ಸಿನಿಮಾ ತಾರೆಯರು ಯಾವುದೇ ಹಬ್ಬಗಳನ್ನು ಸಹ ಅದ್ಧೂರಿಯಾಗಿ ಆಚರಿಸುತ್ತಾರೆ. ಇದೀಗ ಕ್ರಿಸ್ಮಸ್ ಅನ್ನೂ ಹಲವು ತಾರೆಯರು ಆಚರಿಸಿದ್ದಾರೆ.
ರಾಮ್ ಚರಣ್, ಅಲ್ಲು ಅರ್ಜುನ್, ಮಹೇಶ್ ಬಾಬು ಅವರುಗಳ ಕುಟುಂಬದವರು ಇನ್ನೂ ಕೆಲವು ಸೆಲೆಬ್ರಿಟಿಗಳೊಟ್ಟಿಗೆ ಸೇರಿ ಕ್ರಿಸ್ಮಸ್ ಆಚರಣೆ ಮಾಡಿದ್ದಾರೆ.
ಟಾಲಿವುಡ್ ಸೆಲೆಬ್ರಿಟಿಗಳಿಗೆ ಹತ್ತಿರವಾಗಿರುವ ಸಬೀನಾ ಕ್ಸೇವಿಯರ್ ಕ್ರಿಸ್ಮಸ್ಗಾಗಿ ದೊಡ್ಡ ಪಾರ್ಟಿ ಕೊಟ್ಟಿದ್ದಾರೆ.
ಮಹೇಶ್ ಬಾಬು ಕುಟುಂಬ, ರಾಮ್ ಚರಣ್ ಹಾಗೂ ಕುಟುಂಬ, ಅಲ್ಲು ಅರ್ಜುನ್ ಮತ್ತು ಕುಟುಂಬದವರು ಕ್ರಿಸ್ಮಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ.
ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಅವರು ಪಾರ್ಟಿಯ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ರಾಮ್ ಚರಣ್ ಪತ್ನಿ ಉಪಾಸನಾ ಸಹ ಕ್ರಿಸ್ಮಸ್ ಪಾರ್ಟಿಯ ಹಲವು ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಕೆಂಪು, ಬಿಳಿ ಬಣ್ಣದ ಉಡುಪುಗಳನ್ನು ಧರಿಸಿ ಟಾಲಿವುಡ್ನ ಹಲವು ಸೆಲೆಬ್ರಿಟಿಗಳು ಕ್ರಿಸ್ಮಸ್ ಪಾರ್ಟಿಯನ್ನು ಎಂಜಾಯ್ ಮಾಡಿದ್ದಾರೆ.
Published On - 5:26 pm, Tue, 26 December 23