Plastic Surgery: ಪ್ಲಾಸ್ಟಿಕ್ ಸರ್ಜರಿಯಲ್ಲಿ ಪ್ಲಾಸ್ಟಿಕ್ ಇಲ್ಲ; ಹಾಗಾದರೆ ಅದಕ್ಕೆ ಈ ಹೆಸರನ್ನು ಏಕೆ ಇಡಲಾಗಿದೆ?!

| Updated By: ganapathi bhat

Updated on: Mar 10, 2022 | 11:38 AM

'ಪ್ಲಾಸ್ಟಿಕ್ ಸರ್ಜರಿ' ಎಂಬ ಪದವನ್ನು ಮೊದಲು 1837 ರಲ್ಲಿ ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್‌ನಲ್ಲಿ ಬಳಸಲಾಯಿತು. ಈ ಸರ್ಜರಿಯಲ್ಲಿ ಪ್ಲಾಸ್ಟಿಕ್ ಎಂಬ ಪದವನ್ನು ಸೇರಿಸಲು ಕಾರಣವೇನು ಎಂದು ತಿಳಿಯಿರಿ..

1 / 5
ಪ್ಲಾಸ್ಟಿಕ್ ಸರ್ಜರಿ ಹೆಸರು ನೀವು ಕೇಳಿರಲೇಬೇಕು. ಆದರೆ ಸರ್ಜರಿ ಸಮಯದಲ್ಲಿ ಪ್ಲಾಸ್ಟಿಕ್ ಬಳಕೆ ಇಲ್ಲದಿರುವಾಗ ಇದನ್ನು ಹೀಗೇಕೆ ಕರೆಯುತ್ತಾರೆ ಎಂದು ಎಂದಾದರೂ ನೀವು ಯೋಚಿಸಿದ್ದೀರಾ? ಈ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ, ತಿಳೀಯಿರಿ. ಇದು ಸ್ತನ ಇಂಪ್ಲಾಂಟ್‌ಗಳೊಂದಿಗೆ ಸಂಪರ್ಕವನ್ನು ಹೊಂದಿದೆ. 'ಪ್ಲಾಸ್ಟಿಕ್ ಸರ್ಜರಿ' ಎಂಬ ಪದವನ್ನು ಮೊದಲು 1837 ರಲ್ಲಿ ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್‌ನಲ್ಲಿ ಬಳಸಲಾಯಿತು. ಈ ಸರ್ಜರಿಯಲ್ಲಿ ಪ್ಲಾಸ್ಟಿಕ್ ಎಂಬ ಪದವನ್ನು ಸೇರಿಸಲು ಕಾರಣವೇನು ಎಂದು ತಿಳಿಯಿರಿ..

2 / 5
ಒಂದು ವರದಿಯಲ್ಲಿ, ಓಹಿಯೋ ಮೂಲದ ಪ್ಲಾಸ್ಟಿಕ್ ಸರ್ಜನ್ ಡಾ. ಬ್ರಿಯಾನ್ ಡೋರ್ನರ್ ಅವರು ಸ್ತನ ಕಸಿಗಳನ್ನು ಪ್ಲಾಸ್ಟಿಕ್ ಸರ್ಜರಿಯೊಂದಿಗೆ ಸಂಯೋಜಿಸಲಾಗಿದೆ ಎಂದು ಹೇಳುತ್ತಾರೆ. ಸ್ತನ ಕಸಿ ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದೆ ಎಂದು ಅವರು ತಿಳಿಸುತ್ತಾರೆ. ಆದ್ದರಿಂದ ಅದನ್ನು ಹಾಕುವ ಶಸ್ತ್ರಚಿಕಿತ್ಸೆಯನ್ನು ಪ್ಲಾಸ್ಟಿಕ್ ಸರ್ಜರಿ ಎಂದು ಕರೆಯಲಾಗುತ್ತದೆ. ಆದರೆ ಪ್ಲಾಸ್ಟಿಕ್ ಸರ್ಜರಿಯನ್ನು ಹಾಗೆ ಕರೆಯಲು ನಿಜವಾದ ಕಾರಣ ಬೇರೆಯದ್ದೇ ಆಗಿದೆ.

