ಲಾಲ್ ಬಾಗ್ನಲ್ಲಿ ದೈತ್ಯ ಲಾಂಟಾನ ಆನೆಗಳ ಹಿಂಡು; ಮಾರ್ಚ್ 3ರ ವರೆಗೆ ಮಾತ್ರ ಪ್ರದರ್ಶನ
ನಮ್ಮ ಬೆಂಗಳೂರಿನ ಸಸ್ಯಕಾಶಿ ಲಾಲ್ ಬಾಗ್ಗೆ ಆನೆಗಳ ಹಿಂಡು ವಿಸಿಟ್ ಮಾಡಿದೆ. ದಿ ರಿಯಲ್ ಎಲಿಫೆಂಟ್ ಕಲೆಕ್ಟೀವ್ ವತಿಯಿಂದ ಹಾಗು ಬಿ.ಆರ್. ಹಿಲ್ಸ್, ತಮಿಳನಾಡು ಬಾಯೋ ರಿಸರ್ವ ಪ್ರದೇಶದಿಂದ ಲಾಂಟಾನಾ ಕಮಾರದಿಂದ ತಯಾರಿಸಿರುವ ಆನೆಗಳ ಪ್ರತಿಕೃತಿ ಪ್ರದರ್ಶನ ನಡೆಯುತ್ತಿದೆ. ಬುಡಕಟ್ಟು ಜನಾಂಗದ ಪರಿಣಿತರಿಂದ ಕಳೆ ಗಿಡವಾದ ಲಾಂಟಾನಾ ಕಮಾರ ಕಾಂಡದಿಂದ ಅರಳಿದ ಪರಿಸರ ಸ್ನೇಹಿ 60 ಬೃಹತ್ ಆನೆಗಳ ಪ್ರತಿರೂಪಗಳ ಪ್ರದರ್ಶನ ನಡೆಯುತ್ತಿದೆ.
1 / 7
ನಿಮಗೆ ಆನೆ ಅಂದ್ರೆ ಇಷ್ಟಾನಾ. ಹಾಗಾದ್ರೆ ಆನೆಗಳನ್ನ ನೋಡಬೇಕಾ. ಆನೆಗಳ ಜೊತೆಗೆ ಆಟ ಆಡಿ, ಫೋಟೋ ತೊಗೋ ಬೇಕಾ? ಹಾಗಿದ್ರೆ ಆನೆಗಳನ್ನ ನೋಡೋಕೆ ಬಂಡಿಪುರ ಆನೆ ಪಾರ್ಕ್ ಅಥವಾ ತೈಲಾಂಡ್ ಗೆ ಹೋಗೊದೇ ಬೇಡ.
2 / 7
ನಮ್ಮ ಬೆಂಗಳೂರಿನ ಸಸ್ಯಕಾಶಿ ತೋಟಕ್ಕೆ ಒಂದು ವಿಸಿಟ್ ಕೊಟ್ರೆ ಸಾಕು. ನೀವು ಬೆರಗಾಗೋದು ಪಕ್ಕಾ. ಜೀವಂತ ಆನೆಗಳಂತೆ ಪೋಸ್ ಕೊಡುತ್ತಿರುವ ಆನೆಗಳ ಪ್ರತಿಕೃತಿಗಳು ಕಣ್ಣನ್ನು ಸೆಳೆಯುತ್ತವೆ. ಆನೆಗಳ ನೋಡಿ ಮಕ್ಕಳು ಖುಷಿಪಟ್ಟು ಆಡುತ್ತಾರೆ.
3 / 7
ಸಿಲಿಕಾನ್ ಸಿಟಿಯ ಸಸ್ಯಕಾಶಿ ಲಾಲ್ ಬಾಗ್ನಲ್ಲಿ ಇತ್ತೀಚೆಗಷ್ಟೇ 215ನೇ ಫಲಪುಷ್ಪ ಪ್ರದರ್ಶನ ಭರ್ಜರಿಯಾಗಿ ನಡೆಯಿತು. ಫಲಪುಷ್ಪ ಪ್ರದರ್ಶನ ನಂತರ ಬೆಂಗಳೂರಿನ ಸಸ್ಯಕಾಸಿ ತೋಟದಲ್ಲಿ ಆನೆಗಳ ಪ್ರತಿಕೃತಿಗಳ ಘರ್ಜನೆ ಶುರುವಾಗಿದೆ.
