- Kannada News Photo gallery Turkey and Syria earthquake More than 1900 deaths Here are the earthquake photos
Turkey and Syria: ಭೂಕಂಪಕ್ಕೆ ಟರ್ಕಿ ಮತ್ತು ಸಿರಿಯಾ ತತ್ತರ; 1,900ಕ್ಕೂ ಹೆಚ್ಚು ಸಾವು, ಭೀಕರತೆಯ ಫೋಟೋಗಳು ಇಲ್ಲಿವೆ
ಟರ್ಕಿ ಮತ್ತು ನೆರೆಯ ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಮೂರು ಪ್ರತ್ಯೇಕ ಭೂಕಂಪಗಳು ಸಾವಿರಾರು ಜನರನ್ನು ಬಲಿ ಪಡೆದುಕೊಂಡಿವೆ. ರಕ್ಷಣಾ ಕಾರ್ಯಗಳು ಭರದಿಂದ ಸಾಗಿವೆ.
Updated on: Feb 06, 2023 | 9:26 PM

ಮೂರು ಪ್ರಬಲ ಭೂಕಂಪನಗಳಿಗೆ ತುತ್ತಾದ ಟರ್ಕಿ ಮತ್ತು ಸಿರಿಯಾದಲ್ಲಿ ಸಾವಿನ ಸಂಖ್ಯೆ ಎರಡು ಸಾವರಿದ ಸಮೀಪ ತಲುಪಿದೆ. ಸೋಮವಾರದ ಆರಂಭದಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪನದಿಂದ ಟರ್ಕಿ ಮತ್ತು ನೆರೆಯ ಸಿರಿಯಾದಲ್ಲಿ ನೂರಾರು ಸಾವು-ನೋವುಗಳು ಸಂಭವಿಸಿದ್ದವು. ಫೋಟೋ: ದಿಯಾರ್‌ಬಕಿರ್‌ನಲ್ಲಿ ಕುಸಿದ ಕಟ್ಟಡದಿಂದ ಬಾಲಕಿಯ ರಕ್ಷಣೆ. (ಫೋಟೋ ಕ್ರೆಡಿಟ್: ರಾಯಿಟರ್ಸ್)

ಬಳಿಕ ಮತ್ತೆರಡು ಭೂಕಂಪಗಳು ಸಂಭಿವಿಸದ್ದು, ಒಟ್ಟಾರೆಯಾಗಿ ಎರಡು ದೇಶಗಳಲ್ಲಿ 1,900 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ವರದಿಯಾಗಿದೆ. ಆದರೆ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಭೂಕಂಪದ ನಂತರದ ಪರಿಣಾಮಗಳನ್ನು ತೋರಿಸುವ ಕೆಲವು ಚಿತ್ರಗಳು ಇಲ್ಲಿವೆ. ಫೋಟೋ: ಟರ್ಕಿಯ ಗಾಜಿಯಾಂಟೆಪ್‌ನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ನೆಲಸಮ (ಫೋಟೋ: ಗೆಟ್ಟಿ ಇಮೇಜಸ್)

7.8, 7.6 ಮತ್ತು 6.0 ತೀವ್ರತೆ ಮೂರು ಭೂಕಂಪಗಳು ಎರಡು ದೇಶಗಳಲ್ಲಿ ನಡೆದಿವೆ. ಮೊದಲ ಭೂಕಂಪದ ಕೇಂದ್ರಬಿಂದು ಸಿರಿಯಾ ಗಡಿಯಾದ ಗಾಜಿಯಾಂಟೆಪ್ ಪ್ರಾಂತ್ಯದ ನೂರ್ಡಗಿ ಬಳಿ ಇತ್ತು. ಎರಡನೇ ಭೂಕಂಪವು ಸಮೀಪದ ಕಹ್ರಮನ್ಮಾರಾಸ್ ಪ್ರಾಂತ್ಯದ ಎಕಿನೋಝು ಸಮೀಪದಲ್ಲಿದೆ ಹಾಗೂ ಮೂರನೇ ಭೂಕಂಪ ಅದೇ ಪ್ರಾಂತ್ಯದ ಗೋಕ್ಸನ್ ಬಳಿ ಇದೆ. ಫೋಟೋ: ಟರ್ಕಿಯ ಕಹ್ರಮನ್‌ಮರಸ್‌ನಲ್ಲಿ ಹಾನಿಗೊಂಡ ಅಪಾರ್ಟ್‌ಮೆಂಟ್ ಕಟ್ಟಡ. (ಫೋಟೋ: ಗೆಟ್ಟಿ ಇಮೇಜಸ್)

ಭಾರತ ಮತ್ತು ಇತರ ದೇಶಗಳು ನೆರವಿಗೆ ಧಾವಿಸುತ್ತಿವೆ. ಭಾರತವು ಟರ್ಕಿಯ ಜನರೊಂದಿಗೆ ಒಗ್ಗಟ್ಟಿನಲ್ಲಿ ನಿಂತಿದೆ ಮತ್ತು ಈ ದುರಂತವನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲ ನೆರವು ನೀಡಲು ಸಿದ್ಧವಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ರಕ್ಷಣಾ ತಂಡಗಳು, ವೈದ್ಯಕೀಯ ತಂಡಗಳು ಮತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಸರ್ಕಾರ ನಿರ್ಧರಿಸಿದೆ. ಫೋಟೋ:ಭೂಕಂಪದಲ್ಲಿ ಹಾನಿಗೊಂಡಿರುವ ಮಲತ್ಯಾದ ಐತಿಹಾಸಿಕ ಯೆನಿ ಮಸೀದಿ. (ಫೋಟೋ: ಗೆಟ್ಟಿ ಇಮೇಜಸ್)

