- Kannada News Photo gallery Valmiki Jayanti 2024 : Inspirational and motivational quotes by Maharishi Valmiki Kannada News
Valmiki Jayanti 2024 : ಮಹರ್ಷಿ ವಾಲ್ಮೀಕಿಯ ಸ್ಫೂರ್ತಿದಾಯಕ ನುಡಿಮುತ್ತುಗಳು ಇಲ್ಲಿವೆ
ಇಂದು ಮಹಾನ್ ಋಷಿ ಕವಿ ಮಹರ್ಷಿ ವಾಲ್ಮೀಕಿಯವರ ಜನ್ಮದಿನವಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ವಾಲ್ಮೀಕಿ ಜಯಂತಿಯನ್ನು ವಾರ್ಷಿಕವಾಗಿ ಹುಣ್ಣಿಮೆಯ ರಾತ್ರಿ ಅಥವಾ ಅಶ್ವಿನ್ ತಿಂಗಳ ಪೂರ್ಣಿಮೆಯಂದು ಆಚರಿಸಲಾಗುತ್ತದೆ. ಈ ವರ್ಷ ಅಕ್ಟೋಬರ್ 17 ರಂದು ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತಿದೆ. ವಾಲ್ಮೀಕಿಯು ಗುರುವಾಗಿ ಹಲವಾರು ಕವಿಗಳು ಹಾಗೂ ಸಾಹಿತಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಒಂದೊಂದು ನುಡಿಮುತ್ತುಗಳು ಜೀವನ ಸಂದೇಶವನ್ನು ಸಾರುತ್ತದೆ. ಹಾಗಾದ್ರೆ ವಾಲ್ಮೀಕಿಯವರ ಸ್ಫೂರ್ತಿದಾಯಕ ನುಡಿಮುತ್ತುಗಳು ಇಲ್ಲಿವೆ.
Updated on:Oct 17, 2024 | 9:16 AM
Share

ಜೀವನದಲ್ಲಿ ಸುಖ ಮತ್ತು ದುಃಖಗಳು ಪರ್ಯಾಯವಾಗಿರುತ್ತವೆ. ನಿರಂತರವಾಗಿ ಸಂತೋಷದಿಂದಿರಲು ಎಂದಿಗೂ ಸಾಧ್ಯವಿಲ್ಲ.

ಬೆನ್ನಿನ ಹಿಂದೆ ಆಡಿಕೊಳ್ಳುವ ಜನರ ಬಗ್ಗೆ ತಲೆಕೆಡಿಸಿಕೊಳ್ಳಬೇಡ, ಏಕೆಂದರೆ ನಿನ್ನ ಬೆನ್ನು ನಿನಗೆ ಕಾಣುವುದಿಲ್ಲ, ಎದುರಾದರೆ ಎದುರಿಸು ಗೆದ್ದೇ ಗೆಲ್ಲುವೆ.

ಉತ್ಸಾಹಕ್ಕಿಂತ ಹೆಚ್ಚಿನ ಶಕ್ತಿ ಬೇರೊಂದಿಲ್ಲ. ಉತ್ಸಾಹಿಗಳಿಗೆ ಈ ಜಗತ್ತಿನಲ್ಲಿ ಸಾಧಿಸಲಾಗದ್ದು ಯಾವುದೂ ಇಲ್ಲ.

ಧರ್ಮದಿಂದ ಸಂಪತ್ತು ಚಿಗುರುತ್ತದೆ, ಧರ್ಮದಿಂದ ಸಂತೋಷ ಉಕ್ಕುತ್ತದೆ ಮತ್ತು ಧರ್ಮದಿಂದ ಎಲ್ಲವನ್ನೂ ಪಡೆಯುತ್ತೇವೆ. ಧರ್ಮವು ಈ ಪ್ರಪಂಚದ ಸಾರವಾಗಿದೆ.

ನೀವು ಜ್ಞಾನ, ಹಣ, ಪ್ರತಿಷ್ಠೆ, ಶಕ್ತಿಯನ್ನು ಸಂಗ್ರಹಿಸಬಹುದು, ಆದರೆ ಇದೆಲ್ಲದರ ನಡುವೆ ಪ್ರೀತಿಯನ್ನು ಕಳೆದುಕೊಂಡಿದರೆ ನೀವು ನಿಜವಾದ ಬದುಕನ್ನೇ ಕಳೆದುಕೊಂಡಿದ್ದೀರಿ ಎಂದರ್ಥ.
Published On - 9:11 am, Thu, 17 October 24
Related Photo Gallery
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'
ಅಲಂಕಾರಕ್ಕೆಂದು ತಂದಿದ್ದ ಹೂವಿನ ಕುಂಡಗಳನ್ನು ಕದ್ದೊಯ್ದ ಜನ
ನ್ಯಾಯಾಲಯದಲ್ಲಿ ವಿಚ್ಛೇದಿತ ಪತಿಯನ್ನು ಹಿಗ್ಗಾಮುಗ್ಗ ಥಳಿಸಿದ ಮಹಿಳೆ
ಟರ್ನಿಂಗ್ನಲ್ಲಿ ಕಂಟ್ರೋಲ್ ಸಿಗದೆ ಮರಕ್ಕೆ ಡಿಕ್ಕಿ ಹೊಡೆದ ಕಾರು
ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಪೈರಸಿ ಮಾಡಿ ಸಿಕ್ಕಿ ಬಿದ್ರೆ ಇದೆ ಮಾರಿಹಬ್ಬ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ




