- Kannada News Photo gallery Cricket photos IND vs AUS Most wickets by a visiting bowler in Asia Nathan Lyon break Shane Warne record
IND vs AUS: ಜಡೇಜಾ ವಿಕೆಟ್ ಉರುಳಿಸಿ ಶೇನ್ ವಾರ್ನ್ ದಾಖಲೆ ಮುರಿದ ನಾಥನ್ ಲಿಯಾನ್
IND vs AUS: 3ನೇ ಟೆಸ್ಟ್‌ನಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ ವಿಕೆಟ್ ಉರುಳಿಸಿದ ನಾಥನ್ ಲಿಯಾನ್, ಏಷ್ಯಾದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿದೇಶಿ ಬೌಲರ್ ಎನಿಸಿಕೊಂಡರು.
Updated on:Mar 01, 2023 | 3:41 PM

ಇಂದೋರ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾವನ್ನು ಅಲ್ಪ ರನ್ಗಳಿಗೆ ಕಟ್ಟಿಹಾಕಿರುವ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ. ಇತ್ತ ತನ್ನ ಸ್ಪಿನ್ ದಾಳಿಯ ಮೂಲಕ ಭಾರತದ ಬ್ಯಾಟಿಂಗ್ ವಿಭಾಗವನ್ನು ಪೆವಿಲಿಯನ್ಗಟ್ಟಿದ ಸ್ಪಿನ್ನರ್ ನಾಥನ್ ಲಿಯಾನ್, 3ನೇ ಟೆಸ್ಟ್‌ನಲ್ಲಿ ವಿಶಿಷ್ಟ ದಾಖಲೆ ಮಾಡಿದ್ದಾರೆ.

3ನೇ ಟೆಸ್ಟ್‌ನಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ ವಿಕೆಟ್ ಉರುಳಿಸಿದ ನಾಥನ್ ಲಿಯಾನ್, ಏಷ್ಯಾದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿದೇಶಿ ಬೌಲರ್ ಎನಿಸಿಕೊಂಡರು.

ಅಲ್ಲದೆ ಏಷ್ಯಾದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಶೇನ್ ವಾರ್ನ್ ಅವರ ದಾಖಲೆಯನ್ನು ನಾಥನ್ ಲಿಯಾನ್ ಮುರಿದಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ 127 ವಿಕೆಟ್‌ಗಳೊಂದಿಗೆ ವಾರ್ನ್ ಹೆಸರಿನಲ್ಲಿತ್ತು.

ಇದಕ್ಕೂ ಮೊದಲು ನಾಥನ್ ಲಿಯಾನ್ ಅವರು ಪೂಜಾರ ಅವರ ವಿಕೆಟ್ ಕಬಳಿಸುವ ಮೂಲಕ, ಅತಿ ಹೆಚ್ಚು ಬಾರಿ ಪೂಜಾರ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್ ಅವರನ್ನು ಸರಿಗಟ್ಟಿದ್ದಾರೆ. ಈ ಇಬ್ಬರೂ ಬೌಲರ್‌ಗಳು ಇದುವರೆಗೆ ಪೂಜಾರ ಅವರನ್ನು ತಲಾ 12 ಬಾರಿ ಔಟ್ ಮಾಡಿದ್ದಾರೆ.

ಬಾರ್ಡರ್ ಗವಾಸ್ಕರ್ ಟ್ರೋಫಿಯ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ನಾಥನ್ ಲಿಯಾನ್ ಒಬ್ಬರು. ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪೈಕಿ ಅಗ್ರ 5 ಬೌಲರ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ.
Published On - 3:41 pm, Wed, 1 March 23




