Kannada News Photo gallery Uttara Kannada Kurmagad Narasimha Deva Jatre - once a year the fair is held in the middle of the Arabian sea
ಸಮುದ್ರದ ನಡುಗಡ್ಡೆಯಲ್ಲಿ ಜನವರಿಯಲ್ಲಿ ನಡೆಯುತ್ತೆ ಜಾತ್ರೆ! ದೇವರಿಗೆ ಬಾಳೆಗೊನೆ ನೀಡಿದ್ರೆ ಈಡೇರುತ್ತೆ ಹರಕೆ!
ಜನವರಿ ತಿಂಗಳಲ್ಲಿ ಹುಣ್ಣಿಮೆಯ ದಿನ ನೀರಿನ ನಡುಗಡ್ಡೆಯಲ್ಲಿ ಜಾತ್ರೆ ನಡೆಯುತ್ತದೆ. ಇಲ್ಲಿನ ಕೂರ್ಮಗಡ ನರಸಿಂಹ ದೇವರಿಗೆ ಬಾಳೆಗೊನೆ ನೀಡಿ ವರವ ಕೇಳಿದ್ರೆ 1 ವರ್ಷದಲ್ಲಿ ದೇವರು ಅದನ್ನ ಈಡೇರುಸುತ್ತಾನೆ ಎಂಬ ನಂಬಿಕೆ ಇದೆ. ಇದು ಮೀನುಗಾರರ ಆರಾಧ್ಯ ದೇವರ ಜಾತ್ರೆ ಆಗಿರುವುದರಿಂದ ಭಕ್ತರಿಗೆ ಮೀನುಗಾರರು ಜಾತ್ರೆಯ ದಿನ ಉಚಿತವಾಗಿ ಬೊಟ್ ನಲ್ಲಿ ತಂದು ಬಿಡುತ್ತಾರೆ!
1 / 11
ಜನವರಿ ತಿಂಗಳಲ್ಲಿ ಹುಣ್ಣಿಮೆಯ ದಿನ ನೀರಿನ ನಡುಗಡ್ಡೆಯಲ್ಲಿ ಜಾತ್ರೆ ನಡೆಯುತ್ತದೆ. ಇಲ್ಲಿನ ಕೂರ್ಮಗಡ ನರಸಿಂಹ ದೇವರಿಗೆ ಬಾಳೆಗೊನೆ ನೀಡಿ ವರವ ಕೇಳಿದ್ರೆ 1 ವರ್ಷದಲ್ಲಿ ದೇವರು ಅದನ್ನ ಈಡೇರುಸುತ್ತಾನೆ ಎಂಬ ನಂಬಿಕೆ ಇದೆ. ಇದು ಮೀನುಗಾರರ ಆರಾಧ್ಯ ದೇವರ ಜಾತ್ರೆ ಆಗಿರುವುದರಿಂದ ಭಕ್ತರಿಗೆ ಮೀನುಗಾರರು ಜಾತ್ರೆಯ ದಿನ ಉಚಿತವಾಗಿ ಬೊಟ್ ನಲ್ಲಿ ತಂದು ಬಿಡುತ್ತಾರೆ!
2 / 11
ವರ್ಷಕೊಮ್ಮೆ ಸಮುದ್ರದ ನಡುಗಡ್ಡೆಯಲ್ಲಿ ನಡೆಯುತ್ತೆ ಜಾತ್ರೆ! ದೇವರಿಗೆ ಬಾಳೆ ಗೊನೆ ನೀಡಿದ್ರೆ ಈಡೇರುತ್ತೆ ಹರಕೆ!
