- Kannada News Photo gallery WhatsApp gave a shock to these iPhone Android users on Diwali day Kannada Technology News
WhatsApp: ದೀಪಾವಳಿ ದಿನವೇ ಐಫೋನ್-ಆಂಡ್ರಾಯ್ಡ್ ಬಳಕೆದಾರರಿಗೆ ಶಾಕ್ ನೀಡಿದ ವಾಟ್ಸ್ಆ್ಯಪ್
ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ದೀಪಾವಳಿ ದಿನವೇ ಕೆಲ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಆಘಾತ ನೀಡಿದೆ. ಈ ಐಫೋನ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿ ಇಂದಿನಿಂದ ವಾಟ್ಸ್ಆ್ಯಪ್ ತನ್ನ ಕೆಲಸವನ್ನು ನಿಲ್ಲಿಸಲಿದೆ.
Updated on: Oct 24, 2022 | 3:08 PM

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ದೀಪಾವಳಿ ದಿನವೇ ಕೆಲ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಆಘಾತ ನೀಡಿದೆ. ಈ ಐಫೋನ್ (iPhone) ಮತ್ತು ಆಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿ ಇಂದಿನಿಂದ ವಾಟ್ಸ್ಆ್ಯಪ್ ತನ್ನ ಕೆಲಸವನ್ನು ನಿಲ್ಲಿಸಲಿದೆ.

ಅಕ್ಟೋಬರ್ 24 ಇಂದಿನಿಂದ ಕೆಲವು ಐಫೋನ್ ಮಾಡೆಲ್‌ಗಳಲ್ಲಿ ಹಾಗೂ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿ ಶಾಶ್ವತವಾಗಿ ವಾಟ್ಸ್ಆ್ಯಪ್ ಅಪ್ಲಿಕೇಶನ್ ಸ್ಥಗಿತವಾಗಲಿದೆ. ಆ್ಯಪಲ್‌ನ ಇತ್ತೀಚಿನ ಬೆಂಬಲ ನವೀಕರಣದ ಪ್ರಕಾರ, ಇದೇ ಅಕ್ಟೋಬರ್ 24 ರಿಂದ ಕೆಲವು ಐಫೋನ್ ಮಾಡೆಲ್‌ಗಳಲ್ಲಿ ಶಾಶ್ವತವಾಗಿ ವಾಟ್ಸ್ಆ್ಯಪ್ ಅಪ್ಲಿಕೇಶನ್ ಇನ್ನು ಮುಂದೆ ಬೆಂಬಲಿಸುವುದಿಲ್ಲ ಎಂದು ಸೂಚಿಸಿತ್ತು.

ಐಒಎಸ್ 10 ಅಥವಾ ಐಒಎಸ್ 11 ಆವೃತ್ತಿಗಳಲ್ಲಿ ಆ್ಯಪ್ ಚಾಲನೆ ಮಾಡುವ ಐಫೋನ್ ಬಳಕೆದಾರರಿಗೆ ವಾಟ್ಸ್ಆ್ಯಪ್ ಈ ಹಿಂದೆಯೇ ಎಚ್ಚರಿಕೆ ಸಂದೇಶ ರವಾನಿಸಿತ್ತು. ಇದರ ಜೊತೆಗೆ ಆಂಡ್ರಾಯ್ಡ್ 4.1 ಮತ್ತು ಅದಕ್ಕಿಂತ ಹಳೆಯ ಆವೃತ್ತಿಗಳಲ್ಲಿ ವಾಟ್ಸ್ಆ್ಯಪ್ ಇನ್ನುಂದೆ ಕಾರ್ಯನಿರ್ವಹಿಸಲ್ಲ.

ಕೆಲ ತಿಂಗಳ ಹಿಂದೆ ವಾಟ್ಸ್ಆ್ಯಪ್, ಶೀಘ್ರದಲ್ಲೇ ನಿಮ್ಮ ಫೋನ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ ಎಂದು ತಿಳಿಸಿತ್ತು. ಹೀಗಾಗಿ ವಾಟ್ಸ್ಆ್ಯಪ್ ಅಪ್ಲಿಕೇಶನ್ ಅನ್ನು ಬಳಸುವುದನ್ನು ಮುಂದುವರಿಸಲು ಬಳಕೆದಾರರು ತಮ್ಮ ಐಫೋನ್‌ಗಳನ್ನು ಅಥವಾ ಆಂಡ್ರಾಯ್ಡ್ ಫೋನ್ಗಳನ್ನು ನವೀಕರಿಸಬೇಕಾಗುತ್ತದೆ ಎಂದು ಸಂದೇಶ ಕಳುಹಿಸಿತ್ತು.

ಇಂದಿನಿಂದ ಐಫೋನ್ 5 ಮತ್ತು ಐಫೋನ್ 5C ಫೋನ್‌ಗಳಲ್ಲಿ ವಾಟ್ಸ್ಆ್ಯಪ್ ಸ್ಥಗಿತವಾಗಲಿದೆ. ಆ್ಯಪಲ್ ಐಓಎಸ್ 12 ಅಥವಾ ಅದಕ್ಕಿಂತ ಮುಂದಿನ ಐಓಎಸ್ ಹೊಂದಿರುವ ಐಫೋನ್‌ಗಳಲ್ಲಿ ಯಾವುದೇ ಅಡೆ ತಡೆಯಿಲ್ಲದೆ ವಾಟ್ಸ್ಆ್ಯಪ್ ಕಾರ್ಯನಿರ್ವಹಿಸುತ್ತದೆ.

ಐಒಎಸ್ 10 ಮತ್ತು ಐಒಎಸ್ 11 ಐಓಎಸ್ ಹಳೆಯ ಆಪರೇಟಿಂಗ್ ಸಿಸ್ಟಂಗಳಾಗಿದ್ದು, ಹೊಸ ಸಾಫ್ಟ್‌ವೇರ್ ಅಪ್‌ಡೇಟ್ ಅನ್ನು ಸ್ವೀಕರಿಸಿರಬಹುದು. ಅದಕ್ಕಾಗಿ ನೀವು ಐಫೋನ್ನಲ್ಲಿ ಸೆಟ್ಟಿಂಗ್ಗೆ ತೆರಳು ಜನರೇಲ್ ಆಯ್ಕೆ ಮಾಡಬೇಕು. ನಂತರ ಇತ್ತೀಚಿನ iOS ಆವೃತ್ತಿಯನ್ನು ಪಡೆಯಲು ಸಾಫ್ಟ್‌ವೇರ್ ಅಪ್‌ಡೇಟ್ ಆಯ್ಕೆ ಮೇಲೆ ಟ್ಯಾಪ್ ಮಾಡಿ.

ಇದರ ಜೊತೆಗೆ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಹೊಸ ಆಯ್ಕೆಯೊಂದನ್ನು ನೀಡಿದ್ದು ಚಾಟ್ ಲಿಸ್ಟ್ನಲ್ಲಿ ಸ್ಟೇಟಸ್ ನೋಡಬಹುದಾಗಿದೆ. ಅಂದರೆ ಈಗಾಗಲೇ ಇನ್ಸ್ಟಾಗ್ರಾಮ್ನಲ್ಲಿ ಇರುವ ರೀತಿ ನಿಮ್ಮ ಚಾಟ್ ಲಿಸ್ಟ್ನಲ್ಲಿ ಸ್ನೇಹಿತರು ಹಂಚಿಕೊಂಡ ಸ್ಟೇಟಸ್ ನೋಡಬಹುದು.




