮಾಡಿದ ನಂತರ ಜನರು ಬೆಂಕಿಯ ಮುಂದೆ ಕೈಕಾಲು ಒಣಗಿಸುವ ಪ್ರಯತ್ನ ಮಾಡುತ್ತಾರೆ. ಹೀಗೆ ಮಾಡುವುದರಿಂದ ಬೆರಳುಗಳಲ್ಲಿ ಊತ ಉಂಟಾಗುತ್ತದೆ ಮತ್ತು ಉಗುರು ಸುತ್ತಾಗುತ್ತದೆ.