
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಜಿಟಿ ನಡುವಿನ ಐಪಿಎಲ್ ಫೈನಲ್ ಪಂದ್ಯದಲ್ಲಿ ಧೋನಿ ಪಡೆ ಗೆದ್ದಿದೆ. ಎರಡು ಎಸೆತಗಳಲ್ಲಿ 10 ರನ್ ಬಾರಿಸಿ ಜಡೇಜಾ ಗೆಲುವಿನ ರುವಾರಿ ಆದರು.

ನಿರ್ದೇಶಕ, ನಯನತಾರಾ ಪತಿ ವಿಘ್ನೇಶ್ ಶಿವನ್ ಅವರು ಈ ಗೆಲುವನ್ನು ಸಂಭ್ರಮಿಸಿದ್ದಾರೆ. ಸ್ಟೇಡಿಯಂಗೆ ತೆರಳಿದ್ದ ಅವರು ಚೆನ್ನೈನ ಬೆಂಬಲಿಸಿದ್ದಾರೆ.

ಚೆನ್ನೈ ಗೆದ್ದ ಬಳಿಕ ಧೋನಿ ಪತ್ನಿ ಸಾಕ್ಷಿ ಜೊತೆ ವಿಘ್ನೇಶ್ ಶಿವನ್ ಪೋಸ್ ನೀಡಿದ್ದಾರೆ. ಈ ಫೋಟೋ ಅನ್ನು ಅವರು ಹಂಚಿಕೊಂಡಿದ್ದಾರೆ.

ವಿಘ್ನೇಶ್ ಶಿವನ್ ಜೊತೆ ನಯನತಾರಾ ಪಂದ್ಯ ವೀಕ್ಷಣೆಗೆ ಬಂದಿರಲಿಲ್ಲ. ಈ ಮೊದಲು ಅವರು ಪತಿ ಜೊತೆ ಕ್ರಿಕೆಟ್ ವೀಕ್ಷಿಸಿದ್ದರು.

ವಿಘ್ನೇಶ್ ಶಿವನ್ ಅವರು ಅಜಿತ್ ಕುಮಾರ್ ಮುಂದಿನ ಚಿತ್ರಕ್ಕೆ ನಿರ್ದೇಶನ ಮಾಡಬೇಕಿತ್ತು. ಆದರೆ, ಕಥೆಯಲ್ಲಿ ಕೆಲ ಬದಲಾವಣೆ ಸೂಚಿಸಿದ್ದರಿಂದ ವಿಘ್ನೇಶ್ ಹಿಂದೆ ಸರಿದರು.