Green School in Medahalli: ಬೇಸಿಗೆ ಆರಂಭವಾದರೆ ಸಾಕು ಆ ತಾಲೂಕಿನಲ್ಲಿ ಬಿಸಿಲಿನ ತಾಪಮಾನ 40 ಡಿಗ್ರಿ ದಾಟ್ಟುತ್ತದೆ. ಆ ಸಂದರ್ಭದಲ್ಲಿ ಮಕ್ಕಳನ್ನ ಬಿಸಿಲಿನಿಂದ ರಕ್ಷಿಸುವ ಉದ್ದೇಶದಿಂದ ಆ ಶಾಲೆಯೊಂದರ ಆವರಣ ಹಸಿರುಮಯವಾಗುವಂತೆ ಮಾಡಲಾಗಿದೆ. ತಂಪಾದ ವಾತಾವಣದಲ್ಲಿ ಮಕ್ಕಳಿಗೆ ಭೋದನೆ ಮಾಡುತ್ತಿದ್ದು ಮಕ್ಕಳು ಖುಷಿಯಿಂದ ಶಾಲೆಗೆ ಬರುತ್ತಿದ್ದಾರೆ.
Jan 28, 2023 | 4:31 PM
ಈ ಶಾಲೆಯ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ, ಹಸಿರು ಶಾಲೆ ಪ್ರಶಸ್ತಿ ಕೂಡಾ ಸಿಕ್ಕಿದೆ. ಒಂದು ಕಡೆಗೆ ಹಸಿರಿನ ವಾತಾವರಣ, ಇನ್ನೊಂದು ಕಡೆಗೆ ನಲಿಕಲಿ ಮೂಲಕ ಮಕ್ಕಳಿಗೆ ಭೋದನೆಯಿಂದಾಗಿ ಮಕ್ಕಳು ಶಿಕ್ಷಣದ ಕಡೆಗೆ ಹೆಚ್ಚಿನ ಒಲವನ್ನ ಹೊಂದುತ್ತಿದ್ದಾರೆ.
1 / 20
ಖಾಸಗಿ ಶಾಲೆಯ ಕಡೆಗೆ ಮಕ್ಕಳು ಮುಖ ಮಾಡದಂತಾ ವಾತಾವರಣವನ್ನ ಶಾಲೆಯ ಶಿಕ್ಷಕರು ಗ್ರಾಮಸ್ಥರು ಮಾಡುತ್ತಿದ್ದು ಇದು ಖುಷಿಯ ವಿಚಾರವಾಗಿದೆ. ಇದೆ ರೀತಿ ಎಲ್ಲಾ ಶಾಲೆಯಲ್ಲಿಯೂ ಇಂತಹ ವಾತಾವರಣ ಕಲ್ಪಿಸಲಾಗುದೆಂದು ಹೇಳುತ್ತಿದ್ದಾರೆ. (ವರದಿ: ಸುರೇಶ್ ನಾಯಕ್, ಟಿವಿ 9, ಬೀದರ್)
2 / 20
ಶಾಲೆಯಲ್ಲಿ ಪ್ರಸಕ್ತ 110 ಮಕ್ಕಳು ಓದುತ್ತಿದ್ದು, ಶೇ. 100 ಹಾಜರಿ ಇದೆ. ಇಲ್ಲಿ ಗಿಡ, ಮರಗಳನ್ನು ಮಕ್ಕಳಂತೆ ಆರೈಕೆ ಮಾಡಲಾಗುತ್ತಿದ್ದು, ಆ ಗಿಡಗಳ ಬುಡದಲ್ಲೇ ಮಕ್ಕಳು ಓದಿಕೊಳ್ಳುವುದು, ಬಿಸಿಯೂಟ ಸವಿಯುತ್ತಾರೆ.
3 / 20
ಬಿಸಿಲಿನ ಝಳ ಜಾಸ್ತಿಯಾದರೆ ಮಕ್ಕಳನ್ನ ಶಾಲೆಯ ಆವರಣದಲ್ಲಿರುವ ಗಿಡಗಳ ಕೆಳಗೆ ಕುಳಿಸಿ ಪಾಠ ಮಾಡಿಸಲಾಗುತ್ತಿದೆ. ಇದರಿಂದ ಮಕ್ಕಳು ಕೂಡಾ ಆಸಕ್ತಿಯಿಂದ ಪಾಠ ಕಲಿಯುತ್ತಿದ್ದು, ನಮ್ಮ ಶಾಲೆಯ ಆವರಣ ಹಸಿರಿನಿಂದ ಕಂಗೊಳಿಸುತ್ತಿದ್ದು ನಮ್ಮಗೆ ಶಾಲೆಗೆ ಬರಲು ತುಂಬಾ ಖುಷಿಯಾಗುತ್ತದೆ ಎಂದು ಇಲ್ಲಿನ ಮಕ್ಕಳು ತಮ್ಮ ಶಾಲೆಯ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ.
