AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾ, ರಷ್ಯಾದ ಸ್ಟೀಲ್ತ್ ಫೈಟರ್​ಗಳಿಗೆ ಹೋಲಿಸಿದರೆ ಅಮೆರಿಕದ ಎಫ್-35 ಹೇಗಿದೆ? ಇಲ್ಲಿದೆ ಹೋಲಿಕೆ

ವಾಷಿಂಗ್ಟನ್, ಫೆಬ್ರುವರಿ 14: ಅಮೆರಿಕ ತನ್ನ ಬಳಿ ಇರುವ ಅತ್ಯಂತ ಶಕ್ತಿಶಾಲಿ ಫೈಟರ್ ಜೆಟ್ ಎಫ್-35 ಅನ್ನು ಭಾರತಕ್ಕೆ ಕೊಡಲು ಮುಂದಾಗಿದೆ. ರಷ್ಯಾ ತನ್ನ ಎಸ್​ಯು-57 ಅನ್ನು ಕೊಡಲು ಸಿದ್ಧ ಇದೆ. ಪಾಕಿಸ್ತಾನಕ್ಕೆ ಚೀನಾ ಜೆ-20 ಕೊಡಬಹುದು. ಈ ಮೂರು ಯುದ್ಧವಿಮಾನಗಳಲ್ಲಿ ಯಾವುದು ಹೆಚ್ಚು ಶಕ್ತಿಶಾಲಿ? ಇಲ್ಲಿದೆ ಡೀಟೇಲ್ಸ್....

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 14, 2025 | 2:09 PM

Share
ನರೇಂದ್ರ ಮೋದಿ ಅವರ ಅಮೆರಿಕ ಭೇಟಿ ಸಂದರ್ಭ ನಡೆದ ಮಾತುಕತೆಗಳಲ್ಲಿ ಯಶಸ್ವಿಯಾದ ಸಂಗತಿಗಳಲ್ಲಿ ಎಫ್-35 ಯುದ್ಧವಿಮಾನಗಳ ಮಾರಾಟ ವಿಚಾರವೂ ಒಂದು. ಭಾರತಕ್ಕೆ ಎಫ್-35 ಫೈಟರ್​ಗಳನ್ನು ಕೊಡಲು ಒಪ್ಪಿರುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಭಾರತಕ್ಕೆ ಎಫ್-22 ಕೊಡಲು ಇಚ್ಛಿಸಿದ್ದ ಅಮೆರಿಕ ಈಗ ಮನಸ್ಸು ಬದಲಾಯಿಸಿದಂತಿದೆ. ಇದು ಮೋದಿ ಮಾತುಕತೆಯ ಫಲಶ್ರುತಿಯಾ? ಮೋದಿ ಪ್ರಬಲ ಸಂಧಾನಕಾರ ಎಂದು ಟ್ರಂಪ್ ಹೇಳಿದ್ದು ಇದೇ ಕಾರಣಕ್ಕಿರಬಹುದು.

1 / 6
ಎಫ್-35 ಯುದ್ಧವಿಮಾನದಲ್ಲಿ ಅಂಥ ಶಕ್ತಿ ಏನಿದೆ? ಲಾಕ್​ಹೀಡ್ ಮಾರ್ಟಿನ್ ಎನ್ನುವ ಅಮೆರಿಕನ್ ಖಾಸಗಿ ಸಂಸ್ಥೆಯು ಎಫ್-35 ಫೈಟರ್ ಜೆಟ್​ಗಳನ್ನು ತಯಾರಿಸುತ್ತದೆ. ವಿಶ್ವದ ಕೆಲವೇ ಐದನೇ ತಲೆಮಾರಿನ ಫೈಟರ್ ಜೆಟ್ ವಿಮಾನಗಳಲ್ಲಿ ಇದೂ ಒಂದು. ಈ ಶ್ರೇಣಿಯಲ್ಲಿ ಫೈಟರ್​ಗಳನ್ನು ಅಭಿವೃದ್ಧಿಪಡಿಸಿರುವುದು ಚೀನಾ ಮತ್ತು ರಷ್ಯಾ ಮಾತ್ರವೇ. ಚೀನಾ ಬಳಿ ಚೆಂಗ್ಡು ಜೆ-20 ಫೈಟರ್ ಜೆಟ್ ಇದೆ. ರಷ್ಯಾ ಬಳಿ ಸುಖೋಯ್ ಎಸ್​​ಯು-57 ಇದೆ.

