
ರೇಯಾನ್: ಭಾರೀ ಮಳೆಯ ಸಂದರ್ಭದಲ್ಲಿ ನೀವು ರೇಯನ್ ಫ್ಯಾಬ್ರಿಕ್ ಬಟ್ಟೆಗಳನ್ನು ಧರಿಸುವುದು ಸೂಕ್ತ. ಅರೆ-ಸಂಶ್ಲೇಷಿತ ಬಟ್ಟೆಯಾದ ಇದು ತುಂಬಾನೇ ಹಗುರವಾಗಿರುತ್ತದೆ, ಜೊತೆಗೆ ಮಳೆ ನೀರು ತಾಕಿದರೆ ಬೇಗನೆ ಒಣಗುತ್ತದೆ. ಅಲ್ಲದೆ ಈ ಬಟ್ಟೆಗಳು ಚರ್ಮಕ್ಕೆ ಅಂಟಿ ಹಿಡಿದುಕೊಳ್ಳದ ಕಾರಣ, ಇದು ಚರ್ಮಕ್ಕೆ ಅಗತ್ಯವಾದ ಆಮ್ಲಜನಕವನ್ನು ಒದಗಿಸುವಲ್ಲಿ ಸಹಾಯ ಮಾಡಿ, ಚರ್ಮವನ್ನು ಆರೋಗ್ಯಕರವಾಗಿಡುತ್ತದೆ.

ಮಸ್ಲಿನ್: ಮಸ್ಲಿನ್ ಹತ್ತಿಗಿಂತಲೂ ಮೃದುವಾದ, ಸಡಿಲವಾದ ನೇಯ್ಗೆ ಬಟ್ಟೆಯಾಗಿದೆ. ಇದು ತನ್ನ ಹಗುರ ಮತ್ತು ಮೃದುವಾದ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. ಮಸ್ಲಿನ್ ಬಟ್ಟೆಗಳು ಉಸಿರಾಡುವಂತಿದ್ದು, ಮಳೆಗಾಲದಲ್ಲಿ ತೇವಾಂಶದಿಂದ ರಕ್ಷಿಸುತ್ತದೆ. ಅವು ಬೇಗನೆ ಒಣಗುತ್ತವೆ, ಆದ್ದರಿಂದ ಇದು ಮಳೆಗಾಲಕ್ಕೆ ಸೂಕ್ತವಾಗಿವೆ. ಅಲ್ಲದೆ ಮಸ್ಲಿನ್ ತುಂಬಾ ಹಗುರವಾದ ಬಟ್ಟೆಯಾಗಿದ್ದು, ಇದು ತುಂಬಾ ಆರಾಮದಾಯಕವಾಗಿದೆ.

ಕ್ರೇಪ್ ಬಟ್ಟೆ: ಕ್ರೇಪ್ ಫ್ಯಾಬ್ರಿಕ್ ಬಟ್ಟೆಗಳು ಕೂಡಾ ಮಳೆಗಾಲದಲ್ಲಿ ಧರಿಸಲು ಸೂಕ್ತವಾಗಿದೆ. ರೇಯಾನ್‌ನಂತೆ ಇದು ಕೂಡಾ ತುಂಬಾನೇ ಹಗುರವಾದ ಹಾಗೂ ಬಹು ಬೇಗನೆ ಒಣಗುವ ಬಟ್ಟೆಯಾಗಿದೆ. ಅಲ್ಲದೆ ಈ ಫ್ಯಾಬ್ರಿಕ್ ಬಟ್ಟೆ ಧರಿಸುವುದರಿಂದ ದೇಹ ಬೆಚ್ಚಗಾಗಿರುತ್ತದೆ.

