TVS Raider 125: ಕಡಿಮೆ ಬೆಲೆಯ ಅತ್ಯಾಕರ್ಷಕ ಟಿವಿಎಸ್​ ರೈಡರ್​ ಬಿಡುಗಡೆ

Edited By:

Updated on: Sep 16, 2021 | 6:42 PM

TVS Raider 125: ಈ ಬೈಕ್​ನ ಸಾಮರ್ಥ್ಯದ ಬಗ್ಗೆ ನೋಡುವುದಾದರೆ, ಟಿವಿಎಸ್ ರೈಡರ್ 124.8 ಸಿಸಿ ಸಿಂಗಲ್ ಸಿಲಿಂಡರ್, 3-ವಾಲ್ವ್ ಎಂಜಿನ್ ಅನ್ನು ಹೊಂದಿದೆ. ಇದು 7500 ಆರ್‌ಪಿಎಂನಲ್ಲಿ 11.2 ಬಿಎಚ್‌ಪಿ ಮತ್ತು 6000 ಆರ್‌ಪಿಎಂನಲ್ಲಿ 11.2 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ.

1 / 6
ಟಿವಿಎಸ್ ಮೋಟಾರ್ ಕಂಪನಿಯ ಬಹುನಿರೀಕ್ಷಿತ ರೈಡರ್-125 ಬೈಕ್ ಬಿಡುಗಡೆಯಾಗಿದೆ. 125 ಸಿಸಿ ವಿಭಾಗದಲ್ಲಿ ಬಿಡುಗಡೆಯಾಗಿರುವ ನೂತನ ಬೈಕ್​ ಭಾರತದಲ್ಲಿ ಮಾತ್ರವಲ್ಲಿ, ಸಾರ್ಕ್ ರಾಷ್ಟ್ರಗಳು ಮತ್ತು ಲ್ಯಾಟಿನ್ ಅಮೇರಿಕನ್ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿರುವುದು ವಿಶೇಷ.

ಟಿವಿಎಸ್ ಮೋಟಾರ್ ಕಂಪನಿಯ ಬಹುನಿರೀಕ್ಷಿತ ರೈಡರ್-125 ಬೈಕ್ ಬಿಡುಗಡೆಯಾಗಿದೆ. 125 ಸಿಸಿ ವಿಭಾಗದಲ್ಲಿ ಬಿಡುಗಡೆಯಾಗಿರುವ ನೂತನ ಬೈಕ್​ ಭಾರತದಲ್ಲಿ ಮಾತ್ರವಲ್ಲಿ, ಸಾರ್ಕ್ ರಾಷ್ಟ್ರಗಳು ಮತ್ತು ಲ್ಯಾಟಿನ್ ಅಮೇರಿಕನ್ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿರುವುದು ವಿಶೇಷ.

2 / 6

ಸ್ಪೋರ್ಟಿ ಲುಕ್​ನಲ್ಲಿ ಬಿಡುಗಡೆಯಾಗಿರುವ ನೂತನ ಬೈಕ್​ನ ಹೈಲೈಟ್​ಗಳಲ್ಲಿ ಅದರಲ್ಲಿ ನೀಡಲಾಗಿರುವ ಎಲ್‌ಇಡಿ ಹೆಡ್‌ಲ್ಯಾಂಪ್ ಎಂದರೆ ತಪ್ಪಾಗಲಾರದು. ಡಿಆರ್‌ಎಲ್‌ ವಿನ್ಯಾಸಗೊಂಡಿರುವ ಈ ಹೆಡ್​ಲ್ಯಾಂಪ್ ಬೈಕ್​ಗೆ ಲುಕ್ ಹೆಚ್ಚಿಸಿದೆ. ಇನ್ನು ಇಂಧನ ಟ್ಯಾಂಕ್ ಬದಿಯಲ್ಲಿ ಕವಚಗಳು ಮತ್ತು ಎಂಜಿನ್ ಗಾರ್ಡ್ ಅನ್ನು ಸಹ ನೀಡಲಾಗಿರುವುದು ಬೈಕ್​ ಲುಕ್​ ಅನ್ನು ಮತ್ತಷ್ಟು ಆಕರ್ಷವಾಗಿದೆ. ಹಾಗೆಯೇ ವಿಭಜಿತ ಆಸನಗಳನ್ನು ನೀಡಿರುವುದರಿಂದ ಪ್ರಯಾಣವನ್ನು ಆರಾಮದಾಯಕವಾಗಿಸಲಿದೆ.

