Kannada News » Photo gallery » Vijaypur: The background of the construction of the tallest Shivlinga idol in the country, Trikoti Shivpanchakshari Mahamantra program planning, here is a glimpse of it
ವಿಜಯಪುರ: ದೇಶದಲ್ಲೇ ಅತೀ ಎತ್ತರದ ಶಿವಲಿಂಗ ಮೂರ್ತಿ ನಿರ್ಮಾಣ ಹಿನ್ನಲೆ, ತ್ರಿಕೋಟಿ ಶಿವಪಂಚಾಕ್ಷರಿ ಮಹಾಮಂತ್ರ ಕಾರ್ಯಕ್ರಮ ಆಯೋಜನೆ, ಅದರ ಝಲಕ್ ಇಲ್ಲಿದೆ ನೋಡಿ
ದೇಶದಲ್ಲೇ ಅತೀ ಎತ್ತರದ ಶಿವಲಿಂಗ ಮೂರ್ತಿ ವಿಜಯಪುರ ಜಿಲ್ಲೆಯಲ್ಲಿ ತಲೆ ಎತ್ತಲಿದ್ದು, ಇದರ ಅಂಗವಾಗಿ ಇಂದು ತ್ರಿಕೋಟಿ ಶಿವಪಂಚಾಕ್ಷರಿ ಮಹಾಮಂತ್ರ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ವಿವಿಧ ಮಠಾಧೀಶರು, ರಾಜಕೀಯ ಮುಖಂಡರು ಸಾಕ್ಷಿಯಾಗಿದ್ದರು.
Jan 28, 2023 | 5:46 PM
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಗ್ರಾಮದ ಹೊರ ಭಾಗದಲ್ಲಿರುವ ಶ್ರೀ ರೇವಣಸಿದ್ದಶ್ವರ ದೇವಸ್ಥಾನದ ಆವರಣದಲ್ಲಿಂದು(ಜ.26) ಭಕ್ತ ಸಾಗರ ಜಮಾಯಿಸಿತ್ತು. ದೇವಸ್ಥಾನದ ಆವರಣದಲ್ಲಿ 136 ಅಡಿ ಎತ್ತರದ ಶಿವಲಿಂಗ ಸ್ಥಾಪನೆ ಮಾಡಲಾಗುತ್ತಿದ್ದು, ಇದರ ಅಂಗವಾಗಿ ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಹಾಗೂ ಇತರೆ ಸ್ವಾಮೀಜಿಗಳ ನೇತೃತ್ವದಲ್ಲಿ ತ್ರಿಕೋಟಿ ಶಿವಪಂಚಾಕ್ಷರಿ ಮಹಾಮಂತ್ರ ಜಪಯಜ್ಞ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
1 / 7
ಹೊರ್ತಿ ಹಾಗೂ ಹತ್ತಾರು ಗ್ರಾಮಗಳ ಸುಮಾರು 50 ಸಾವಿರರಕ್ಕೂ ಆಧಿಕ ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಎಲ್ಲರೂ ಸಾಮೂಹಿಕವಾಗಿ ತ್ರಿಕೋಟಿ ಶಿವಪಂಚಾಕ್ಷರಿ ಮಹಾಮಂತ್ರ ಜಪಿಸಿದರು.
2 / 7
ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಶಿರಶ್ಯಾಡದ ಸಂಸ್ಥಾನ ಹಿರೇಮಠದ ಅಭಿನವ ಮುರುಗೇಂದ್ರ ಶಿವಾಚಾರ್ಯರು, ಅಕ್ಕಿ ಆಲೂರಿನ ಚಂದ್ರಶೇಖರ ಶಿವಾಚಾರ್ಯರು, ಇಂಡಿ ಶಾಸಕರಾದ ಯಶವಂತ್ರಾಯಗೌಡ ಪಾಟೀಲ್ ಸೇರಿ ಇನ್ನು ಅನೇಕರು ಹಾಜರಿದ್ದರು.