2 / 6
ಪಾಕಿಸ್ತಾನ ಚೀನಾದಿಂದ ಜೆ20 ಫೈಟರ್ ಜೆಟ್ ಪಡೆಯಲು ಆಸಕ್ತಿ ಹೊಂದಿದೆ. ಚೀನಾ ಈ ಜೆಟ್​ಗಳನ್ನು ಪಾಕಿಸ್ತಾನಕ್ಕೆ ಕೊಡಲೂ ಬಹುದು. ಇನ್ನೊಂದೆಡೆ, ರಷ್ಯಾ ತನ್ನ ಎಸ್​ಯು57 ಅನ್ನು ಭಾರತಕ್ಕೆ ಕೊಡಲು ಸಿದ್ಧವಿದೆ. ಈಗ ಅಮೆರಿಕ ಕೂಡ ತನ್ನ ಎಫ್-35 ಜೆಟ್​ಗಳನ್ನು ನೀಡಲು ಮುಂದೆ ಬಂದಿದೆ. ಹೀಗಾಗಿ, ಭಾರತಕ್ಕೆ ಎಸ್​ಯು-57 ಮತ್ತು ಎಫ್-35 ಎಂಬ ಎರಡು ಆಯ್ಕೆಗಳಿವೆ. ಹೀಗಾಗಿ, ಭಾರತಕ್ಕೆ ಯಾವುದು ಸೂಕ್ತ, ಈ ಎರಡರಲ್ಲಿ ಯಾವುದು ಬಲಿಷ್ಠ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ.

3 / 6
ಕೆಲ ಅಂತಾರಾಷ್ಟ್ರೀಯ ಡಿಫೆನ್ಸ್ ತಜ್ಞರ ಪ್ರಕಾರ ಜೆ-20 ಮತ್ತು ಎಸ್​ಯು-57 ಫೈಟರ್ ಜೆಟ್​ಗಳು ಫಿಫ್ತ್ ಜನರೇಶನ್ ಯುದ್ಧವಿಮಾನಗಳಾಗಿದ್ದರೂ ಮತ್ತು ಉತ್ತಮ ಡಿಸೈನ್ ಹೊಂದಿದ್ದರೂ ತಾಂತ್ರಿಕವಾಗಿ ಎಫ್-35ನಷ್ಟು ಪಕ್ವವಾಗಿಲ್ಲ. ನೈಜ ಯುದ್ಧ ಸಂದರ್ಭದಲ್ಲಿ ಎಸ್​ಯು-57 ಹಿನ್ನಡೆ ಹೊಂದಿರುವುದನ್ನು ಹಲವರು ಪತ್ತೆ ಮಾಡಿದ್ದಾರೆ. ಚೀನಾದ ಜೆ-20 ಫೈಟರ್​ಗಳು ನೈಜ ಯುದ್ಧ ಸಂದರ್ಭದಲ್ಲಿ ಪ್ರಯೋಗ ಮಾಡಿಲ್ಲ.

4 / 6
ಅಮೆರಿಕದ ಎಫ್-35 ಅನ್ನು ಫ್ಲೈಯಿಂಗ್ ಕಂಪ್ಯೂಟರ್ ಎಂದೂ ಕರೆಯಲಾಗುತ್ತದೆ. ನ್ಯೂಕ್ಲಿಯಾರ್ ಬಾಂಬ್ ಹೊತ್ತೊಯ್ಯಬಲ್ಲ ವಿಶ್ವದ ಏಕೈಕ ಫಿಫ್ತ್ ಜನರೇಶನ್ ಫೈಟರ್ ಜೆಟ್ ಎಂದು ಅದನ್ನು ಪರಿಗಣಿಸಲಾಗಿದೆ. ಅನೇಕ ನೈಜ ಯುದ್ಧಗಳಲ್ಲಿ ಎಫ್-35 ಬಳಕೆ ಆಗಿದೆ. ಇಸ್ರೇಲ್ ದೇಶ ಇದನ್ನು ಅನೇಕ ಬಾರಿ ಯಶಸ್ವಿಯಾಗಿ ಉಪಯೋಗಿಸಿದೆ. ಕಂಪ್ಯೂಟರ್ ನಿಯಂತ್ರಣ ಇರುವುದರಿಂದ ಬಹಳ ಕರಾರುವಾಕ್ ದಾಳಿ ಸಂಯೋಜನೆಗೆ ಇದು ಹೇಳಿ ಮಾಡಿಸಿದ್ದಾಗಿದೆ.