4 / 7
ದಿ ರಿಯಲ್ ಎಲಿಫೆಂಟ್ ಕಲೆಕ್ಟೀವ್ ವತಿಯಿಂದ ಹಾಗು ಬಿ.ಆರ್. ಹಿಲ್ಸ್, ತಮಿಳನಾಡು ಬಾಯೋ ರಿಸರ್ವ ಪ್ರದೇಶದಿಂದ ಲಾಂಟಾನಾ ಕಮಾರದಿಂದ ತಯಾರಿಸಿರುವ ಆನೆಗಳ ಪ್ರತಿಕೃತಿ ಪ್ರದರ್ಶನ ನಡೆಯುತ್ತಿದೆ. ಈ ಆನೆಗಳು ಜೀವಂತ ಆನೆಗಳ ಗಾತ್ರವಿದೆ. ಬುಡಕಟ್ಟು ಜನಾಂಗದ ಪರಿಣಿತರಿಂದ ಕಳೆ ಗಿಡವಾದ ಲಾಂಟಾನಾ ಕಮಾರ ಕಾಂಡದಿಂದ ಅರಳಿದ ಪರಿಸರ ಸ್ನೇಹಿ 60 ಬೃಹತ್ ಆನೆಗಳ ಪ್ರತಿರೂಪಗಳ ಪ್ರದರ್ಶನ ನಡೆಯುತ್ತಿದೆ.
5 / 7
ಮಾರ್ಚ್ 3ರ ವರೆಗೂ ಆನೆಗಳ ಪ್ರತಿಕೃತಿ ಪ್ರದರ್ಶನ ನಡೆಯಲಿದೆ. ಇನ್ನೂ ಬೆಳ್ಳಂ ಬೆಳ್ಳಗೆ ಲಾಲ್ ಬಾಗ್ಗೆ ವಾಕಿಂಗ್ ಬಂದ ಮಂದಿ ಜೀವಂತ ಆನೆಗಳನ್ನು ನೋಡಿದಂತೆ ಭಾಸವಾಗ್ತಿದೆ ಎಂದು ಖುಷಿ ಪಡುತ್ತಿದ್ದಾರೆ. ಅಷ್ಟೆ ಅಲ್ಲದೆ ವೀಕೆಂಡ್ನಲ್ಲಿ ತಮ್ಮ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆಗೆ ಬಂದು ಲಾಂಟಾನಾ ಆನೆಗಳನ್ನು ಕಂಡು ಖುಷ್ ಆಗಿದ್ದಾರೆ.
6 / 7
ಒಂದು ಕಡೆ ಮುಗ್ದ ಮಕ್ಕಳು ಗಜ ಪ್ರತಿಕೃತಿಗಳ ಜೊತೆ ಆಟ ಆಡಿಕೊಂಡು ಸಂತೋಷ ಪಡುತ್ತಿದ್ರೆ, ಇನ್ನೊಂದು ಕಡೆ ಯುವಕ ಯುವತಿಯರು ಆನೆಗಳ ಜೊತೆ ಸೆಲ್ಫಿ, ರೀಲ್ಸ್ ಮಾಡಿಕೊಂಡು ಎಂಜಾಯ್ ಮಾಡ್ತಿದ್ದಾರೆ.
7 / 7
ಒಟ್ಟಿನಲ್ಲಿ ಲ್ಯಾಂಟಾನಾ ಆನೆಗಳ ಪ್ರತಿಕೃತಿಗಳು ಕೇವಲ ಒಂದು ತಿಂಗಳ ಕಾಲ ಅಷ್ಟೆ ಇರಲಿದ್ದು, ಜನರು ಬಂದು ಈ ಆನೆಗಳ ಕಾಣ್ತುಂಬಿಕೊಳ್ಳಬಹುದಾಗಿದೆ. ಆದ್ರೆ ಜನರು ಸದಾ ಕಾಲ ಲ್ಯಾಂಟಾನಾ ಆನೆಗಳು ಲಾಲ್ ಬಾಗ್ನಲ್ಲೇ ಇದ್ರೆ ತುಂಬಾ ಚನ್ನಾಗಿರುತ್ತೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.