- Kannada News Photo gallery Cricket photos IPL 2025: Floppy hats and sleeveless jerseys are banned in IPL
IPL 2025: ಐಪಿಎಲ್ನಲ್ಲಿ ಫ್ಲಾಪಿ ಕ್ಯಾಪ್ ಮತ್ತು ಸ್ಲೀವ್ಲೆಸ್ ಜೆರ್ಸಿ ಬ್ಯಾನ್
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಮಾರ್ಚ್ 22 ರಿಂದ ಶುರುವಾಗಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದೊಂದಿಗೆ ಐಪಿಎಲ್ 2025 ಕ್ಕೆ ಚಾಲನೆ ದೊರೆಯಲಿದೆ.
Updated on: Mar 06, 2025 | 2:08 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಆರಂಭಕ್ಕೂ ಮುನ್ನ ಬಿಸಿಸಿಐ ಹೊಸ ನಿಯಮಗಳನ್ನು ಪರಿಚಯಿಸಿದೆ. ಈ ನಿಯಮಗಳ ಪ್ರಕಾರ, ಇನ್ಮುಂದೆ ಆಟಗಾರರ ಕುಟುಂಬದ ಸದಸ್ಯರು ಅಥವಾ ಆಪ್ತರು ಡ್ರೆಸ್ಸಿಂಗ್ ರೂಮ್ಗೆ ಪ್ರವೇಶಿಸುವಂತಿಲ್ಲ. ಹಾಗೆಯೇ ಎಲ್ಲಾ ಆಟಗಾರರು ತಂಡದ ಬಸ್ನಲ್ಲೇ ಪ್ರಯಾಣಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಇನ್ನು ಪಂದ್ಯ ನಡೆಯುವಾಗ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳು ಬೌಂಡರಿ ಲೈನ್ ಬಳಿಯಿರುವ ಎಲ್ಇಡಿ ಬೋರ್ಡ್‌ಗಳು ಮುಂದೆ ಕುಳಿತುಕೊಳ್ಳಬಾರದು ಎಂದು ತಿಳಿಸಲಾಗಿದೆ. ಅಲ್ಲದೆ ಪ್ರತಿಯೊಬ್ಬರು ಡಗೌಟ್ನಲ್ಲಿರುವುದನ್ನು ಕಡ್ಡಾಯ ಮಾಡಲಾಗಿದೆ.

ಇದಲ್ಲದೆ ಆರೆಂಜ್ ಕ್ಯಾಪ್ ಹಾಗೂ ಪರ್ಪಲ್ ಕ್ಯಾಪ್ ಪಡೆಯುವ ಆಟಗಾರರು ಅದನ್ನು ಮೊದಲ ಎರಡು ಓವರ್ಗಳವರೆಗೆ ಧರಿಸುವುದು ಸಹ ಕಡ್ಡಾಯ. ಆ ಬಳಿಕ ಬೇಕಿದ್ದರೆ ಕ್ಯಾಪ್ ಬದಲಿಸಲು ಅವಕಾಶ ನೀಡಲಾಗಿದೆ. ಇದರ ಹೊರತಾಗಿ ಧರಿಸದೇ ಮೈದಾನಕ್ಕಿಳಿಯುವಂತಿಲ್ಲ.

ಹಾಗೆಯೇ ಪಂದ್ಯ ಮುಗಿದ ಬಳಿಕ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದ ವೇಳೆ ತೋಳಿಲ್ಲದ ಜೆರ್ಸಿ ಹಾಗೂ ಫ್ಲಾಪಿ ಹ್ಯಾಟ್ ಧರಿಸುವಂತಿಲ್ಲ ಎಂದು ತಿಳಿಸಲಾಗಿದೆ. ಈ ನಿಯಮವನ್ನು ಉಲ್ಲಂಘಿಸಿದರೆ ಮೊದಲ ಬಾರಿಗೆ ಎಚ್ಚರಿಕೆ ನೀಡಲಿದ್ದು, ಅದೇ ತಪ್ಪನ್ನು ಪುನರಾವರ್ತಿಸಿದರೆ ದಂಡ ವಿಧಿಸಲಾಗುವುದಾಗಿ ಬಿಸಿಸಿಐ ತಿಳಿಸಿದೆ.

ಒಟ್ಟಿನಲ್ಲಿ ಮಾರ್ಚ್ 22 ರಿಂದ ಶುರುವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ 18ನೇ ಆವೃತ್ತಿಗೂ ಮುನ್ನ ಬಿಸಿಸಿಐ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದು, ಈ ಮೂಲಕ ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಆಟಗಾರರಲ್ಲಿ ಶಿಸ್ತು ಹೆಚ್ಚಿಸಲು ಮುಂದಾಗಿದೆ.



















