ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದ ಟಾಪ್ ನಟಿ
ಹಲವು ಸ್ಟಾರ್ ನಟರೊಟ್ಟಿಗೆ ಶ್ರೀಲೀಲಾ ನಟಿಸುತ್ತಿದ್ದಾರೆ. ಒಂದರಹಿಂದೊಂದು ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ.
ಕನ್ನಡ ಸಿನಿಮಾಗಳ ಮೂಲಕ ಬೆಳೆದ ಶ್ರೀಲೀಲಾ ಈಗ ತೆಲುಗು ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿದ್ದಾರೆ.
ಇನ್ನು ಮುಂದೆ ಶ್ರೀಲೀಲಾ ಕನ್ನಡ ಸಿನಿಮಾಗಳಲ್ಲಿ ನಟಿಸುವುದಿಲ್ಲವೇ ಎಂಬ ಅನುಮಾನ ಅಭಿಮಾನಿಗಳದ್ದು.
ಸದ್ಯಕ್ಕಂತೂ ಶ್ರೀಲೀಲಾ ಕನ್ನಡ ಸಿನಿಮಾಗಳಲ್ಲಿ ನಟಿಸುವುದಿಲ್ಲ ಅನ್ನಿಸುತ್ತದೆ, ಅಷ್ಟು ತೆಲುಗು ಸಿನಿಮಾಗಳು ಅವರ ಕೈಯಲ್ಲಿವೆ.
ಶ್ರಿಲೀಲಾ ಮುಂದಿನ ಒಂದು ವರ್ಷ ಪೂರ್ಣವಾಗಿ ತೆಲುಗು ಸಿನಿಮಾಗಳಲ್ಲಿಯೇ ಕಳೆಯಬೇಕಿದೆ ಅಷ್ಟು ಸಿನಿಮಾಗಳು ಅವರ ಬಳಿ ಇವೆ.
ತೆಲುಗಿನಲ್ಲಿ ಸಖತ್ ಮಿಂಚುತ್ತಿರುವ ಶ್ರೀಲೀಲಾ ಆಗಾಗ್ಗೆ ಆದರೂ ಕನ್ನಡ ಸಿನಿಮಾಗಳಲ್ಲಿ ನಟಿಸಬೇಕು ಎಂಬುದು ಅಭಿಮಾನಿಗಳ ಆಸೆ.