Padma Award 2024: 20 ವರ್ಷ, 1000 ಕ್ಕೂ ಹೆಚ್ಚು ಪಂದ್ಯ; ಕನ್ನಡಿಗ ರೋಹನ್ ಬೋಪಣ್ಣಗೆ ಪದ್ಮಶ್ರೀ ಗೌರವ..!

Padma Award 2024: ಪ್ರತಿ ವರ್ಷದಂತೆ ಈ ಬಾರಿಯೂ ಗಣರಾಜ್ಯೋತ್ಸವಕ್ಕೆ ಒಂದು ದಿನ ಮುಂಚಿತವಾಗಿ ಪದ್ಮ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಇದರಲ್ಲಿ 7 ಕ್ರೀಡಾ ಸಾಧಕರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

|

Updated on:Jan 26, 2024 | 3:29 PM

ಪ್ರತಿ ವರ್ಷದಂತೆ ಈ ಬಾರಿಯೂ ಗಣರಾಜ್ಯೋತ್ಸವಕ್ಕೆ ಒಂದು ದಿನ ಮುಂಚಿತವಾಗಿ ಪದ್ಮ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಇದರಲ್ಲಿ 7 ಕ್ರೀಡಾ ಸಾಧಕರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

1 / 10
ಜನಪ್ರಿಯತೆಯ ಪ್ರಕಾರ, ಇದರಲ್ಲಿ ಅತ್ಯಂತ ಪ್ರಸಿದ್ಧವಾದ ಹೆಸರು ರೋಹನ್ ಬೋಪಣ್ಣ ಅವರದು. 43ರ ಹರೆಯದ ಬೋಪಣ್ಣ ಅವರು ಟೆನಿಸ್ ಅಂಗಳದಲ್ಲಿ ಮಾಡಿರುವ ಸಾಧನೆಗಾಗಿ ಈ ಗೌರವವನ್ನು ನೀಡಲು ನಿರ್ಧರಿಸಲಾಗಿದ್ದು, ಬೋಪಣ್ಣ ಅವರಿಗೆ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ನೀಡಲು ಭಾರತ ಸರ್ಕಾರ ನಿರ್ಧರಿಸಿದೆ.

2 / 10
ಪುರುಷರ ಮಿಶ್ರ ಡಬಲ್ಸ್‌ನ ದಿಗ್ಗಜ ಬೋಪಣ್ಣ ಅವರಿಗೆ ಈ ಗೌರವ ಡಬಲ್ ಸಂತಸ ತಂದಿದೆ. ಎರಡು ದಿನಗಳ ಹಿಂದೆಯಷ್ಟೇ ಬೋಪಣ್ಣ ವರ್ಷದ ಮೊದಲ ಗ್ರ್ಯಾಂಡ್ ಸ್ಲಾಮ್ ಆಸ್ಟ್ರೇಲಿಯನ್ ಓಪನ್‌ನ ಪುರುಷರ ಡಬಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದರು.

3 / 10
ಬೋಪಣ್ಣ ತಮ್ಮ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಮೊದಲ ಬಾರಿಗೆ ಈ ಗ್ರ್ಯಾನ್‌ಸ್ಲಾಮ್‌ನ ಫೈನಲ್‌ಗೆ ತಲುಪಿದ್ದಾರೆ. ಫೈನಲ್ ತಲುಪುವುದರೊಂದಿಗೆ, ಬೋಪಣ್ಣ ತಮ್ಮ ವೃತ್ತಿಪರ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಡಬಲ್ಸ್ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದ್ದಾರೆ.

4 / 10
ಇದರೊಂದಿಗೆ ಎಟಿಪಿ ಶ್ರೇಯಾಂಕದ ಇತಿಹಾಸದಲ್ಲಿ ನಂಬರ್-1 ರ ್ಯಾಂಕ್ ತಲುಪಿದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಬೋಪ್ಪಣ್ಣ ಪಾತ್ರರಾದರು.

