ಲಾವಣ್ಯ ತ್ರಿಪಾಟಿ ಜೊತೆ ವರುಣ್ ತೇಜ್ ಮದುವೆ? ಎಳೆಎಳೆಯಾಗಿ ವಿವರಿಸಿದ ನಟಿ
Lavanya Tripathi: ಇತ್ತೀಚೆಗೆ ಮಾತನಾಡಿದ್ದ ವರುಣ್ ತೇಜ್ ತಂದೆ ನಾಗ ಬಾಬು ಅವರು ಸಿಹಿ ಸುದ್ದಿ ನೀಡಿದ್ದರು. ಶೀಘ್ರವೇ ವರುಣ್ ತೇಜ್ ಮದುವೆ ಘೋಷಣೆ ಮಾಡುವ ಬಗ್ಗೆ ಅವರು ಮಾಹಿತಿ ನೀಡಿದ್ದರು.
1 / 5
ನಟಿ ಲಾವಣ್ಯ ಹಾಗೂ ವರುಣ್ ತೇಜ್ ಮಧ್ಯೆ ಏನೋ ನಡೆಯುತ್ತಿದೆ ಎನ್ನುವುದು ಈ ಮೊದಲಿನಿಂದಲೂ ಚರ್ಚೆಯಲ್ಲಿರುವ ವಿಚಾರ. ಆದರೆ, ಡೇಟಿಂಗ್ ವಿಚಾರವನ್ನು ಇವರು ಅಧಿಕೃತ ಮಾಡಿಲ್ಲ.
2 / 5
ಇತ್ತೀಚೆಗೆ ಮಾತನಾಡಿದ್ದ ವರುಣ್ ತೇಜ್ ತಂದೆ ನಾಗ ಬಾಬು ಅವರು ಸಿಹಿ ಸುದ್ದಿ ನೀಡಿದ್ದರು. ಶೀಘ್ರವೇ ವರುಣ್ ತೇಜ್ ಮದುವೆ ಘೋಷಣೆ ಮಾಡುವ ಬಗ್ಗೆ ಅವರು ಮಾಹಿತಿ ನೀಡಿದ್ದರು.
3 / 5
ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಲಾವಣ್ಯ ಹಾಗೂ ವರುಣ್ ತೇಜ್ ಮದುವೆ ನಡೆಯುತ್ತಿದೆ ಎನ್ನುವ ಮಾತು ಕೇಳಿ ಬಂದಿದೆ. ಈ ಬಗ್ಗೆ ಲಾವಣ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ.
4 / 5
‘ಮದುವೆ ಅನ್ನೋದು ನಿಜಕ್ಕೂ ಸುಂದರ. ಅದು ಸರಿಯಾದ ವ್ಯಕ್ತಿಯೊಂದಿಗೆ ಆದರೆ ಮಾತ್ರ ಎಂಬುದು ನನ್ನ ಭಾವನೆ. ಮದುವೆ ಆಗುವ ಕಾಲಕ್ಕೆ ಆಗುತ್ತದೆ. ಹೀಗೆಯೇ ಮದುವೆ ಆಗಬೇಕು ಎಂದು ಕನಸು ಕಂಡವನು ನಾನಲ್ಲ’ ಎಂದಿದ್ದಾರೆ ಲಾವಣ್ಯ.
5 / 5
ಲಾವಣ್ಯ ಹಾಗೂ ವರುಣ್ ತೇಜ್ ಅವರು ‘ಮಿನಿಸ್ಟರ್’, ‘ರಾಯಾಭಾರಿ’ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಸೆಟ್ನಲ್ಲಿ ಇವರ ಮಧ್ಯೆ ಪ್ರೀತಿ ಮೂಡಿದೆ ಎನ್ನಲಾಗುತ್ತಿದೆ.