ಪಾಲಿಯೆಸ್ಟರ್: ಪಾಲಿಯೆಸ್ಟರ್ ಒಂದು ಸಿಂಥೆಟಿಕ್ ಬಟ್ಟೆಯಾಗಿದ್ದು, ಇದು ತೇವಾಂಶವನ್ನು ಹಿಡಿದಿಟ್ಟುಕೊಳ್ಳುವುದಿಲ್ಲ. ಹಾಗಾಗಿ ಈ ಫ್ಯಾಬ್ರಿಕ್ ಮಳೆಗಾಲದಲ್ಲಿ ಧರಿಸಲು ತುಂಬಾನೇ ಸೂಕ್ತವಾಗಿದೆ. ತುಂಬಾನೇ ಹಗುರವಾದ ಈ ಬಟ್ಟೆಗಳು ಒದ್ದೆಯಾದರೆ ಬಹು ಬೇಗನೆ ಒಣಗುತ್ತವೆ.

ಲಿನಿನ್: ಲಿನಿನ್ ಫ್ಯಾಬ್ರಿಕ್ ಬಟ್ಟೆಗಳು ಮಳೆಗಾಲದಲ್ಲಿ ಧರಿಸಲು ಸೂಕ್ತವಾಗಿದೆ. ಈ ಬಟ್ಟೆ ತುಂಬಾನೇ ಹಗುರವಾಗಿದ್ದು, ಒದ್ದೆಯಾದರೆ ಇದು ಬಹು ಬೇಗನೆ ಒಣಗುತ್ತದೆ. ಅಲ್ಲದೆ ಈ ಬಟ್ಟೆ ದೇಹದ ಮೇಲೆ ಬೆವರು ಸಂಗ್ರಹವಾಗುವುದನ್ನು ತಡೆಯುತ್ತದೆ. ಆದ್ದರಿಂದ ಈ ಬಟ್ಟೆ ಮಳೆಗಾಲದಲ್ಲಿ ಧರಿಸಲು ತುಂಬಾನೇ ಸೂಕ್ತವಾಗಿದೆ.

ನೈಲಾನ್: ಮಳೆಗಾಲದಲ್ಲಿ ನೈಲಾನ್ ಫ್ಯಾಬ್ರಿಕ್ ಬಟ್ಟೆಗಳನ್ನು ಸಹ ಧರಿಸಬಹುದು. ಈ ಬಟ್ಟೆಗಳು ಹಗುರ ಮಾತ್ರವಲ್ಲದೆ, ಒದ್ದೆಯಾದರೆ ಬಹುಬೇಗನೆ ಒಣಗುತ್ತವೆ. ಹಾಗಾಗಿ ಈ ಫ್ಯಾಬ್ರಿಕ್ ಮಳೆಗಾಲದಲ್ಲಿ ಧರಿಸಲು ಸೂಕ್ತವಾಗಿದೆ. ಪಾಲಿಯೆಸ್ಟರ್‌ಗಿಂತಲೂ ಹೆಚ್ಚು ಬಾಳಿಕೆ ಬರುವ ಈ ಬಟ್ಟೆ ತುಂಬಾನೇ ಮೃದುವಾಗಿದೆ.

ಹತ್ತಿ ಬಟ್ಟೆ: ಹತ್ತಿ ಬಟ್ಟೆಯು ಸಹ ಮಳೆಗಾಲಕ್ಕೆ ಧರಿಸಲು ಅತ್ಯಂತ ಸೂಕ್ತವಾದ ಬಟ್ಟೆಯಾಗಿದೆ. ಈ ಫ್ಯಾಬ್ರಿಕ್ ಹಗುರವಾಗಿ ತುಂಬಾನೇ ಆರಾಮದಾಯಕವಾಗಿರುತ್ತವೆ. ಈ ಫ್ಯಾಬ್ರಿಕ್ ತೇವಾಂಶವನ್ನು ಚೆನ್ನಾಗಿ ಹೀರಿಕೊಳ್ಳುವ ಕಾರಣ, ಇದು ಒದ್ದೆಯಾದರೆ ಬಹು ಬೇಗನೆ ಒಣಗುತ್ತದೆ. ಆದ್ದರಿಂದ ಈ ಮಳೆಗಾಲದಲ್ಲಿ ಹತ್ತಿ ಫ್ಯಾಬ್ರಿಕ್ ಬಟ್ಟೆಗಳನ್ನು ಧರಿಸುವುದು ಸೂಕ್ತ.