4 / 20
ತಂಪಾದ ವಾತಾವಣದಲ್ಲಿ ಮಕ್ಕಳಿಗೆ ಭೋದನೆ ಮಾಡುತ್ತಿದ್ದು ಮಕ್ಕಳು ಖುಷಿಯಿಂದ ಶಾಲೆಗೆ ಬರುತ್ತಿದ್ದಾರೆ. ಹಸಿರು ವಾತಾವರಣ, ಉತ್ತಮ ಶಿಕ್ಷಕರ ಪ್ರಶಸ್ತಿ, ಹಸಿರು ಶಾಲೆಯೆಂಬ ಕೀರ್ತಿಗೆ ಪಾತ್ರವಾಗಿದೆ.
5 / 20
ಬೀದರ್ ಜಿಲ್ಲೆ ಔರಾದ್ ತಾಲೂಕಿನಲ್ಲಿಯೇ ಮೆಡಪಳ್ಳಿ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಿರು ಉದ್ಯಾನ... 40 ಡಿಗ್ರಿ ತಾಪಮಾನ ಸಂದರ್ಭದಲ್ಲಿ ಮಕ್ಕಳನ್ನ ಬಿಸಿಲಿನಿಂದ ರಕ್ಷಿಸುವ ಉದ್ದೇಶದಿಂದ ಆ ಶಾಲೆಯೊಂದರ ಆವರಣ ಹಸಿರುಮಯವಾಗುವಂತೆ ಮಾಡಲಾಗಿದೆ.
6 / 20
ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸಲು, ಅವರಿಗೆ ಪರಿಸರದ ಬಗ್ಗೆ ಕಾಳಜಿ, ಆಸಕ್ತಿ ಮೂಡುವಂತೆ ಮಾಡುವ ಉದ್ದೇಶದಿಂದ ಹಾಗೂ ಶಾಲೆಯ ಆವರಣವನ್ನು ಉತ್ತಮ ಪರಿಸರವನ್ನಾಗಿ ಮಾಡಲು ಶಾಲೆಯ ಶಿಕ್ಷ ಕ ವರ್ಗದವರು ವಿದ್ಯಾರ್ಥಿಗಳೊಡಗೂಡಿ ಸಸಿ ನೆಟ್ಟು ಗಿಡ ಬೆಳಿಸಿದ್ದಾರೆ.
7 / 20
ಶಾಲಾ ಆವರಣವನ್ನು ಕಂಡರೆ ಸರಕಾರಿ ಶಾಲೆಗಳು ಹೀಗೂ ಇರಬಹುದಾ...? ಎಂದು ಅಚ್ಚರಿ ಮೂಡಿಸುವಂತಿದೆ.
8 / 20
ಇನ್ನು ಈ ಶಾಲೆಯ ಮುಖ್ಯ ಗುರುಗಳಾದ ನರಸಿಂಹ ಮೂರ್ತಿ ಅವರು ತಮ್ಮದೇ ಖರ್ಚಿನಲ್ಲಿ ಶಾಲೆಯಲ್ಲಿ ಮಕ್ಕಳ ಆಟದ ಗ್ರೌಂಡ್ ನಿರ್ಮಿಸಿದ್ದಾರೆ.
9 / 20
ಉತ್ತಮ ಪರಿಸರ ಪ್ರಜ್ಞೆ ಮೂಡಿಸಲು ನೂರಾರು ವಿವಿಧ ತರಹದ ಸಸಿಗಳನ್ನು ನೆಡಲಾಗಿದೆ. ಶಾಲೆಯ ವಾತಾವರಣ ಮಕ್ಕಳಿಗೂ ಸಾಕಷ್ಟು ಖುಷಿಯನ್ನ ಕೊಡುತ್ತಿದೆ.
10 / 20
ಶಾಲೆ ವಾತಾವರಣ ಹಾಗೂ ಬೋಧನಾ ಮಾಧ್ಯಮ ಖಾಸಗಿ ಶಾಲೆಗಳನ್ನು ಮೀರಿಸುವಷ್ಟರ ಮೆಟ್ಟಿಗೆ ಈ ಶಾಲೆಯಲ್ಲಿ ಬೆಳೆದು ನಿಂತಿದೆ.
11 / 20
ಶಾಲೆಯ ಆವರಣದಲ್ಲಿ ವಿವಿಧ ಜಾತಿಯ ಔಷಧಿ ಸಸ್ಯಗಳು, ಬೇವು, ನೇರಳೆ, ಪಪ್ಪಾಯಿ, ಹೊಂಗೆಯ ಮರ ಸೇರಿದಂತೆ ಹತ್ತಾರು ಜಾತಿಯ ಗಿಡಗಳನ್ನ ನೆಡಲಾಗಿದೆ.