ಮಾರಣಾಂತಿಕ ಭೂಕಂಪದ ನಂತರ ಫೆಬ್ರವರಿ 13 ರವರೆಗೆ ದೇಶದ 81 ಪ್ರಾಂತ್ಯಗಳಾದ್ಯಂತ ಶಾಲೆಗಳನ್ನು ಮುಚ್ಚಲಾಗುವುದು ಎಂದು ಟರ್ಕಿಯ ಶಿಕ್ಷಣ ಸಚಿವರು ಹೇಳಿದ್ದಾರೆ. ಎರಡು ವಾರಗಳ ರಜೆಗಾಗಿ ಶಾಲೆಗಳನ್ನು ಮುಚ್ಚಲಾಗಿತ್ತು ಮತ್ತು ಸೋಮವಾರ ತೆರೆಯಲು ನಿರ್ಧರಿಸಲಾಗಿತ್ತು. ಆದರೀಗ ಮತ್ತೆ ಶಾಲೆಗಳನ್ನು ಮಕ್ಕಳ ಹಿತದೃಷ್ಟಿಯಿಂದ ಮುಚ್ಚಲಾಗುತ್ತಿದೆ. ಫೋಟೋ: ಮಾಲತ್ಯದಲ್ಲಿ ಹಾನಿಗೊಂಡ ಪ್ರದೇಶ. (ಫೋಟೋ: ಗೆಟ್ಟಿ ಇಮೇಜಸ್)

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡಲು ದೇಶವು ಸುಮಾರು 75 ರಕ್ಷಣಾ ಕಾರ್ಯಕರ್ತರ ಗುಂಪನ್ನು ಟರ್ಕಿಗೆ ಕಳುಹಿಸುತ್ತಿದೆ ಎಂದು ಜಪಾನ್‌ನ ವಿದೇಶಾಂಗ ಸಚಿವಾಲಯ ಹೇಳಿದೆ. ಫೋಟೋ: ಟರ್ಕಿಯ ಅದಾನದಲ್ಲಿ ನಾಶವಾದ ಕಟ್ಟಡ ನೋಡುತ್ತಿರುವ ನಿವಾಸಿಗಳು. (ಫೋಟೋ: ಗೆಟ್ಟಿ ಇಮೇಜಸ್)

ಭೂಕಂಪಕ್ಕೆ ಟರ್ಕಿಯ ಮಲತ್ಯಾ ನಗರದಲ್ಲಿ ಹಾನಿಗೊಳಲಾದ ಕಟ್ಟಡ ಮತ್ತು ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸುತ್ತಿರುವುದು. (ಫೋಟೋ: ಗೆಟ್ಟಿ ಇಮೇಜಸ್)

ಬಂಡುಕೋರರ ಹಿಡಿತದಲ್ಲಿರುವ ಸಿರಿಯನ್ ಪ್ರಾಂತ್ಯದ ಇಡ್ಲಿಬ್‌ನಲ್ಲಿರುವ ಡಾನಾದಲ್ಲಿ ರಕ್ಷಣಾ ಕಾರ್ಯಕರ್ತರು ಬಾಲಕನನ್ನು ಅವಶೇಷಗಳಡಿಯಿಂದ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುತ್ತಿರುವುದು. (ಫೋಟೋ: ಗೆಟ್ಟಿ ಇಮೇಜಸ್)

ಟರ್ಕಿಯ ದಿಯಾರ್‌ಬಕಿರ್‌ನಲ್ಲಿರುವ ಕಟ್ಟಡವೊಂದು ಭೂಕಂಪದಿಂದ ತೀವ್ರವಾಗಿ ಹಾನಿಗೀಡಾಗಿದೆ. (ಫೋಟೋ: ಗೆಟ್ಟಿ ಇಮೇಜಸ್)

ವಾಯುವ್ಯ ಸಿರಿಯಾದ ಆಫ್ರಿನ್ ನಗರದ ಸಮೀಪವಿರುವ ಜಂಡಾರಿಸ್‌ನಲ್ಲಿ ಭೂಕಂಪದಿಂದ ಹಾನಿಗೊಳಗಾದ ಕಟ್ಟಡದಿಂದ ಗಾಯಗೊಂಡ ಬಾಲಕಿಯನ್ನು ರಕ್ಷಿಸಿದ ರಕ್ಷಣಾ ಕಾರ್ಯಕರ್ತರು. (ಫೋಟೋ: ಗೆಟ್ಟಿ ಇಮೇಜಸ್)

ಪ್ರಬಲ ಭೂಕಂಪಕ್ಕೆ ಹಾನಿಗೊಂಡಿರುವ ಪ್ರದೇಶದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿರುವುದು.

ಪ್ರಬಲ ಭೂಕಂಪಕ್ಕೆ ಹಾನಿಗೊಂಡಿರುವ ಪ್ರದೇಶದಲ್ಲಿ ಅವಶೇಷಗಳಡಿ ಸಿಲುಕಿದ್ದ ಬಾಲಕೋರ್ವನನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುತ್ತಿರುವ ರಕ್ಷಣಾ ಕಾರ್ಯಕರ್ತರು.

ಪ್ರಬಲ ಭೂಕಂಪಕ್ಕೆ ಹಾನಿಗೊಂಡಿರುವ ಪ್ರದೇಶದಲ್ಲಿ ಅವಶೇಷಗಳಡಿ ಸಿಲುಕಿದ್ದ ಸಣ್ಣ ಮಗುವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುತ್ತಿರುವ ರಕ್ಷಣಾ ಕಾರ್ಯಕರ್ತ.

ಪ್ರಬಲ ಭೂಕಂಪಕ್ಕೆ ಹಾನಿಗೊಂಡಿರುವ ಪ್ರದೇಶದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿರುವುದು.