3 / 6

ಟಿವಿಎಸ್ ರೈಡರ್ 125 ಸಂಪೂರ್ಣ ಡಿಜಿಟಲ್ ಕನ್ಸೋಲ್ನೊಂದಿಗೆ ಬಿಡುಗಡೆಯಾಗಿರುವುದು ಇನ್ನೊಂದು ವಿಶೇಷ. ಇದು ಮೂರು ಟ್ರಿಪ್ ಮೀಟರ್, ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ ಇಂಡಿಕೇಟರ್, ಗೇರ್-ಶಿಫ್ಟ್ ಇಂಡಿಕೇಟರ್ ಮತ್ತು ಸರಾಸರಿ ವೇಗ ರೆಕಾರ್ಡರ್ ಸೇರಿದಂತೆ ಹಲವು ಮಾಹಿತಿಯನ್ನು ನೀಡಲಿದೆ. ಹಾಗೆಯೇ ಸುರಕ್ಷತಾ ವೈಶಿಷ್ಟ್ಯವಾಗಿ ಸೈಡ್-ಸ್ಟ್ಯಾಂಡ್ ಕಟ್-ಆಫ್ ಸ್ವಿಚ್ ಅನ್ನು ಸಹ ಬೈಕ್​ನಲ್ಲಿ ನೀಡಲಾಗಿದೆ.

4 / 6

ಇನ್ನು ಈ ಬೈಕ್​ನ ಸಾಮರ್ಥ್ಯದ ಬಗ್ಗೆ ನೋಡುವುದಾದರೆ, ಟಿವಿಎಸ್ ರೈಡರ್ 124.8 ಸಿಸಿ ಸಿಂಗಲ್ ಸಿಲಿಂಡರ್, 3-ವಾಲ್ವ್ ಎಂಜಿನ್ ಅನ್ನು ಹೊಂದಿದೆ. ಇದು 7500 ಆರ್‌ಪಿಎಂನಲ್ಲಿ 11.2 ಬಿಎಚ್‌ಪಿ ಮತ್ತು 6000 ಆರ್‌ಪಿಎಂನಲ್ಲಿ 11.2 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. ಹಾಗೆಯೇ ಮೋಟಾರ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇನ್ನು

5 / 6

ಇದರಲ್ಲಿ ಎರಡು ರೈಡಿಂಗ್ ಮೋಡ್‌ ನೀಡಲಾಗಿದ್ದು, ಅದರಂತೆ ಇಕೋ ಮತ್ತು ಪವರ್ ರೈಡಿಂಗ್ ಮೋಡ್ ಇರಲಿದೆ. ಪವರ್​ ರೈಡಿಂಗ್​ ಮೋಡ್​ ಮೂಲಕ ಸುಮಾರು 10 ಪ್ರತಿಶತ ಹೆಚ್ಚಿನ ವೇಗದ ಶಕ್ತಿಯನ್ನು ಪಡೆಯಬಹುದು. ಬೈಕ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ನೀಡಲಾಗಿದೆ. 17 ಇಂಚಿನ ಅಲ್ಹೋವ್ ವೀಲ್​ಗಳು ಇದರಲ್ಲಿದ್ದು, ಜೊತೆಗೆ ಡಿಸ್ಕ್​ ಬ್ರೇಕ್​ಗಳನ್ನು ನೀಡಲಾಗಿರುವುದು ವಿಶೇಷ.

6 / 6

ರೈಡರ್ 125 ಹಳದಿ, ಕೆಂಪು ಮತ್ತು ಕಪ್ಪು ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರ ಬೆಲೆ 77,500 ರೂ. (ಎಕ್ಸ್ ಶೋರೂಂ)

Published On - 6:41 pm, Thu, 16 September 21

Loading...
Unable to load recommendations.
Follow Us