5 / 10
2003 ರಲ್ಲಿ ತಮ್ಮ ವೃತ್ತಿಪರ ಟೆನಿಸ್ ವೃತ್ತಿಜೀವನ ಆರಂಭಿಸಿದ ಬೋಪ್ಪಣ್ಣ  ಹೆಚ್ಚಿನ ಭಾರತೀಯ ಆಟಗಾರರಂತೆ ಸಿಂಗಲ್ಸ್‌ನಲ್ಲಿ ಯಶಸ್ವಿಯಾಗದ ನಂತರ ಡಬಲ್ಸ್​ನತ್ತ ಒಲವು ತೋರಿದರು. ಮಹೇಶ್ ಭೂಪತಿ ಮತ್ತು ಲಿಯಾಂಡರ್ ಪೇಸ್ ಅವರ ಯಶಸ್ಸಿನ ನಡುವೆ, ಬೋಪಣ್ಣ ಹೆಚ್ಚು ಚರ್ಚೆಗೆ ಬರಲಿಲ್ಲ. ಆದರೆ ಧೃತಿಗೆಡದ ಬೋಪ್ಪಣ್ಣ 40ನೇ ವಯಸ್ಸಿನಲ್ಲೂ ಅಸಮಾನ್ಯ ಪ್ರದರ್ಶನ ನೀಡುತ್ತಿದ್ದಾರೆ.

6 / 10
ಕಳೆದ 20 ವರ್ಷಗಳಲ್ಲಿ, ಬೋಪಣ್ಣ 1000 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಒಟ್ಟು 25 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದೀಗ ನಂಬರ್ 1 ರ ್ಯಾಂಕ್ ಜೊತೆಗೆ ದೇಶದಿಂದ ಅಪಾರ ಗೌರವವನ್ನೂ ಪಡೆದಿದ್ದಾರೆ.

7 / 10
ಇನ್ನು ಇದೇ ಶನಿವಾರದಂದು ಬೋಪ್ಪಣ್ಣ ಆಸ್ಟ್ರೇಲಿಯನ್ ಓಪನ್‌ನ ಫೈನಲ್ ಕಣಕ್ಕಿಳಿಯಲ್ಲಿದ್ದಾರೆ. ಜನವರಿ 27ರ ಶನಿವಾರ ನಡೆಯಲಿರುವ ಈ ಪ್ರಶಸ್ತಿ ಪಂದ್ಯದಲ್ಲಿ ಗೆದ್ದರೆ ಪುರುಷರ ಡಬಲ್ಸ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.

8 / 10
ಬೋಪಣ್ಣ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ಪುರುಷರ ಡಬಲ್ಸ್‌ನಲ್ಲಿ ಒಂದೇ ಒಂದು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿಲ್ಲ. ಇಂತಹ ಸಂದರ್ಭದಲ್ಲಿ ಈ ಗೌರವದಿಂದ ಸ್ಪೂರ್ತಿ ಪಡೆದಿರುವ ಬೋಪಣ್ಣ ಈ ಕಾಯುವಿಕೆಯನ್ನೂ ಕೊನೆಗೊಳಿಸಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

9 / 10
ಕ್ರೀಡೆಯಲ್ಲಿ ಪದ್ಮ ಪ್ರಶಸ್ತಿ ವಿಜೇತರು: ರೋಹನ್ ಬೋಪಣ್ಣ (ಟೆನಿಸ್) ಕರ್ನಾಟಕ, ಜೋಷ್ನಾ ಚಿನಪ್ಪ (ಸ್ಕ್ವಾಷ್) ತಮಿಳುನಾಡು, ಉದಯ್ ವಿಶ್ವನಾಥ್ ದೇಶಪಾಂಡೆ (ಮಲ್ಲಕಂಬ) ಮಹಾರಾಷ್ಟ್ರ, ಗೌರವ್ ಖನ್ನಾ (ಪ್ಯಾರಾ ಬ್ಯಾಡ್ಮಿಂಟನ್) ಯುಪಿ, ಸತೇಂದ್ರ ಸಿಂಗ್ ಲೋಹಿಯಾ (ಈಜು) ಮಧ್ಯಪ್ರದೇಶ, ಪೂರ್ಣಿಮಾ ಮಹತೋ (ಬಿಲ್ಲುಗಾರಿಕೆ) ಜಾರ್ಖಂಡ್, ಹರ್ಬಿಂದರ್ ಸಿಂಗ್ (ಪ್ಯಾರಾಲಿಂಪಿಕ್ ಆರ್ಚರಿ) ದೆಹಲಿ.

10 / 10

Published On - 3:26 pm, Fri, 26 January 24

Follow us