
ನಟಿ ಉರ್ಫಿ ಜಾವೇದ್ ಅವರು ಇತ್ತೀಚೆಗೆ ಬಿಟ್ಟೂ ಬಿಡದೆ ಸುದ್ದಿ ಆಗುತ್ತಿದ್ದಾರೆ. ಅವರ ಚಿತ್ರ ವಿಚಿತ್ರ ಉಡುಗೆ ಎಲ್ಲ ಕಡೆಗಳಲ್ಲಿ ಸದ್ದು ಮಾಡುತ್ತಿದೆ.

ಈಗ ಉರ್ಫಿ ಅವರು ವಿಚಿತ್ರ ಉಡುಗೆ ತೊಟ್ಟು ಬಂದಿದ್ದಾರೆ. ಇದನ್ನು ನೋಡಿದ ಅವರ ಅಭಿಮಾನಿಗಳೇ ಕಂಗಾಲಾಗಿದ್ದಾರೆ.

ಎದೆ ಭಾಗಕ್ಕೆ ಉರ್ಫಿ ಅವರು ಟೊಪ್ಪಿ ಮಾದರಿಯ ಡ್ರೆಸ್ ಹಾಕಿದ್ದಾರೆ. ಇದನ್ನು ನೋಡಿದ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಉರ್ಫಿ ಅವರು ಕಿರುತೆರೆ ಮೂಲಕ ಜನಪ್ರಿಯತೆ ಪಡೆದರು. ಆ ಬಳಿಕ ಹಿಂದಿ ಬಿಗ್ ಬಾಸ್ ಒಟಿಟಿಗೆ ಕಾಲಿಟ್ಟು ಖ್ಯಾತಿ ಹೆಚ್ಚಿಸಿಕೊಂಡರು.

ಅಲ್ಲಿಂದ ಇಲ್ಲಿಯವರೆಗೆ ಉರ್ಫಿ ಕೇವಲ ಉಡುಗೆ ಮೂಲಕವೇ ಸುದ್ದಿ ಆಗುತ್ತಿದ್ದಾರೆ. ಹೊಸ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡುವ ಯಾವ ಆಲೋಚನೆಯೂ ಅವರಲ್ಲಿ ಇದ್ದಂತಿಲ್ಲ.