ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿರುವ ಆಸುಪಾಸಿನ ಸ್ಥಳಗಳನ್ನು ನೋಡಲು ನೀವೇನಾದ್ರು ಆ ಊರಿಗೆ ಭೇಟಿ ಕೊಟ್ಟರೆ ಅಲ್ಲಿರುವ ಭಟ್ರು ಹೋಟೆಲ್ ಗೆ ಹೋಗಿ ಅಲ್ಲಿನ ತಿಂಡಿ ತಿನಿಸುಗಳ ರುಚಿಯನ್ನು ಸವಿಯದೆ ಬರದೇ ಇದ್ದರೆ ಒಳ್ಳೆಯ ಖಾದ್ಯಗಳನ್ನು ಮಿಸ್ ಮಾಡಿಕೊಂಡಾಗುತ್ತದೆ.
ಉಡುಪಿ ಜಿಲ್ಲೆಯ ಹೆಬ್ರಿಯ ತಾಲೂಕಿನಲ್ಲಿರುವ ಈ ಭಟ್ರು ಹೋಟ್ಲು ಹೆಬ್ರಿಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಸರಿಸುಮಾರು 80 ವರ್ಷಗಳ ಹಳೆಯ ಹೋಟೆಲ್ ಇದಾಗಿದ್ದು, ಇವತ್ತಿಗೂ ಕಡಿಮೆ ಬೆಲೆಯಲ್ಲಿ ಅಷ್ಟೇ ರುಚಿಕರವಾದ ತಿಂಡಿ ತಿನಿಸು ಹಾಗೂ ಊಟವನ್ನು ಗ್ರಾಹರಿಗೆ ಪೂರೈಸುತ್ತ ಬರುತ್ತಿದ್ದಾರೆ.
ಭಟ್ರು ಹೋಟೆಲ್ ಎಂದು ಫೇಮಸ್ ಆಗಿರುವ ಇದನ್ನು ಮುಂಚೆ ಬಡ್ಕಿಲಾಯ ಹೋಟೆಲ್ ಎಂದು ಕರೆಯಲಾಗುತ್ತಿತ್ತು. ಹಳೆಯದಾದ ಹೋಟೆಲ್ ಇಲ್ಲಿ ಐಷಾರಾಮಿ ವ್ಯವಸ್ಥೆಯಿಲ್ಲದಿದ್ದವರು ಕುಳಿತುಕೊಂಡು ತಿನ್ನಲು ಆರಾಮದಾಯಕ ವ್ಯವಸ್ಥೆಯಿದೆ..ರುಚಿಯಲ್ಲಿಯಂತೂ ಗ್ರಾಹಕರಿಗೆ ಯಾವುದೇ ಮೋಸವಾಗುವುದಿಲ್ಲ.
ಇಲ್ಲಿ ಊಟಕ್ಕಷ್ಟೇ ಬಾಳೆಎಲೆಯಲ್ಲ. ರುಚಿಕರವಾದ ತಿಂಡಿಯನ್ನು ಸಾಂಬಾರು ಚಟ್ನಿಯೊಂದಿಗೆ ಬಾಳೆ ಎಲೆಯಲ್ಲಿಯೇ ಬಡಿಸಲಾಗುತ್ತದೆ. ಒಮ್ಮೆ ಇಲ್ಲಿನ ಊಟ ತಿಂಡಿ ತಿನಿಸುಗಳ ರುಚಿ ಸವಿದರೆ ಕೈ ರುಚಿಯನ್ನಂತೂ ಮರೆಯಲು ಸಾಧ್ಯವೇ ಇಲ್ಲ.
ಭಟ್ರು ಹೋಟೆಲಿನಲ್ಲಿ ಕೊಟ್ಟೆ ಕಡುಬು, ಅಂಬಡೆ, ಮಸಾಲೆ ಅವಲಕ್ಕಿ, ಮಂಗಳೂರಿನ ಬನ್ಸ್ , ಶ್ಯಾವಿಗೆ ಅಡ್ಡೆ ಹಾಗೂ ಹಾಲು, ವಡೆ ಇತ್ಯಾದಿ ರುಚಿಕರವಾದ ತಿಂಡಿಗಳು ಸಿಗುತ್ತದೆ. ತಿಂದವರಿಗೆ ಗೊತ್ತು ಕೈ ರುಚಿ. ಅಷ್ಟೇ ಅಲ್ಲದೇ ಹೋಳಿಗೆ ಭಟ್ರು ಅಂಗಡಿಯಲ್ಲಿ ಹೋಳಿಗೆ ಕೂಡ ಅಷ್ಟೇ ಫೇಮಸ್ ಆಗಿದ್ದು, ಹೋಳಿಗೆ ಸವಿಯುವುದರೊಂದಿಗೆ ಈ ಸಿಹಿ ತಿಂಡಿಯನ್ನು ಖರೀದಿ ಮಾಡಬಹುದು. ಪ್ರಸಿದ್ಧ ಭಟ್ರು ಹೋಟೆಲ್ ಹಾಗೂ ಇಲ್ಲಿನ ವಿವಿಧ ಖಾದ್ಯಗಳ ಫೋಟೋಗಳನ್ನು ಸುದ್ದಿ ಚಾವಡಿ ಹೆಸರಿನ ಪೇಜ್ ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.