- Kannada News Photo gallery Shiva Rajkumar and Geetha Shiva Rajkumar celebrate Republic Day in Shakthidhama School
ಶಕ್ತಿಧಾಮದ ಮಕ್ಕಳ ಜೊತೆ ಶಿವಣ್ಣ ಗಣರಾಜ್ಯೋತ್ಸವ, ಉಪೇಂದ್ರ ವಿಶೇಷ ಅತಿಥಿ
Shvia Rajkumar-Geetha: ಶಿವರಾಜ್ ಕುಮಾರ್, ಗೀತಾ ಶಿವರಾಜ್ಕುಮಾರ್ ಅವರು ಶಕ್ತಿಧಾಮದಲ್ಲಿ ಗಣರಾಜ್ಯೋತ್ಸವ ಆಚರಿಸಿದ್ದು, ಉಪೇಂದ್ರ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು.
Updated on: Jan 26, 2024 | 11:18 AM

ಮೈಸೂರಿನ ಶಕ್ತಿಧಾಮದ ಮಕ್ಕಳೊಡನೆ ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಗಣರಾಜ್ಯೋತ್ಸವ ಆಚರಣೆ ಮಾಡಿದ್ದಾರೆ.

ಈ ಗಣರಾಜ್ಯೋತ್ಸವ ಆಚರಣೆಗೆ ಶಿವಣ್ಣ ಅವರ ಆತ್ಮೀಯ ಗೆಳೆಯ ಉಪೇಂದ್ರ ಅವರು ವಿಶೇಷ ಅತಿಥಿಯಾಗಿ ಆಗಮಿಸಿದ್ದಾರೆ.

ಉಪೇಂದ್ರ ಜೊತೆಗೆ ನಿರ್ಮಾಪಕರೂ ಆಗಿರುವ ಕೆಪಿ ಶ್ರೀಕಾಂತ್ ಸಹ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿಯಾಗಿದ್ದರು.

ಪೆರೇಡ್ ಮೂಲಕ ಶಿವಣ್ಣ ಹಾಗೂ ಉಪ್ಪಿಗೆ ಅದ್ದೂರಿ ಶಕ್ತಿಧಾಮದ ಮಕ್ಕಳು ಅದ್ಧೂರಿ ಸ್ವಾಗತ ಮಾಡದರು.

ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ಶಕ್ತಿಧಾಮದ ಶಿಕ್ಷಕರು, ಮುಖ್ಯಸ್ಥರು ಒಟ್ಟಿಗೆ ಧ್ವಜಾರೋಹಣ ಮಾಡಿ ಮಕ್ಕಳ ಜೊತೆ ಗಣರಾಜ್ಯೋತ್ಸವ ಆಚರಣೆ ಮಾಡಿದ್ದಾರೆ.

ಮಕ್ಕಳು ವಿವಿಧ ವೇಷ ಭೂಷಣಗಳನ್ನು ತೊಟ್ಟು ವೇದಿಕೆ ಮೇಲೆ ಆಶುಭಾಷಣಗಳನ್ನು ಮಾಡಿದ್ದಾರೆ. ಕೆಲವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಮಾಡಿದ್ದಾರೆ.

ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಶಕ್ತಿಧಾಮ ಶಾಲೆಯನ್ನು ವರ್ಷಗಳಿಂದಲೂ ನಡೆಸಿಕೊಂಡು ಬರುತ್ತಿದ್ದು, ಅಲ್ಲಿನ ಮಕ್ಕಳನ್ನು ಅತ್ಯಂತ ಪ್ರೀತಿ ಪೂರ್ವಕವಾಗಿ ನಡೆಸಿಕೊಳ್ಳುತ್ತಾರೆ.




