ವೀಕೆಂಡ್ ಟ್ರಿಪ್ಗೆ ಪ್ಲಾನ್ ಮಾಡಿದ್ದೀರಾ? ಜಾರ್ಖಂಡ್‌ನ ಈ ಗಿರಿಧಾಮಗಳಿಗೆ ಒಮ್ಮೆ ಭೇಟಿ ನೀಡಿ
TV9 Web | Updated By: preethi shettigar
Updated on:
Dec 10, 2021 | 1:12 PM
Travel Special: ಪ್ರಕೃತಿ, ಕಾಡು ಮತ್ತು ಬೆಟ್ಟಗಳ ನಡುವೆ ಜಾರ್ಖಂಡ್ ಹೆಚ್ಚು ಸುಂದರವಾದ ಪ್ರದೇಶ. ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಇಲ್ಲಿರುವ ಸುಂದರವಾದ ಜಲಪಾತ ಮತ್ತು ಗಿರಿಧಾಮ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.
1 / 5
ಗಿರಿಧಾಮಕ್ಕೆ ಭೇಟಿ ನೀಡಬೇಕು ಎಂದಾಗ ಜನರು ಸಾಮಾನ್ಯವಾಗಿ ಹಿಮಾಚಲ ಪ್ರದೇಶ ಅಥವಾ ಉತ್ತರಾಖಂಡದ ಹೆಸರನ್ನು ಮೊದಲು ನೆನಪು ಮಾಡಿಕೊಳ್ಳುತ್ತಾರೆ. ಆದಾಗ್ಯೂ ಕೇರಳ ಮತ್ತು ಮಹಾರಾಷ್ಟ್ರದಲ್ಲಿಯೂ ಕೆಲವು ಅದ್ಭುತ ಪ್ರವಾಸಿತಾಣಗಳಿವೆ. ಆದರೆ ನೀವು ಎಂದಾದರೂ ಜಾರ್ಖಂಡ್ ಸುತ್ತಮುತ್ತಲಿನ ಅತ್ಯಂತ ಸುಂದರವಾದ ಗಿರಿಧಾಮಕ್ಕೆ ಭೇಟಿ ನೀಡಿದ್ದೀರಾ? ಹಾಗಿದ್ದರೆ ಜಾರ್ಖಂಡ್‌ನ ಕೆಲವು ವಿಶೇಷ ಗಿರಿಧಾಮಗಳ ವಿವರ ಇಲ್ಲಿದೆ ನೋಡಿ.
2 / 5
ಘಾಟ್ ಶಿಲಾ (Ghatshila) ಬೆಟ್ಟ. ಪ್ರಕೃತಿ ಪ್ರಿಯರಿಗೆ ಇದೊಂದು ಸ್ವರ್ಗದಂತೆ ಅನುಭವ ನೀಡುತ್ತದೆ. ನೆಮ್ಮದಿಯಿಂದ ಕಾಲ ಕಳೆಯಲು ಈ ಸ್ಥಳಕ್ಕೆ ಭೇಟಿ ನೀಡಬಹುದು. ಈ ಘಾಟ್ ಶಿಲಾ ಪಕ್ಕದಲ್ಲಿಯೇ ನೀವು ಅನೇಕ ಸ್ಥಳಗಳಿಗೆ ಭೇಟಿ ನೀಡಬಹದು.
3 / 5
ಗಿರಿದಿಹ್ (Giridih) ಜಾರ್ಖಂಡ್‌ನ ಪ್ರಸಿದ್ಧ ಗಿರಿಧಾಮವಾಗಿದೆ. ಇಲ್ಲಿನ ದಟ್ಟ ಕಾಡು ಮತ್ತು ಮಹುವಾ ಮರಗಳು ಎಲ್ಲರಿಗೂ ಚಿರಪರಿಚಿತ. ಇಲ್ಲಿಂದ ಜಾರ್ಖಂಡ್‌ನ ಅತಿ ಎತ್ತರದ ಬಂಡೆಗಳನ್ನು ನೋಡುವುದು. ಇದು ತುಂಬಾ ಆಹ್ಲಾದಕರವಾಗಿರುತ್ತದೆ ಎಂದು ಹೇಳಲಾಗುತ್ತದೆ.
4 / 5
ನೆಟರ್‌ಹಾಟ್ (Netarhat). ಇದು ಜಾರ್ಖಂಡ್‌ನ ರಾಜಧಾನಿ ರಾಂಚಿಯಿಂದ ಸುಮಾರು 150 ಕಿಮೀ ದೂರದಲ್ಲಿದೆ. ಈ ಸ್ಥಳದ ನೈಸರ್ಗಿಕ ಸೌಂದರ್ಯವು ನಿಮ್ಮನ್ನು ಆಕರ್ಷಿಸುತ್ತದೆ. ಇಲ್ಲಿ ಸೂರ್ಯಾಸ್ತ ಮತ್ತು ಸೂರ್ಯೋದಯವನ್ನು ವೀಕ್ಷಿಸುವುದು ಹೆಚ್ಚು ಖುಷಿ ನೀಡುತ್ತದೆ.
5 / 5
ಡಾಲ್ಮಾ ಬೆಟ್ಟವು (dalma hills) ಜಾರ್ಖಂಡ್ ಮತ್ತು ಬಂಗಾಳದ ಗಡಿಯಲ್ಲಿದೆ. 50 ಕ್ಕಿಂತ ಹೆಚ್ಚು ದಟ್ಟವಾದ ಕಾಡು ಇಲ್ಲಿ ಇದೆ. ಇಲ್ಲಿರುವ ಹಚ್ಚ ಹಸಿರಿನ ಸೌಂದರ್ಯವನ್ನು ನೀವು ಖಂಡಿತವಾಗಿಯೂ ನೋಡಲೇಬೇಕು. ಡಾಲ್ಮಾ ಬೆಟ್ಟ, ಡಾಲ್ಮಾ ವನ್ಯಜೀವಿ ಅಭಯಾರಣ್ಯ ಮತ್ತು ಡಾಲ್ಮಾ ಸರೋವರದಂತಹ ಅತ್ಯುತ್ತಮ ಸ್ಥಳಗಳನ್ನು ನೀವು ಇಲ್ಲಿ ಕಾಣಬಹುದು.
Published On - 1:07 pm, Fri, 10 December 21