Updated on:Mar 22, 2023 | 11:18 AM
ಯುಗಾದಿ ಹಬ್ಬದ ಈ ವಿಶೇಷ ದಿನದಂದು ನೀವು ನಿಮ್ಮ ಕುಟುಂಬದವರೊಂದಿಗೆ ಸುಂದರ ಸಮಯವನ್ನು ಕಳೆಯಿರಿ. ವಸಂತ ಕಾಲದ ಆಗಮನದ ಈ ಶುಭ ಸಮಯದಲ್ಲಿ ವಿಶೇಷ ರುಚಿಕರ ಆಹಾರವನ್ನು ಸವಿಯಿರಿ.
ಈ ಯುಗಾದಿ ಹಬ್ಬದ ಸಮಯದಲ್ಲಿ ನೀವು ಬೆಂಗಳೂರಿನಲ್ಲಿ ದಕ್ಷಿಣ ಭಾರತದ ವಿಶೇಷ ಆಹಾರಗಳನ್ನು ಸವಿಯಿರಿ. ನಾವು ನಿಮಗಾಗಿ ಬೆಂಗಳೂರಿನ ವಿಶೇಷ ಊಟದ ತಾಣಗಳ ಕುರಿತು ಮಾಹಿತಿ ನೀಡುತ್ತಿದ್ದೇವೆ.
ಹಳ್ಳಿಮನೆ: 3ನೇ ಕ್ರಾಸ್ ಸಂಪಿಗೆ ರಸ್ತೆ, ಮಲ್ಲೇಶ್ವರಂನಲ್ಲಿರುವ ಹಳ್ಳಿ ಮನೆ ಈ ಹಬ್ಬದ ಸಮಯದಲ್ಲಿ ರುಚಿಯಾದ ಆಹಾರಗಳನ್ನು ಸವಿಯಲು ಬಯಸಿದರೆ ಉತ್ತಮ ತಾಣವಾಗಿದೆ. ಹಳ್ಳಿಮನೆಯ ಯುಗಾದಿ ಹಬ್ಬದ ವಿಶೇಷ ಮೆನುವಿನಲ್ಲಿ ಕೋಕಂ ಜ್ಯೂಸ್, ಬೇವು ಬೆಲ್ಲ ಬರ್ಫಿ, ಶ್ಯಾವಿಗೆ ಸಬ್ಬಕ್ಕಿ ಪಾಯಸ, ಮಿಡಿ ಉಪ್ಪಿನಕಾಯಿ, ಕ್ಯಾರೆಟ್ ಜೊತೆಗೆ ಜೋಳದ ಕೋಸಂಬರಿ ,ಮಾವಿನಕಾಯಿ ಶಾವಿಗೆ ಚಿತ್ರಾನ್ನ ಮುಂತಾದ ಆಹಾರಗಳನ್ನು ಸವಿಯಬಹುದು.
ಚಾಲುಕ್ಯ ಸಾಮ್ರಾಟ್ ಕೆಫೆಯು ಈ ಹಬ್ಬದ ಸಮಯದಲ್ಲಿ ವಿಶೇಷ ಮೆನುವನ್ನು ಹೊಂದಿರುತ್ತದೆ. ಬೆಂಗಳೂರಿನ ಅಶೋಕ್ ನಗರದಲ್ಲಿರುವ ಈ ಕೆಫೆಯಲ್ಲಿ ಬೇವು ಬೆಲ್ಲ, ತೊಂಡೆಕಾಯಿ ಕಾಜು ಪಲ್ಯ, ಪುಳಿಯೋಗರೆ, ಕುರ್ಮ, ತೊವ್ವೆ, ಹಸಿ ಮಾವಿನ ತಂಬುಳಿ, ಉಡುಪಿ ಕೆಂಪು ರಸಂ, ಬದನೆ ಸಾಂಬಾರು, ತುಪ್ಪ ಮತ್ತು ಶಾವಿಗೆ ಸಬ್ಬಕ್ಕಿ ಪಾಯಸದೊಂದಿಗೆ ಬೇಳೆ ಹೋಳಿಗೆ ಮುಂತಾದವುಗಳನ್ನು ಸವಿಯಬಹುದಾಗಿದೆ.
ಊಟಾ: ವೈಟ್ಫೀಲ್ಡ್ನ 5B ರಸ್ತೆಯಲ್ಲಿರುವ ಈ ಊಟಾ ರೆಸ್ಟೋರೆಂಟ್ನಲ್ಲಿ ಹಬ್ಬದ ಸಮಯದ ವಿಶೇಷ ಆಹಾರಗಳನ್ನು ಸವಿಯಬಹುದು. ಬೇವು ಬೆಲ್ಲ, ಮಾವಿನಕಾಯಿ ಉಪ್ಪಿನಕಾಯಿ, ಶುಂಠಿ ಬೆಲ್ಲ ಚಟ್ನಿ, ಕಡ್ಲೆಕಾಯಿ ಕೋಸಂಬರಿ, ಅಲ್ಸಂಡೆ ಕಾಳು ವಡೆ ಮುಂತಾದ ಆಹಾರಗಳನ್ನು ನೀವಿಲ್ಲಿ ಸವಿಯಬಹುದಾಗಿದೆ.
ಲಾಂಗ್ ಬೋಟ್ ಬ್ರೂಯಿಂಗ್ ಕಂ: ಬೆಂಗಳೂರಿನ ಮಾರತಹಳ್ಳಿಯ ಎಂಎಸ್ಆರ್ ಲೇಔಟ್ನ ಇಲ್ಲಿನ ನೋಟವೇ ನಿಮ್ಮನ್ನು ಬೆರಗುಗೊಳಿಸುತ್ತದೆ. ಪುಳಿಯೋಗರೆ, ಸಕ್ಕರೆ ಹೋಳಿಗೆ,ಕೋಸಂಬರಿ ಮುಂತಾದ ಹಬ್ಬದ ವಿಶೇಷ ಆಹಾರಗಳನ್ನು ನೀವಿಲ್ಲಿ ಸವಿಯಬಹುದು.
ಬೆಂಗಳೂರು ಬ್ರಾಸ್ಸೆರಿ(ಹ್ಯಾಟ್ ಸೆಂಟ್ರಿಕ್ ಎಂಜಿ ರೋಡ್) ಈ ಹಬ್ಬದ ಸಮಯದಲ್ಲಿ ಯುಗಾದಿ ಪಚಡಿ, ಮಾವಿನಕಾಯಿ ಚಟ್ನಿ, ಕಡ್ಲೆಬೇಳೆ ಸೌತೆಕಾಯಿ ಕೋಸಂಬರಿ, ಶೇಂಗಾ ಹೋಳಿಗೆ ,ಮಾವಿನಕಾಯಿ ಚಿತ್ರಾನ್ನ ಮತ್ತು ಹೆಸರು ಬೇಳೆ ಪಾಯಸ ಮುಂತಾದ ಆಹಾರಗಳನ್ನು ನೀವಿಲ್ಲಿ ಸವಿಯಬಹುದು.
Published On - 11:18 am, Wed, 22 March 23