
ನಟಿ ಊರ್ವಶಿ ರೌಟೇಲಾ ಅವರು ಸದ್ಯ ಸಖತ್ ಸುದ್ದಿಯಲ್ಲಿದ್ದಾರೆ. ಕ್ರಿಕೆಟರ್ ರಿಷಭ್ ಪಂತ್ ಅವರ ಬಗ್ಗೆ ಪದೇಪದೇ ಕಮೆಂಟ್ ಮಾಡಿ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಫೆ.25ರಂದು ಊರ್ವಶಿ ಬರ್ತ್ಡೇ ಆಚರಿಸಿಕೊಂಡರು. ಈಗ ಇದು ಕೂಡ ಸುದ್ದಿ ಆಗಿದೆ.

ಈ ಬಾರಿ ಊರ್ವಶಿ ಅವರು ಪ್ಯಾರಿಸ್ಗೆ ತೆರಳಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರಿಗೆ ಈಗ 29 ವರ್ಷ ವಯಸ್ಸು. ಈ ವಿಶೇಷ ದಿನವನ್ನು ಅವರು ಸಖತ್ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಈ ವಿಚಾರ ಫ್ಯಾನ್ಸ್ಗೆ ಅಚ್ಚರಿ ಮೂಡಿಸಿದೆ.

ಬರ್ತ್ಡೇ ದಿನ ಐಫೆಲ್ ಟವರ್ ಎದುರು ನಿಂತು ಪೋಸ್ ನೀಡಿದ್ದಾರೆ. ಇಷ್ಟಕ್ಕೆ ಮುಗಿದಿಲ್ಲ. ದೊಡ್ಡದಾದ ಕೇಕ್ನ ಕತ್ತರಿಸಿದ್ದಾರೆ. ಈ ಕೇಕ್ ಮಧ್ಯದಲ್ಲಿ ಚಿನ್ನ ಹಾಗೂ ಡೈಮಂಡ್ಗಳ ಕಪ್ ಇಡಲಾಗಿದೆ. ಇದಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗಿದೆ.

ಇನ್ನು, ಊರ್ವಶಿ ಅವರು ಒಂದು ರಾಶಿ ಗುಲಾಬಿ ಹೂಗಳಿರುವ ಫೋಟೋನ ಪೋಸ್ಟ್ ಮಾಡಿದ್ದಾರೆ. ಈ ಗುಲಾಬಿ ಹೂವುಗಳಿಗೆ ವಜ್ರ ಅಳವಡಿಸಲಾಗಿತ್ತು. ಅನೇಕರು ನಟಿಯನ್ನು ಟೀಕಿಸಿದ್ದಾರೆ.

ಈ ಎಲ್ಲಾ ಸಂಭ್ರಮಕ್ಕೆ 93 ಲಕ್ಷ ರೂಪಾಯಿ ಖರ್ಚಾಗಿದೆ. ಈ ಬಗ್ಗೆ ಅನೇಕರು ಟೀಕೆ ಮಾಡಿದ್ದಾರೆ. ಊರ್ವಶಿ ಅವರು ಶೋಆಫ್ ಕೊಡುತ್ತಿದ್ದಾರೆ ಎನ್ನುವ ಆರೋಪ ಎದುರಾಗಿದೆ.

ಊರ್ವಶಿ ಅವರು ಬಾಲಿವುಡ್ನಲ್ಲಿ ನಟಿಸಿ ಫೇಮಸ್ ಆದವರು. ಅವರ ಕೈಯಲ್ಲಿ ಹಲವು ಆಫರ್ಗಳಿವೆ. ರಿಷಭ್ ಪಂತ್ ವಿಚಾರದಲ್ಲಿ ಸುದ್ದಿ ಆದ ನಂತರದಲ್ಲಿ ಊರ್ವಶಿ ಅವರು ಹೆಚ್ಚು ಫೇಮಸ್ ಆದರು.
Published On - 2:25 pm, Wed, 1 March 23