- Kannada News Photo gallery Tumakuru old woman Sharadamma Dies who gave cucumber to rahul gandhi during bharat jodo yatra
ಭಾರತ್ ಜೋಡೊ ಯಾತ್ರೆಯಲ್ಲಿ ನಡೆದು ದಣಿದಿದ್ದ ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿದ್ದ ಅಜ್ಜಿ ನಿಧನ
ಭಾರತ್ ಜೋಡೋ ಯಾತ್ರೆ (Bharat Jodo Yatra) ವೇಳೆ ದಣಿದಿದ್ದ ರಾಹುಲ್ ಗಾಂಧಿಗೆ (Rahul Gandhi) ಸೌತೆಕಾಯಿ (Cucumber) ನೀಡಿ ದಣಿವಾರಿಸಿದ್ದ ತುಮಕೂರಿನ ಅಜ್ಜಿ ನಿಧನರಾಗಿದ್ದಾರೆ. ಚಿಕ್ಕನಾಯಕನಹಳ್ಳಿ ಪಟ್ಟಣದ ಮೂಲಕ ಹಾದುಹೋಗುವಾಗ ಶಾರದಮ್ಮ ಎಂಬ ವೃದ್ದೆ ರಾಹುಲ್ ಗಾಂದಿಗೆ ಸೌತೆಕಾಯಿ ನೀಡಿ ಗಮನ ಸೆಳೆದಿದ್ದರು. ಇನ್ನು ಶಾರದಮ್ಮ ನಿಧನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
Updated on: Nov 21, 2023 | 2:19 PM

ಭಾರತ್ ಜೋಡೊ ಯಾತ್ರೆ ವೇಳೆ ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿದ್ದ ತುಮಕೂರು ಜಿಲ್ಲೆಯ ವೃದ್ದೆ ಶಾರದಮ್ಮ ನಿಧನರಾಗಿದ್ದಾರೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದ ಮೂಲಕ ಭಾರತ್ ಜೋಡೊ ಯಾತ್ರೆ ಹಾದುಹೋಗುವಾಗ ಶಾರದಮ್ಮ ಎಂಬ ವೃದ್ದೆ ರಾಹುಲ್ ಗಾಂದಿಗೆ ಸೌತೆಕಾಯಿ ನೀಡಿ ಗಮನ ಸೆಳೆದಿದ್ದರು..

ಳೆದ 2022 ರ ಅಕ್ಟೋಬರ್ 9 ರಂದು ಭಾರತ್ ಜೋಡೊ ಯಾತ್ರೆ ಕೈಗೊಂಡಿದ್ದಾಗ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಯಾತ್ರೆ ಸಾಗಿತ್ತು.ಈ ವೇಳೆ ಶಾರದಮ್ಮ ಎರಡು ಸೌತೆಕಾಯಿ ನೀಡಲು ನಿಂತಿದ್ದಾಗ ರಾಹುಲ್ ಗಮನಿಸಿ ಸೌತೆಕಾಯಿ ಪಡೆದುಕೊಂಡಿದ್ದರು

ಈ ವೇಳೆ ನಿನ್ನ ಅಜ್ಜಿ ಇಂದಿರಮ್ಮನಿಂದ ಸಿಕ್ಕ ಜಮೀನಿನಲ್ಲಿ ಬೆಳೆದ ಸೌತೆ ಕಾಯಿ ತಂದಿದ್ದೇನೆ ಅಂತಾ ಶಾರದಮ್ಮಹೇಳಿದ್ದರಂ ತೆ.

ಸೌತೆ ಕಾಯಿ ನೀಡಿದ ವೃದ್ದೆ ಸದ್ಯ ಅನಾರೋಗ್ಯದ ಕಾರಣ ನಿಧನರಾಗಿದ್ದು,ಓರ್ವ ಪುತ್ರನನ್ನ ಅಗಲಿದ್ದಾರೆ.ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಸಿಎಮ್ ಡಿಕೆ ಶಿವಕುಮಾರ್ ಟ್ವಿಟ್ ಮಾಡಿದ್ದಾರೆ.

ಭಾರತ್ ಜೋಡೋ ಯಾತ್ರೆ ವೇಳೆ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರಿಗೆ ಸವತೆಕಾಯಿ ನೀಡಿ ʼಇದು ನಿಮ್ಮ ಅಜ್ಜಿ ನೀಡಿದ ಜಮೀನಿನಲ್ಲಿ ಬೆಳೆದಿದ್ದುʼ ಎಂದು ಹೇಳಿ ಇಡೀ ದೇಶದ ಗಮನ ಸೆಳೆದಿದ್ದ ಚಿಕ್ಕನಾಯಕನಹಳ್ಳಿಯ ಶ್ರೀಮತಿ ಶಾರದಮ್ಮ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ಅಪಾರ ನೋವುಂಟಾಯಿತು. ಮೊನ್ನೆಯಷ್ಟೇ ನಡೆದ ಶ್ರೀಮತಿ ಇಂದಿರಾ ಗಾಂಧಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಶಾರದಮ್ಮ ಅವರನ್ನು ನೆನಪಿಸಿಕೊಂಡಿದ್ದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬ ವರ್ಗದವರ ನೋವಿನಲ್ಲಿ ನಾನೂ ಕೂಡ ಭಾಗಿ ಎಂದು ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.