3 / 7
ಕಳೆದ 15 ದಿನಗಳಿಂದ ನಡೆದುಕೊಂಡು ಬಂದಿದ್ದ ಧಾರ್ಮಿಕ ಕಾರ್ಯಕ್ರಮದ ಕೊನೆಯ ದಿನವಾದ ಇಂದು(ಜ.26) ಆಯೋಜಿಸಿದ್ದ ತ್ರಿಕೋಟಿ ಶಿವಪಂಚಾಕ್ಷರಿ ಮಹಾಮಂತ್ರ ಜಪಯಜ್ಞ ಕಾರ್ಯಕ್ರಮದ ಬಳಿಕ ಶ್ರೀಶೈಲ ಪೀಠದ ಜಗದ್ಗುರುಗಳು ಮಾತನಾಡಿ ತ್ರಿಕೋಟಿ ಶಿವಪಂಚಾಕ್ಷರಿ ಮಹಾಮಂತ್ರ ಜಪಯಜ್ಞ ಪಠಣೆಯಿಂದ ಎಲ್ಲರಿಗೂ ಒಳಿತಾಗುತ್ತದೆ ಎಂದು ತಿಳಿಸಿದರು.
4 / 7
ಹೊರ್ತಿ ಗ್ರಾಮದ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ 136 ಅಡಿ ಎತ್ತರದ ಶಿವಲಿಂಗ ಸ್ಥಾಪನೆಗೆ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ತಮಿಳುನಾಡು ಮೂಲದ ಶಿಲ್ಪಿ ಶಿವಲಿಂಗ ಮೂರ್ತಿ ತಯಾರಿಕೆ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಇದರ ಅಂಗವಾಗಿಯೇ ಇಂದು ತ್ರಿಕೋಟಿ ಶಿವಪಂಚಾಕ್ಷರಿ ಮಹಾಮಂತ್ರ ಜಪಯಜ್ಞ ಪಠಣ ಮಾಡಲಾಯಿತು.
5 / 7
ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುನಸ್ಕಾರ ಹಾಗೂ ಯಜ್ಞಯಾಗಾದಿಗಳನ್ನು ಮಾಡಲಾಗಿತ್ತು. ಬಳಿಕ ನೆರೆದ 50 ಸಾವಿರಕ್ಕೂ ಆಧಿಕ ಭಕ್ತರು ತ್ರಿಕೋಟಿ ಶಿವಪಂಚಾಕ್ಷರಿ ಮಹಾಮಂತ್ರ ಜಪಯಜ್ಞ ಪಠಣ ಮಾಡಿದರು. ಶಿವಪಂಚಾಕ್ಷರಿ ಮಹಾಮಂತ್ರ ಪಠಣದಲ್ಲಿ ಭಾಗಿಯಾಗಿದ್ದಕ್ಕೆ ಭಕ್ತರು ಸಂತಸವನ್ನು ವ್ಯಕ್ತಪಡಿಸಿದರು.
6 / 7
ಒಟ್ಟಾರೆ ಸತತ 15 ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಇಂದು(ಜ.26) ಸಮಾರೋಪ ಸಮಾರಂಭದೊಂದಿಗೆ 136 ಅಡಿ ಶಿವಲಿಂಗ ಸ್ಥಾಪನೆಗೆ ಚಾಲನೆ ನೀಡಿದಂತಾಗಿದೆ. ಶಿರಶ್ಯಾಡದ ಸಂಸ್ಥಾನ ಹಿರೇಮಠದ ಅಭಿನವ ಮುರುಗೇಂದ್ರ ಶಿವಾಚಾರ್ಯರು ಇಡೀ ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡು ದೇಶದ ಅತೀ ಎತ್ತರದ ಬೃಹತ್ ಶಿವಲಿಂಗ ಸ್ಥಾಪನೆ ಮಾಡುವ ಮೂಲಕ ಈ ಭಾಗದಲ್ಲಿ ಧರ್ಮ ಧ್ಯಾನ ಪಸರಿಸುವಂತೆ ಮಾಡುತ್ತಿದ್ದಾರೆ.