3 / 11
ಉತ್ತರ ಕನ್ನಡ ನೈಸರ್ಗಿಕ , ಅಧ್ಯಾತ್ಮಿಕ ಮತ್ತು ಭೌಗೊಳಿಕವಾಗಿ ಅನಂತ ವಿಶಿಷ್ಟತೆಗಳನ್ನ ಹೊಂದಿರುವ ಜಿಲ್ಲೆ. ಇಲ್ಲಿ ಆಚರಿಸುವ ಹಬ್ಬ ಹಾಗೂ ಜಾತ್ರೆ ಕೂಡ ವಿಭಿನ್ನವಾಗಿರುತ್ತವೆ. ಕಾರವಾರದಿಂದ ಸುಮಾರು 10 ಕಿಮೀ ಅಂತರದಲ್ಲಿರುವ ನಡುಗಡ್ಡೆಯಲ್ಲಿ ನಿನ್ನೆ ಗುರವಾರ ಉಗ್ರ ನರಸಿಂಹನ ಜಾತ್ರೆ ನಡೆಯಿತು. ಶತಮಾನಗಳಿಂದ ನಡೆದುಕೊಂಡು ಬಂದಿರುವ ಈ ಜಾತ್ರೆಗೆ ಅದ್ಭುತ ಇತಿಹಾಸ ಇದೆ.
4 / 11
ಅರಬ್ಬಿ ಸಮುದ್ರದಲ್ಲಿ ನಡುಗಡಗಡೆಯಲ್ಲಿ ದ್ವೀಪದಂತೆ ಇದೆ ಈ ದೇಗುಲ. ಈ ಕುರಿತ ವರದಿ ಇಲ್ಲಿದೆ ನೋಡಿ.
5 / 11
ಕೈಯಲ್ಲಿ ಬಾಳೆ ಗೊನೆ ಹಿಡಿದು ಬೋಟ್ ಹತ್ತುತ್ತಿರುವ ಜನ. ಇನ್ನೊಂದೆಡೆ ದೇವರ ದರ್ಶನಕ್ಕೆ ಕ್ಯೂ ನಲ್ಲಿ ನಿಂತಿರುವ ಭಕ್ತರು. ನಡುಗಡ್ಡೆಯಲ್ಲಿ ಎಲ್ಲಿ ನೋಡಿದಲ್ಲಿ ಜನವೊ ಜನ... ಈ ದೃಶ್ಯ ಕಂಡು ಬಂದಿದ್ದು ಕಾರವಾರದ ಕೂರ್ಮಗಡ ನರಸಿಂಹ ದೇವರ ಜಾತ್ರೆಯಲ್ಲಿ.
6 / 11
ಹೌದು ಉತ್ತರ ಕನ್ನಡ ಜಿಲ್ಲೆ ಕಾರವಾರದ ಬೈಥಕಲ್ ಬಂದರದಿಂದ 10 ಕಿಮೀ ಅಂತರದಲ್ಲಿರುವ ಕೂರ್ಮಗಡ ನಡುಗಡ್ಡೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಜಾತ್ರೆ ಆಚರಿಸಲಾಯಿತು.
7 / 11
ಶತಮಾನಗಳ ಹಿಂದೆ ಮೀನುಗಾರರಿಗೆ ಸಂಕಟ ಉಂಟಾದಾಗ ಇಲ್ಲಿ ನರಸಿಂಹ ದೇವರ ಮೂರ್ತಿಯನ್ನು ತಂದು ಜಾತ್ರೆ ಮಾಡಿದ ಬಳಿಕ ಅವರ ಸಂಕಟ ದೂರವಾಗಿ, ಅಂದಿನಿಂದ ಮೀನುಗಾರರ ಏಳಿಗೆ ಆಯಿತು.
8 / 11
ಹಾಗಾಗಿ ಪ್ರತಿ ವರ್ಷದ ಜನವರಿ ತಿಂಗಳಲ್ಲಿ ಬರುವ ಹುಣ್ಣಿಮೆಯಂದು ಕೂರ್ಮಗಡ ನಡುಗಡ್ಡೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡು ಜಾತ್ರೆ ನಡೆಯುತ್ತದೆ. ಇನ್ನು ಈ ದೇವರಿಗೆ ಬಾಳೆ ಗೊನೆಯನ್ನು ನೀಡಿ ತಮಗೆ ಬೇಕಾದ ಹರಕೆಯನ್ನ ದೇವರಿಗೆ ಕೇಳಿದ್ರೆ ಒಂದು ವರ್ಷದೊಳಗೆ ದೇವರು ಹರಕೆಯನ್ನ ಈಡೇರುಸುತ್ತಾನೆ ಎಂಬ ನಂಬಿಕೆ ಇದೆ.