12 / 20
ಇನ್ನು ಮಕ್ಕಳ ಆಟವು ಹಸಿರು ಗಿಡದ ನೆರಳಿನಲ್ಲಿಯೇ ನಡೆಯುವುದರಿಂದ ಮಕ್ಕಳ ಉತ್ಸಾಹಕ್ಕೆ ಪ್ರೋತ್ಸಾಹ ಸಿಗುವಂತಿದೆ.
13 / 20
1. ಬೇಸಿಗೆ ಆರಂಭವಾದರೆ ಸಾಕು ಆ ತಾಲೂಕಿನಲ್ಲಿ ಬಿಸಿಲಿನ ತಾಪಮಾನ 40 ಡಿಗ್ರಿ ದಾಟುತ್ತದೆ.
14 / 20
ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಉತ್ತಮ ಪರಿಸರ ಪ್ರಜ್ಞೆ ಮೂಡಿಸಲು ನೂರಾರು ವಿವಿಧ ತರಹದ ಸಸಿಗಳನ್ನು ನೆಡಲಾಗಿದೆ.
15 / 20
ಮಕ್ಕಳಿಗೆ ಬಿಸಿಲಿನ ತಾಪ ಜಾಸ್ತಿಯಾಗದಂತೆ 100ಕ್ಕೂ ಹೆಚ್ಚು ಗಿಡಗಳನ್ನ ಬೆಳೆಸಿದ್ದು, ಅವುಗಳನ್ನ ಮಕ್ಕಳಂತೆ ಆರೈಕೆ ಮಾಡುತ್ತಿದ್ದಾರೆ.
16 / 20
ಇದರ ಜೊತೆಗೆ ಇಲ್ಲಿ ಹತ್ತು ಹಲವಾರು ಗಿಡಗಳನ್ನ ಬೆಳೆಸಲಾಗಿದ್ದು, ಇಲ್ಲಿನ ಗಿಡಗಳಿಗೆ ಮಕ್ಕಳು ಹಾಗೂ ಶಿಕ್ಷಕರು ಕಾಳಜಿಯಿಂದ ಮನೆಯ ಮಕ್ಕಳಂತೆ ಅವುಗಳನ್ನ ಬೆಳೆಸಲಾಗುತ್ತಿದೆ.
17 / 20
ಹಸಿರು ವಾತಾವರಣದಲ್ಲಿ ಅಕ್ಷರ ಕಲಿಕೆ. ಅಲ್ಲಿಯೇ ಊಟ ಪಾಠ. ಉತ್ತಮ ವಾತಾವರಣಕ್ಕಾಗಿ ಕಪ್ಪರಗಾಂವ ಶಾಲೆಗೆ ಸಂದಿವೆ ಹಲವು ಪ್ರಶಸ್ತಿಗಳು. ಬೀದರ್ ಜಿಲ್ಲೆ ಔರಾದ್ ತಾಲೂಕಿನಲ್ಲಿ ಮೆಡಪಳ್ಳಿ ಪ್ರಾಥಮಿಕ ಶಾಲೆ ಇಡೀ ತಾಲೂಕಿನಲ್ಲಿಯೇ ಹಸರುಮಯ ಶಾಲೆ ಎಂದು ಹೆಸರು ಪಡೆದುಕೊಂಡಿದೆ.
18 / 20
ಎತ್ತರದ ವಿಶಾಲ ಪ್ರದೇಶದಲ್ಲಿರುವ ಮೇಡಪಳ್ಳಿ ಶಾಲೆ ಹಚ್ಚ ಹಸಿರಿನ ಪರಿಸರ ಹೊತ್ತು ನಿಂತಿದೆ. ಶಾಲೆಯ ಒಳ ಹೋಗುತ್ತಲೇ ತೊಟದೊಳಗೆ ಹೋದಂತಹ ಅನುಭವವಾಗುತ್ತದೆ. ಶಾಲೆಯು ನಮ್ಮ ಮನೆ ಇದ್ದಂತೆ ಎಂಬ ಭಾವನೆಯಿಂದ ಇಲ್ಲಿನ ಶಿಕ್ಷಕರು ನೂರಾರು ಸಸಿಗಳನ್ನು ನೆಟ್ಟು ಪೋಷಿಸಿರುವುದರಿಂದ ಸರಕಾರಿ ಶಾಲೆಯೊಂದು ಮಾದರಿ ಎನ್ನುವಂತಾಗಿದೆ.
19 / 20
Green School in Medahalli Government Primary School in Aurad taluk in Bidar