Neeraj Chopra: ಬಂಗಾರದ ಮನುಷ್ಯನಿಗೆ ಚಿನ್ನದಂತಹ ಗೌರವ: ಇನ್ಮುಂದೆ ಆಗಸ್ಟ್ 7 ಬರೀ ದಿನವಲ್ಲ

neeraj chopra august 7: ದೆಹಲಿ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಸಿಕ್ಕ ಜನರ ಪ್ರೀತಿ ಹಾಗೂ ಸ್ವಾಗತಕ್ಕೆ ಖುಷಿ ವ್ಯಕ್ತಪಡಿಸಿದ ನೀರಜ್, ಪ್ರತಿ ಕ್ರೀಡಾಪಟುವೂ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸು ಕಾಣುತ್ತಾರೆ.

TV9 Web
| Updated By: ಝಾಹಿರ್ ಯೂಸುಫ್

Updated on:Aug 10, 2021 | 5:27 PM

ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಇದು ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಭಾರತದ ಮೊದಲ ಚಿನ್ನದ ಪದಕ ಎಂಬುದು ವಿಶೇಷ. ಹಾಗೆಯೇ ವೈಯುಕ್ತಿಕ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಎರಡನೇ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆ ಕೂಡ ನೀರಜ್​ಗೆ ಸಲ್ಲುತ್ತದೆ. ಇದಕ್ಕೂ ಮೊದಲು, ಅಭಿನವ್ ಬಿಂದ್ರಾ 2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇದೀಗ ನೀರಜ್ ಸಾಧನೆಗೆ ಪ್ರೋತ್ಸಾಹಗಳ ಸುರಿಮಳೆಯಾಗುತ್ತಿದೆ. ಅಷ್ಟೇ ಅಲ್ಲದೆ ಯುವ ಜಾವೆಲಿನ್ ಎಸೆತಗಾರನ ಸಾಧನೆಯನ್ನು ಭಾರತದ ಅಥ್ಲೆಟಿಕ್ಸ್ ಫೆಡರೇಶನ್ ವಿಶೇಷವಾಗಿ ಗೌರವಿಸಿದೆ.

1 / 7
ಹೌದು, ಮಂಗಳವಾರ ನಡೆದ ಎಎಫ್​ಐ ಸಭೆಯಲ್ಲಿ ನೀರಜ್ ಚೋಪ್ರಾ ಅವರ ಐತಿಹಾಸಿಕ ಸಾಧನೆಯನ್ನು ಸ್ಮರಣೀಯವಾಗಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಪ್ರತಿವರ್ಷ 7 ಆಗಸ್ಟ್ ಅನ್ನು ಜಾವೆಲಿನ್ ಥ್ರೋ ದಿನವನ್ನಾಗಿ ಆಚರಿಸಲಾಗುತ್ತದೆ. ಆಗಸ್ಟ್​ 7 ರಂದು ಟೋಕಿಯೋದಲ್ಲಿ ಚಿನ್ನದ ಪದಕ ಗೆದ್ದ ಸ್ಮರಣಾರ್ಥವಾಗಿ ಅದೇ ದಿನವನ್ನು ಜಾವೆಲಿನ್ ಥ್ರೋ ಡೇ ಎಂದು ಘೋಷಿಸಲಾಗಿದೆ. ಅಷ್ಟೇ ಅಲ್ಲದೆ ಈ ದಿನದಂದು ದೇಶದಾದ್ಯಂತ ಜಾವೆಲಿನ್ ಥ್ರೋ ಪಂದ್ಯಾವಳಿಗಳನ್ನು ಆಯೋಜಿಸಲಾಗುವುದು ಎಂದು ಅಥ್ಲೆಟಿಕ್ಸ್ ಫೆಡರೇಶನ್ ತಿಳಿಸಿದೆ.