9 / 11
ಹಾಗಾಗಿ ಇಲ್ಲಿ ಬರುವ ಹೆಚ್ಚಿನ ಭಕ್ತರು ಬಾಳೆ ಗೊನೆಯನ್ನ ತೆಗೆದುಕೊಂಡು ಬರುತ್ತಾರೆ. ಮೀನುಗಾರರ ಆರಾಧ್ಯ ದೇವರ ಜಾತ್ರೆ ಆಗಿರುವುದರಿಂದ ಈ ಜಾತ್ರೆಗೆ ಬರುವ ಭಕ್ತರಿಗೆ ಮೀನುಗಾರರು ತಮ್ಮ ಬೋಟ್ ನಲ್ಲಿ ಜಾತ್ರೆಯ ದಿನದಂದು ಉಚಿತವಾಗಿ ಬೊಟ್ ನಲ್ಲಿ ತಂದು ಬಿಡುತ್ತಾರೆ.
10 / 11
ಇನ್ನೂ ಆದ್ಯಾತ್ಮಕವಾಗಿ ಅನೇಕ ವಿಶೇಷತೆಗಳನ್ನು ಹೊಂದಿರುವ ಈ ನಡುಗಡ್ಡೆ, ಉತ್ತಮ ಪ್ರವಾಸಿ ತಾಣವೂ ಕೂಡ ಹೌದು. ಸಮುದ್ರದಲ್ಲಿ ಬೊಟ್ ನಿಂದ ಬಂದು ಬೆಟ್ಟ ಹತ್ತಿ ದೇವರ ದರ್ಶನ ಪಡೆಯುವಾಗ ಸಿಗುವ ಖುಷಿಗೆ ಪಾರವೆ ಇರಲ್ಲ. ಹಾಗಾಗಿ ಈ ಜಾತ್ರೆ ಕೇವಲ ಆಧ್ಯಾತ್ಮಕ, ಐತಿಹಾಸಿಕವಾಗಿ ಅಷ್ಟೆ ಅಲ್ಲದೆ ಒಳ್ಳೆಯ ಪ್ರೇಕ್ಷಣಿಕ ಸ್ಥಳವಾಗಿಯೂ ಇದು ಪ್ರಸಿದ್ದಿ ಪಡೆದಿದೆ.
11 / 11
ಉತ್ತರ ಕನ್ನಡ ಅಷ್ಟೆ ಅಲ್ಲದೆ ರಾಜ್ಯದ ಬೇರೆ ಬೇರೆ ಕಡೆಯ ವಿಶೇಷವಾಗಿ ಅಂಬಿಗರು ಹಾಗೂ ಮೀನುಗಾರರು ಇಲ್ಲಿ ಬರುತ್ತಾರೆ. ಒಟ್ಟಾರೆಯಾಗಿ ಅನೇಕ ವೈಶಿಷ್ಟತ್ಯೆಗಳನ್ನು ಹೊಂದಿರುವ ಈ ಜಾತ್ರೆ ವರ್ಷಕೊಮ್ಮೆ ಮಾತ್ರ ನಡೆಯುತ್ತೆ. ಈ ನಡುಗಡ್ಡೆಗೆ ಬೇರೆ ಸಮಯದಲ್ಲಿ ಬರುವುದು ಭಾರಿ ಕಷ್ಟ ಆಗಿರುವುದರಿಂದ, ಜಾತ್ರೆಯ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಎಂಜಾಯ್ ಮಾಡುತ್ತಾರೆ.