5 / 6
ಭಾರತದಲ್ಲೂ ಐದನೇ ತಲೆಮಾರಿನ ಯುದ್ಧವಿಮಾನ ಅಭಿವೃದ್ಧಿಪಡಿಸುವ ಯೋಜನೆ ಇದೆ. ಆದರೆ, ಅದಿನ್ನೂ ನೆರವೇರಲು ಎರಡು ದಶಕಗಳೇ ಆಗಬಹುದು. ಪಾಕಿಸ್ತಾನಕ್ಕೆ ಚೀನಾದಿಂದ ಜೆ20 ಜೆಟ್​ಗಳು ಯಾವಾಗ ಬೇಕಾದರೂ ಸಿಗಬಹುದು. ಹೀಗಾಗಿ, ಭಾರತದ ವಾಯುಪಡೆ ಬತ್ತಳಿಕೆಗೆ ಎಫ್-35 ಫೈಟರ್​ಗಳ ಅವಶ್ಯಕತೆ ಬಹಳ ಇದೆ.

6 / 6
ನಿಮ್ಮನ್ನೂ ದೇವೇಗೌಡ್ರು ಉಚ್ಛಾಟಿಸಿದ್ರು: ಸಿದ್ದರಾಮಯ್ಯಗೆ ಯತ್ನಾಳ್ ಚಮಕ್

ಸುಜಾತ ಭಟ್ ಗೆ ಮಹೇಶ್ ತಿಮರೋಡಿ ಕೆಲದಿನ ಆಶ್ರಯ ನೀಡಿದ್ದರು: ಜಯಂತ್

ರಸ್ತೆ ಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಮೇಲೆ ಹತ್ತಿ ಎಳೆದುಕೊಂಡು ಹೋದ ಕಾರು!

ಕೆಎಸ್​ಸಿಎಗೆ ಪರವಾನಗಿ ಇರದಿದ್ದರೆ ಡಿಸಿಎಂ ಹೋಗಿದ್ದು ಯಾಕೆ? ಅಶೋಕ

ನಿಯಮಗಳನ್ನು ಉಲ್ಲಂಘಿಸಿ ತಿಮರೋಡಿಯವರನ್ನು ಬಂಧಿಸಲಾಗಿದೆ: ಮಟ್ಟಣ್ಣನವರ್

ವಿವಾದದಲ್ಲಿ ರಮೋಲಾ; ಸಿನಿಮಾದಲ್ಲಿ ನಟಿಸಿ ಪ್ರಮೋಷನ್​ಗೆ ಬರಲ್ಲ ಎಂದ ನಟಿ?

ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರವನ್ನು ಅಬೆಟರ್ ಅನ್ನೋದು ಸರಿಯಲ್ಲ: ಸಿಎಂ

ರಸ್ತೆ ತಡೆಗೋಡೆ ಮೇಲೆ ಕುಳಿತು ಕ್ಯಾಮೆರಾಗೆ ಪೋಸ್​​ ಕೊಟ್ಟ ಚಿರತೆ

ವಿರೇಂದ್ರ ಪಪ್ಪಿ ಜೊತೆ ಕುಸುಮ ಸಹೋದರನ ವ್ಯಾವಹಾರಿಕ ಸಂಬಂಧ ಹಿನ್ನೆಲೆ ದಾಳಿ

ಬಿಹಾರದಲ್ಲಿ ತೆಗೆದುಕೊಂಡ ಯಾವುದೇ ನಿರ್ಧಾರ ವ್ಯರ್ಥವಾಗುವುದಿಲ್ಲ: ಮೋದಿ