2 / 7
ಎಎಫ್​ಐನ ಈ ನಿರ್ಧಾರಕ್ಕೆ ನೀರಜ್ ಕೂಡ  ಸಂತಸ ವ್ಯಕ್ತಪಡಿಸಿದ್ದಾರೆ. ನನ್ನ ದೇಶಕ್ಕೆ ಸ್ಫೂರ್ತಿಯಾಗಲು ಸಾಧ್ಯವಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಇದು ನನ್ನ ಹೊರತಾಗಿ ಇತರರಿಗೂ ಸಿಕ್ಕ ಗೌರವವಾಗಿದೆ. ಅವರು ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶ ಸಿಕ್ಕಂತಾಗಿದೆ. ಖಂಡಿತವಾಗಿಯೂ ಕಿರಿಯ ಆಟಗಾರರು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ನೀರಜ್ ತಿಳಿಸಿದರು.

3 / 7
ನೀರಜ್‌ಗಾಗಿ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಎಎಫ್‌ಐನ ಯೋಜನಾ ಸಮಿತಿಯ ಅಧ್ಯಕ್ಷ ಲಲಿತ್ ಭಾನೋಟ್,  ಫೆಡರೇಶನ್ ಪ್ರತಿ ವರ್ಷ ಆಗಸ್ಟ್ 7 ರಂದು ಜಾವೆಲಿನ್ ಥ್ರೋವನ್ನು ಆಯೋಜಿಸಲು ನಿರ್ಧರಿಸಿದೆ. ಈ ಮೂಲಕ ಮತ್ತಷ್ಟು ಕ್ರೀಡಾಪಟುಗಳು ಈ ವಿಭಾಗದಲ್ಲಿ ಸಾಧನೆ ಮಾಡುವುದನ್ನು ನಾವು ಬಯಸುತ್ತೇವೆ ಎಂದು ತಿಳಿಸಿದರು.

4 / 7
ಇದೇ ವೇಳೆ ಮಾತನಾಡಿದ ನೀರಜ್ ಚೋಪ್ರಾ, ನನ್ನ ಮುಂದಿನ ಗುರಿ 90 ಮೀಟರ್ ಜಾವೆಲಿನ್ ಎಸೆಯುವುದು. ನಾನು 90 ಮೀಟರ್‌ಗಳಷ್ಟು ಹತ್ತಿರದಲ್ಲಿದ್ದೇನೆ. ಅದಕ್ಕಾಗಿ ಕೋಚ್ ಜೊತೆ ಕಠಿಣ ಅಭ್ಯಾಸ ನಡೆಸಲಿದ್ದೇನೆ. 90 ಮೀಟರ್ ಎಸೆಯುವುದು ನನ್ನ ಕನಸು. ಅದನ್ನು ನನಸಾಗಿಸಲು ಪ್ರಯತ್ನಿಸುತ್ತೇನೆ ಎಂದರು.

5 / 7
ಅಲ್ಲದೆ, ದೆಹಲಿ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಸಿಕ್ಕ ಜನರ ಪ್ರೀತಿ ಹಾಗೂ ಸ್ವಾಗತಕ್ಕೆ ಖುಷಿ ವ್ಯಕ್ತಪಡಿಸಿದ ನೀರಜ್, ಪ್ರತಿ ಕ್ರೀಡಾಪಟುವೂ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸು ಕಾಣುತ್ತಾರೆ. ನಾನು ಚಿನ್ನ ಗೆದ್ದಿದ್ದೇನೆ ಮತ್ತು ಅದನ್ನು ನಂಬಲು ಸಾಧ್ಯವಾಗಲಿಲ್ಲ. ಏಕೆಂದರೆ ಸ್ಪರ್ಧೆಯು ತುಂಬಾ ಕಠಿಣವಾಗಿತ್ತು. ಅನೇಕ ಉತ್ತಮ ಎಸೆತಗಾರರು ಇದ್ದರು. ಆದರೆ ನನ್ನ ಕಠಿಣ ಪರಿಶ್ರಮಕ್ಕೆ ಚಿನ್ನದಂತಹ ಫಲ ಸಿಕ್ಕಿತು ಎಂದರು.

6 / 7
ನೀರಜ್ ಚೋಪ್ರಾ

ನೀರಜ್ ಚೋಪ್ರಾ

7 / 7

Published On - 5:22 pm, Tue, 10 August 21

Follow us
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ

ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ

ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು

ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ

ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್

ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ

ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?

ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್