3 / 5
ಸ್ತನ ಇಂಪ್ಲಾಂಟ್‌ಗಳನ್ನು ಸಿಲಿಕೋನ್ ಶೆಲ್‌ಗಳಿಂದ ತಯಾರಿಸಲಾಗುತ್ತದೆ. ಇದು ಸಿಲಿಕೋನ್ ಜೆಲ್‌ನಿಂದ ತುಂಬಿರುತ್ತದೆ ಎಂದು ಡಾ. ಬ್ರಿಯಾನ್ ಡೋರ್ನರ್ ಹೇಳುತ್ತಾರೆ. ಆಶ್ಚರ್ಯಕರವಾಗಿ, ಸಿಲಿಕೋನ್ ಕೂಡ ಒಂದು ರೀತಿಯ ಪ್ಲಾಸ್ಟಿಕ್ ಆಗಿದೆ. ರಬ್ಬರ್ ಮತ್ತು ಪ್ಲಾಸ್ಟಿಕ್ ಮಿಶ್ರಣದಿಂದ ಇದನ್ನು ತಯಾರಿಸಲಾಗುತ್ತದೆ. ಆದರೆ ಶಸ್ತ್ರಚಿಕಿತ್ಸೆಯಲ್ಲಿ ಪ್ಲಾಸ್ಟಿಕ್ ಪದದ ಬಳಕೆಯ ಹಿಂದಿನ ನಿಖರವಾದ ಕಾರಣ ದಶಕಗಳಷ್ಟು ಹಳೆಯದು. ಅಂದರೆ ಇದಕ್ಕೂ ಮೊದಲಿನದು.

4 / 5
ಪ್ಲಾಸ್ಟಿಕ್ ಎಂಬುದು ಲ್ಯಾಟಿನ್ ಪದ. ಪ್ಲಾಸ್ಟಿಕಸ್ ನಿಂದ ಅದು ಬಂದಿದೆ ಎಂದು ವರದಿ ಹೇಳುತ್ತದೆ. ಯಾವುದನ್ನಾದರೂ ಸರಿಹೊಂದುವಂತೆ ಗಾತ್ರವನ್ನು ಬದಲಾಯಿಸುವುದು ಎಂದರೆ ಪ್ಲಾಸ್ಟಿಕ್ ಎಂದರ್ಥ. ವಿವಿಧ ರೂಪಗಳಲ್ಲಿ ರೂಪಿಸಬಹುದಾದ ವಸ್ತು ಇದು. 17 ನೇ ಶತಮಾನದಲ್ಲಿ, ಈ ಪದವನ್ನು ಹೆಚ್ಚು ಬಳಸಲು ಆರಂಭಿಸಲಾಯಿತು.

5 / 5
ಈ ರೀತಿಯಾಗಿ ಮಾನವ ದೇಹದ ಯಾವುದೇ ಭಾಗವು ಶಸ್ತ್ರಚಿಕಿತ್ಸೆಯಿಂದ ರೂಪುಗೊಳ್ಳುತ್ತದೆ, ಆದ್ದರಿಂದ ಇದನ್ನು ಪ್ಲಾಸ್ಟಿಕ್ ಸರ್ಜರಿ ಎಂದು ಕರೆಯಲಾಯಿತು. ಪ್ರಸ್ತುತ ದೇಹಕ್ಕೆ ಸುಂದರವಾದ ಮತ್ತು ಸರಿಯಾದ ಆಕಾರವನ್ನು ನೀಡಲು ಪ್ಲಾಸ್ಟಿಕ್ ಸರ್ಜರಿ ಮಾಡುವವರ ಸಂಖ್ಯೆ ಪ್ರಪಂಚದಾದ್ಯಂತ ಹೆಚ್ಚುತ್ತಿದೆ. ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವಲ್ಲಿ ಮಹಿಳೆಯರಷ್ಟೇ ಅಲ್ಲ, ಪುರುಷರ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ತಿಳಿದುಬಂದಿದೆ.

Published On - 11:37 am, Thu, 10 March 22