ಹಾಟ್ ಅವತಾರ ತಾಳುವಲ್ಲಿ ನಟಿ ಉರ್ಫಿ ಜಾವೇದ್ ಅವರಿಗೆ ಯಾರೂ ಸರಿಸಾಟಿ ಇಲ್ಲ. ದಿನದಿನವೂ ಅವರ ಮಾದಕತೆ ಹೆಚ್ಚುತ್ತಲೇ ಇದೆ. ಅದಕ್ಕೆ ಈ ಫೋಟೋಗಳೇ ಸಾಕ್ಷಿ.
ಬಟ್ಟೆಯಲ್ಲಿ ಎಲ್ಲ ಬಗೆಯ ಪ್ರಯೋಗಗಳನ್ನೂ ಅವರು ಮಾಡಿದ್ದಾರೆ. ಈಗ ಹೊಸ ವೇಷದಲ್ಲಿ ಉರ್ಫಿ ಫೋಟೋಶೂಟ್ ಮಾಡಿದ್ದಾರೆ. ಆ ಮೂಲಕ ಅವರು ಎಲ್ಲರ ಕಣ್ಣು ಕುಕ್ಕುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗಿವೆ. ಜನರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಟ್ರೋಲ್ಗಳಿಗಂತೂ ಲೆಕ್ಕವೇ ಇಲ್ಲದಂತಾಗಿದೆ.
ಸಿಲ್ವರ್ ಪೇಪರ್ ಮೂಲಕ ಉರ್ಫಿ ಜಾವೇದ್ ಅವರು ಮಾನ ಮುಚ್ಚಿಕೊಂಡಿದ್ದಾರೆ. ‘ಇದು ಅತಿಯಾಯ್ತು’ ಎಂದು ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. ಅದಕ್ಕೆಲ್ಲ ಉರ್ಫಿ ತಲೆ ಕೆಡಿಸಿಕೊಂಡಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಉರ್ಫಿ ಜಾವೇದ್ ಸಕ್ರಿಯವಾಗಿದ್ದಾರೆ. ಪ್ರತಿ ದಿನ ಅವರು ಹೊಸ ಹೊಸ ಫೋಟೋಗಳನ್ನು ಹಂಚಿಕೊಂಡು ಅಚ್ಚರಿ ಮೂಡಿಸುತ್ತಿದ್ದಾರೆ. ಫೋಟೋಶೂಟ್ ಮಾಡಿಸುವುದೇ ಅವರಿಗೆ ಕಾಯಕ ಆಗಿದೆ.